ಮುಂಡಗೋಡು: ದನದ ಮಾಂಸ ಮಾರುತ್ತಿದಾಗ ಪೋಲೀಸರು ಹಠಾತ್ ದಾಳಿ ನಡೆಸಿ ಆರೋಪಿತರನ್ನು ಹಾಗೂ 30 ಕೆಜಿ ದನದ ಮಾಂಸವನ್ನು ವಶಕ್ಕೆ ಪಡೆದ ಘಟನೆ ಮುಂಡಗೋಡ ಪಟ್ಟಣದಲ್ಲಿ ನಡೆದಿದೆ.
ಆರೋಪಿತರನ್ನು ಮುಂಡಗೋಡಿನ ಮಕ್ಬೂಲ್ ಅಹ್ಮದ್, ಮಹಮದ್ ಜಯಾನ್ ಎಂದು ಹೇಳಲಾಗಿದ್ದು, ಇವರು ಜಾನುವಾರುಗಳನ್ನು ವಧಿಸಿ ಮಾಂಸ ತಂದು ಮಾರುತ್ತಿದ್ದಾಗ ಪೋಲೀಸರು ದಾಳಿ ನಡೆಸಿದ್ದಾರೆ.
ಮುಂಡಗೋಡು ಪೋಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.