ಶಿರಸಿ: ಇಲ್ಲಿನ ವಿನಾಯಕ ಕಾಲೋನಿಯ ನಿವಾಸಿ ರಾಮಚಂದ್ರ ಗಣಪತಿ ಅಕದಾಸ (89) ಅವರು ಜ.23 ರಂದು ನಿಧನರಾಗಿದ್ದು, ಅವರು ಪತ್ನಿ ಇಬ್ಬರು ಪುತ್ರರು ಓರ್ವ ಪುತ್ರಿ ಹಾಗೂ ಬಂಧು ಬಳಗ ಅಗಲಿದ್ದಾರೆ.
ಅವರು ಶಿರಸಿಯ ದಿ ತೋಟಗಾರ್ಸ್ ರೂರಲ್ ಕೋ-ಆಪರೇಟಿವ್ ಅಗ್ರಿಕಲ್ಚರಲ್ ಕ್ರೆಡಿಟ್ ಸೊಸೈಟಿ (ಟಿಆರ್‌ಸಿ)ಯಲ್ಲಿ 1957 ರಿಂದ 1992 ರವರೆಗೆ ಮುಖ್ಯಕಾರ್ಯನಿರ್ವಾಹಕರಾಗಿ ಕಾರ್ಯನಿರ್ವಹಿಸಿದ್ದರು. ಸೇವಾ ಮನೋಭಾವ ಹೊಂದಿದ್ದ ಅವರು ಪ್ರಾಮಾಣಿಕತೆ ಹಾಗೂ ಸೌಜನ್ಯಶೀಲ ಗುಣಗಳಿಂದ ಜನಮನ್ನಣೆಗಳಿಸಿದ್ದರು.
ಶ್ರದ್ಧಾಂಜಲಿ ಸಭೆ: ರಾಮಚಂದ್ರ ಅಕದಾಸ ಅವರ ನಿಧನಕ್ಕೆ ಮಂಗಳವಾರ ಬೆಳಿಗ್ಗೆ ಟಿಆರ್‌ಸಿ ಕಚೇರಿಯಲ್ಲಿ ಶ್ರದ್ಧಾಂಜಲಿ ಸಭೆ ಸೇರಿ ಅವರು ಟಿಆರ್‌ಸಿಯ ಅಭಿವೃದ್ಧಿಗೆ ನೀಡಿದ ಕೊಡುಗೆಯನ್ನು ಸ್ಮರಿಸಿ ಮೌನಾಚರಣೆ ಮಾಡುವ ಮೂಲಕ ಶ್ರದ್ಧಾಂಜಲಿ ಸಲ್ಲಿಸಲಾಯಿತು.
ಸಂತಾಪ: ಟಿಆರ್‌ಸಿ ಅಧ್ಯಕ್ಷರಾದ ರಾಮಕೃಷ್ಣ ಹೆಗಡೆ ಕಡವೆ, ಉಪಾಧ್ಯಕ್ಷರಾದ ಲೋಕೇಶ ಹೆಗಡೆ ಹುಲೇಮಳಗಿ ಹಾಗೂ ಟಿಆರ್‌ಸಿಯ ಆಡಳಿತ ಮಂಡಳಿ ಸದಸ್ಯರು ಮತ್ತು ಮುಖ್ಯಕಾರ್ಯನಿರ್ವಾಹಕರಾದ ರಮೇಶ ಹೆಗಡೆ ಬಾಳೆಗದ್ದೆ, ಜಿ.ಜಿ. ಹೆಗಡೆ ಕುರುವಣಿಗೆ ಅವರು ಅಕದಾಸ ಭಟ್ಟ ಅವರ ನಿಧನಕ್ಕೆ ಸಂತಾಪ ವ್ಯಕ್ತಪಡಿಸಿದ್ದಾರೆೆ.
ಟಿಆರ್‌ಸಿ ಮಾಜಿ CEO ರಾಮಚಂದ್ರ ಅಕದಾಸ ನಿಧನ: ಸಂತಾಪ ಸೂಚಿಸಿದ ಆಡಳಿತ ಮಂಡಳಿ
