Slide
Slide
Slide
previous arrow
next arrow

ಬನವಾಸಿಯಲ್ಲಿ ನೂತನ TMS ಸೂಪರ್ ಮಾರ್ಟ್: ಜ.27ಕ್ಕೆ ಶುಭಾರಂಭ

300x250 AD

ಶಿರಸಿ: ಕಳೆದ ಮೂವತ್ತೆಂಟು ವರ್ಷಗಳಿಂದ ಸತತವಾಗಿ ಸಹಕಾರಿ ತತ್ವದ ಮೂಲಕ ಕೃಷಿಕರಿಗೆ, ಸದಸ್ಯರಿಗೆ ಬಹುಮುಖಿಯಾಗಿ ನೆರವಾಗುತ್ತಿರುವ ಶಿರಸಿ ತಾಲೂಕು ವ್ಯವಸಾಯ ಹುಟ್ಟುವಳಿಗಳ ಸಹಕಾರಿ ಮಾರಾಟ ಸಂಘ(ಟಿಎಂಎಸ್ ) ಇದೀಗ ಬನವಾಸಿಯಲ್ಲೂ ನೂತನ ಸುಪರ್ ಮಾರ್ಟ ಉದ್ಘಾಟನೆಗೆ ಸಜ್ಜಾಗಿದೆ.
ಈ ವಿಷಯ ತಿಳಿಸಿದ ಟಿಎಂಎಸ್ ಅಧ್ಯಕ್ಷ ಜಿ.ಎಂ.ಹೆಗಡೆ ಹುಳಗೋಳ, 1985ರಲ್ಲಿ ಕೇವಲ 41 ಸದಸ್ಯರಿಂದ 50,800 ರೂ.ಗಳ ಶೇರು ಬಂಡವಾಳದೊoದಿಗೆ ಚಿಕ್ಕ ಬಾಡಿಗೆ ಕಟ್ಟಡದಲ್ಲಿ ಪ್ರಾರಂಭವಾದ ಸಂಸ್ಥೆ ಈ 38 ವರ್ಷಗಳಲ್ಲಿ ಸಾಧಿಸಿರುವ ಪ್ರಗತಿಯು ಸಂಘದ ಬೆಳವಣಿಗೆಯನ್ನು ಬಿಂಬಿಸುತ್ತಿದೆ. ಪ್ರಸ್ತುತ ಸಂಘವು 15,231 ಸದಸ್ಯರನ್ನು ಹೊಂದಿದ್ದು,ಕಳೆದೆ ಡಿಸೆಂಬರ್ ಕೊನೆಗೆ ಸಂಘದ ಶೇರು ಬಂಡವಾಳ 60.83 ಲಕ್ಷ ರೂ., 4,272.73 ಲಕ್ಷ ರೂ. ನಿಧಿ, 13,262.22 ಲಕ್ಷ ರೂ. ಠೇವು 17,617.85 ಲಕ್ಷ ರೂ. ದುಡಿಯುವ ಬಂಡವಾಳ ಹೊಂದಿದೆ. ಪ್ರತಿ ವರ್ಷವೂ ಆಡಿಟ್ ವರ್ಗೀಕರಣದಲ್ಲಿ `ಅ’ ಶ್ರೇಣಿಯನ್ನೇ ಕಾಯ್ದುಕೊಂಡಿದೆ ಎಂದು ತಿಳಿಸಿದ್ದಾರೆ.
ಸಂಘವು 2021-22ನೇ ವರ್ಷದಲ್ಲಿ 273.59ಕೋಟಿ ಮೌಲ್ಯದ 86,904 ಕ್ವಿಂಟಲ್‌ಗಳಷ್ಟು ವ್ಯವಸಾಯದ ಹುಟ್ಟುವಳಿಗಳನ್ನು ಮಾರಾಟ ಮಾಡಲಾಗಿದೆ. ವಾರ್ಷಿಕ ವಹಿವಾಟು 400.34 ಕೋಟಿ ರೂ. ಗಳಷ್ಟಿದೆ. ಸಂಸ್ಥೆಯು ಆರ್ಥಿಕವಾಗಿ ಸುಭದ್ರವಾಗಿದೆ. ಪ್ರಥಮ 25 ವರ್ಷಗಳಲ್ಲಿ ಸ್ವಂತ ನಿಧಿ 10 ಕೋಟಿ ಆಗಿದ್ದು ಒಂದು ದಾಖಲೆಯಾಗಿದೆ. ಸಂಘವು ವರ್ಷದಿಂದ ವರ್ಷಕ್ಕೆ ಪ್ರಗತಿಯ ಪಥದಲ್ಲಿಯೇ ಮುನ್ನುಗುತ್ತಿದೆ. ವ್ಯವಹಾರದಲ್ಲಿನ ಅಚ್ಚುಕಟ್ಟುತನ, ಶಿಸ್ತು, ನಿರ್ಭಿಡೆ, ಪ್ರಾಮಾಣಿಕತೆ ಈ ಪ್ರಗತಿಗೆ ಮೂಲ ಕಾರಣವಾಗಿದೆ. ಸಾಲ ಕಟ್ಟಬಾಕಿ ಪ್ರಮಾಣ ತೀರಾ ಕಡಿಮೆ, ಅಂದರೆ ಶೇ0.53 ರಷ್ಟು ಮಾತ್ರ ಇದೆ ಎಂದು ತಿಳಿಸಿದ್ದಾರೆ.
‘ವಿನಾ ದೈನ್ಯೇನ ಜೀವನಂ’ಎoಬ ಘೋಷವಾಕ್ಯದೊಂದಿಗೆ ಸದಸ್ಯರಿಗೆ ಪೂರಕವಾದ ಯೋಜನೆಗಳನ್ನು ಅನುಷ್ಟಾನಗೊಳಿಸಿ ಕಾರ್ಯನಿರ್ವಹಿಸುತ್ತಿರುವ ನಮ್ಮ ಸಂಘವು ಪ್ರಾರಂಭದಿoದಲೂ ಪ್ರಗತಿಯತ್ತ ಮುನ್ನಡೆಯುತ್ತಿದೆ. ಸಂಘವು ಅಡಿಕೆ, ಕಾಳುಮೆಣಸು ವ್ಯಾಪಾರ ವಹಿವಾಟು ನಡೆಸುವದರೊಂದಿಗೆ ರೈತರಿಗೆ ಕೃಷಿಗೆ ಬೇಕಾದ ಬೀಜ, ಗೊಬ್ಬರ, ಕ್ರಿಮಿನಾಶಕ ಹಾಗೂ ಎಲ್ಲ ಬಗೆಯ ಕೃಷಿ ಉಪಕರಣಗಳನ್ನು ಮತ್ತು ನೀರಾವರಿ ಪೈಪ್ಸ್, ಫಿಟಿಂಗ್ಸ್ಗಳನ್ನು ಸಂಘದಿoದ ಸ್ಪರ್ಧಾತ್ಮಕ ದರದಲ್ಲಿ ಮಾರಾಟಮಾಡುತ್ತಿದ್ದು ಬನವಾಸಿ ಭಾಗದ ರೈತರಿಗೆ ಅನುಕೂಲವಾಗುವ ದೃಷ್ಠಿಯಿಂದ 2012 ರಿಂದ ಬನವಾಸಿಯಲ್ಲಿ ಶಾಖೆಯನ್ನು ಪ್ರಾರಂಭಸಿ ಈ ಭಾಗದ ಸದಸ್ಯರಿಗೆ ಬೇಕಾಗುವ ಗೊಬ್ಬರ, ಕ್ರಿಮಿನಾಶಕ ಹಾಗೂ ಎಲ್ಲ ಬಗೆಯ ಕೃಷಿ ಉಪಕರಣಗಳನ್ನು ಸ್ಪರ್ದಾತ್ಮಕ ದರದಲ್ಲಿ ಮಾರಾಟ ಮಾಡಲಾಗುತ್ತಿದೆ.
ಬನವಾಸಿ ಶಾಖೆಯಿಂದ ಶಿರಸಿಗೆ ಶುಲ್ಕ ರಹಿತವಾಗಿ ಮಹಸೂಲು ಸಾಗಾಟ ವ್ಯವಸ್ಥೆ ಕಲ್ಪಿಸಲಾಗುತ್ತಿದೆ. ಬನವಾಸಿ ಭಾಗದ ರೈತರಿಗೆ ಸಂಘದ ಕೃಷಿ ಪದವಿಧರರಿಂದ ತಾಂತ್ರಿಕ ಸಲಹೆ ಸೂಚನೆಗಳನ್ನು ನೀಡಿ ರೈತರು ಗುಣಮಟ್ಟದ ಫಸಲು ಬೆಳೆಯುವ ಬಗ್ಗೆ ಪ್ರೋತ್ಸಾಹಿಸುತ್ತ ಬರಲಾಗಿದೆ. ರೈತರ ಮಹಸೂಲು ಶಿಲ್ಕಿಗೆ ಉತ್ತಮ ಗುಡೌನ್ ವ್ಯವಸ್ಥೆ,ಅಡಿಕೆ ಆರಿಸಿಕೊಡುವ ವ್ಯವಸ್ಥೆ, ಉತ್ತಮ ಮಾರಾಟ ವ್ಯವಸ್ಥೆ, ತ್ವರಿತ ಹಾಗೂ ಸೌಜನ್ಯಯುತ ಸೇವೆ ಸಂಘದ ಹೆಗ್ಗಳಿಕೆಯಾಗಿದೆ. ಸದಸ್ಯರ ಮಹಸೂಲು ವಿಕ್ರಿ ಆದಾರದ ಮೇಲೆ ರಿಬೇಟ್, ಸಾಗಾಣಿಕಾ ಸಹಾಯಧನ, ‘ಆರೋಗ್ಯ ಸುರಕ್ಷಾ’ ಯೋಜನೆ, ಅಪಘಾತ ವಿಮಾ ಯೋಜನೆ, ಮರಣೋತ್ತರ ನಿಧಿ ಯೋಜನೆಗಳ ಮೂಲಕ ಧನಸಹಾಯ ನೀಡಲಾಗುತ್ತಿದೆ. ಸದಸ್ಯರ ಹಣಕಾಸಿನ ಅಗತ್ಯತೆಗನುಗುಣವಾಗಿ ಕಡಿಮೆ ಬಡ್ಡಿದರದಲ್ಲಿ ಸಾಲ ಸೌಲಭ್ಯ ಒದಗಿಸಲಾಗುತ್ತಿದೆ.
ಕಳೆದ 2021-22ನೇ ಸಾಲಿನಲ್ಲಿ ಬನವಾಸಿ ಶಾಖೆಯ ಸದಸ್ಯರಿಂದ 2672-58.500 ಕ್ವಿಂಟಲ್ ಅಡಿಕೆ ವಿಕ್ರಿ ಮಾಡಲಾಗಿದೆ. ಶಾಖೆಯ ಮೂಲಕ ಗೊಬ್ಬರ, ಕ್ರಿಮಿನಾಶಕ ಹಾಗೂ ಎಲ್ಲ ಬಗೆಯ ಕೃಷಿ ಉಪಕರಣಗಳನ್ನು ಸ್ಪರ್ದಾತ್ಮಕ ದರದಲ್ಲಿ ಮಾರಾಟ ಮಾಡಲಾಗುತ್ತಿದ್ದು 2021-22ರಲ್ಲಿ 6,40,86,849.94ಗಳಷ್ಟು ವ್ಯವಹಾರ ಮಾಡಲಾಗಿದೆ. 2021-22ರಲ್ಲಿ 46.84 ಲಕ್ಷ ರೂ. ಲಾಭ ಗಳಿಸಲಾಗಿದೆ.
ಬನವಾಸಿ ಭಾಗದ ಸದಸ್ಯರ ಬಹುದಿನಗಳ ಬೇಡಿಕೆಯಾದ ‘ಸುಪರ್ ಮಾರ್ಟ’ ವ್ಯವಸ್ಥೆ ಪ್ರಾರಂಬಿಸುತ್ತಿದ್ದು ಸದಸ್ಯರ ದೈನಂದಿನ ಅಗತ್ಯತೆಗೆ ಬೇಕಾದ ದಿನಸಿ ಸಾಮಾನು, ಸ್ಟೇಶನರಿ ಸಾಮಾನು, ಹಣ್ಣು,ತರಕಾರಿ,ಹಾಲು ಹಾಗೂ ಪಾತ್ರೆ, ವಿದ್ಯಾರ್ಥಿಗಳಿಗೆ ಬೇಕಾಗುವ ಪೆನ್ನು, ಪೆನ್ಸಿಲ್ ನೋಟ್ ಬುಕ್,ಪೇಪರ್ ಇತ್ಯಾದಿ ಸಾಮಾನುಗಳನ್ನು ಸ್ಪರ್ಧಾತ್ಮಕ ದರದಲ್ಲಿ ಪೂರೈಸುವ ಯೋಜನೆಯೊಂದಿಗೆ ‘ಸುಪರ್ ಮಾರ್ಟ’ ವಿಭಾಗ ಪ್ರಾರಂಭಿಸುತ್ತಿದೆ ಎಂದು ಸಂಸ್ಥೆಯ ಮುಖ್ಯ ಕಾರ್ಯನಿರ್ವಾಹಕ ಎಂ.ಎ.ಹೆಗಡೆ ತಿಳಿಸಿದ್ದಾರೆ.

