Slide
Slide
Slide
previous arrow
next arrow

ಚಂದನ ಪಿಯು ಕಾಲೇಜಿನಲ್ಲಿ ಆಕಾಶ ವೀಕ್ಷಣೆ ಹಾಗೂ ಮಾಹಿತಿ ಕಾರ್ಯಾಗಾರ ಯಶಸ್ವಿ

300x250 AD

ಶಿರಸಿ :ನಗರದ ಚಂದನ ಪದವಿ ಕಾಲೇಜಿನಲ್ಲಿ ಆಕಾಶ ವೀಕ್ಷಣೆ ಹಾಗೂ ಆಕಾಶ ಕಾಯಗಳ ಬಗ್ಗೆ ಮಾಹಿತಿ ಕಾರ್ಯಾಗಾರವನ್ನು ಜ.23ರಂದು ನಡೆಸಲಾಯಿತು. ನಗರದ ನೀಲೇಕಣಿ ಕಾಲೇಜಿನ ಭೌತಶಾಸ್ತ್ರ ಉಪನ್ಯಾಸಕ ಪ್ರೊ. ಕಾರ್ತಿಕ್ ಹೇಮಾದ್ರಿ ಕಾರ್ಯಕ್ರಮವನ್ನು ನಡೆಸಿಕೊಟ್ಟರು.

ಟೆಲಿಸ್ಕೊಪ್ ಅನ್ನು ಹೇಗೆ ವಿನ್ಯಾಸ ಮಾಡಲಾಗಿದೆ? ಅದು ನಮ್ಮ ಮಾನವನ ಕಣ್ಣುಗಳಿಗಿಂತ ಎಷ್ಟು ಹೆಚ್ಚಿನ ಸಾಮರ್ಥ್ಯ ಹೊಂದಿದೆ?
ಅದನ್ನು ಹೇಗೆ ಬಳಸುವುದು? ಒಟ್ಟು ಇರುವ ನಕ್ಷತ್ರಗಳು, ಗ್ರಹಗಳು, ನಕ್ಷತ್ರ ಪುಂಜಗಳ ಸಂಖ್ಯೆ ಎಷ್ಟು? ಫಿಸಿಕ್ಸ್ ಅಥವಾ ಕೆಮಿಸ್ಟ್ರಿಯ ನಿಯಮಗಳು ಕೇವಲ ಭೂಮಿಯಲ್ಲಿ ಅಷ್ಟೇ ಅಲ್ಲದೇ ಅದು ಇನ್ನಿತರ ಕಾಯಗಳಲ್ಲೂ ಹೇಗೆ ಅನ್ವಯಿಸುತ್ತದೆ? ಬೆಳಕಿನ ವೇಗ ಎಷ್ಟು? ಆಕಾಶ ಕಾಯಗಳು ಭೂಮಿಯಿಂದ ಎಷ್ಟು ದೂರದಲ್ಲಿವೆ ಹೀಗೆ ಹಲವಾರು ವಿಷಯಗಳ ಮೇಲೆ ವಿಸ್ತೃತ ವಿವರಣೆಯನ್ನು ವಿದ್ಯಾರ್ಥಿಗಳಿಗೆ ನೀಡಲಾಯಿತು.

ಕಾರ್ಯಕ್ರಮದಲ್ಲಿ ಚಂದನ ಕಾಲೇಜಿನ ಪ್ರಾಚಾರ್ಯರು, ಉಪನ್ಯಾಸಕರು, ಸಿಬ್ಬಂದಿ ವರ್ಗ ಹಾಗೂ ಪಾಲಕರು ಭಾಗವಹಿಸಿದ್ದರು.

300x250 AD

ವಿದ್ಯಾರ್ಥಿಗಳಲ್ಲಿ ಕೆಲವರು ಜೀವನದಲ್ಲಿ ಮೊದಲ ಬಾರಿಗೆ ಆಕಾಶ ಕಾಯಗಳನ್ನ, ನಕ್ಷತ್ರ ಪುಂಜಗಳನ್ನ ನೋಡಿ ಅಚ್ಚರಿ ಹಾಗೂ ಸಂತೋಷ ಅನುಭವಿಸಿದರು.ಒಟ್ಟಿನಲ್ಲಿ ಬ್ರಹ್ಮಾಂಡದ ವಿಸ್ತಾರ ಗಮನಿಸಿದಾಗ ಮಾನವ ಎಷ್ಟೊಂದು ಅಲ್ಪ ಎಂಬ ಅರಿವು ಎಲ್ಲರಲ್ಲೂ ಮೂಡಿತು.

Share This
300x250 AD
300x250 AD
300x250 AD
Back to top