ಜ. 27ಕ್ಕೆ ಉದ್ಘಾಟನೆ
ಬನವಾಸಿಯಲ್ಲಿ ನೂತನ ಸುಪರ್ ಮಾರ್ಟ್ ಜನವರಿ 27ರಂದು ಮಧ್ಯಾಹ್ನ 3ಕ್ಕೆ ಕಾರ್ಮಿಕ ಸಚಿವ ಶಿವರಾಮ ಹೆಬ್ಬಾರ್ ಉದ್ಘಾಟಿಸಲಿದ್ದು, ಅಧ್ಯಕ್ಷತೆಯತನ್ನು ಸಂಸ್ಥೆ ಅಧ್ಯಕ್ಷ ಜಿ.ಎಂ.ಹೆಗಡೆ ಹುಳಗೋಳ ವಹಿಸಿಕೊಳ್ಳಲಿದ್ದಾರೆ. ಅತಿಥಿಗಳಾಗಿ ಧಾರವಾಡ ಹಾಲು ಒಕ್ಕೂಟ ನಿರ್ದೇಶಕ ಸುರೇಶ್ಚಂದ್ರ ಹೆಗಡೆ ಕೆಶಿನ್ಮನೆ, ಎಪಿಎಂಸಿ ಅಧ್ಯಕ್ಷ ಪ್ರಶಾಂತ ಗೌಡರ್, ಗ್ರಾ.ಪಂ. ಅಧ್ಯಕ್ಷೆ ತುಳಸಿ ಗೌಡ, ಕಾರ್ಯದರ್ಶಿ ವಿ.ಆರ್. ಜಯಕುಮಾರ ಪಾಲ್ಗೊಳ್ಳುವರು.–ಎಂ.ಎ.ಹೆಗಡೆ ಮುಖ್ಯ ಕಾರ್ಯನಿರ್ವಹಣಾಧಿಕಾರಿ, ಟಿಎಂಎಸ್ ಶಿರಸಿ

ಅದೇ ದಿನ ಸಾಯಂಕಾಲ ಕದಂಬ ಕಲಾ ವೇದಿಕೆ ಹಾಗೂ ಕದಂಬ ಮ್ಯೂಸಿಕ್ ಸ್ಟುಡಿಯೋ ಕಲಾವಿದರುಗಳಿಂದ ಸಂಗೀತ ಸಂಜೆ ಭಕ್ತಿ-ಭಾವ- ಗೀತೆಗಳ ಕಾರ್ಯಕ್ರಮ ನಡೆಯಲಿದೆ.

300x250 AD

  ಸೂರೊಂದು, ಹಲವು ಸೌಲಭ್ಯ!
  ನೂತನ ಸುಪರ್ ಮಾರ್ಟನ ಕ್ಷೇತ್ರ 3 ಚದುರಡಿ ಇದ್ದು, ಎರಡು ಮಹಡಿ ಒಳಗೊಂಡಿದೆ. ಸಂಘದ ಶಾಖಾ ಕಚೇರಿ ಕೂಡ ಅಲ್ಲೇ ನಡೆಯಲಿದೆ. ಕೃಷಿ ಉಪಕರಣ, ಗೊಬ್ಬರ, ಕ್ರಿಮಿನಾಶಕದಿಂದ ಪ್ಲಾಸ್ಟಿಕ್ ಐಟಂಗಳು, ಕಿರಾಣಿ ಐಟಂಗಳು, ಪಶು ಆಹಾರ, ಗೃಹೋಪಯೋಗಿ ವಸ್ತುಗಳು, ತರಕಾರಿ, ಹಣ್ಣು, ಪಾತ್ರೆಗಳೂ ದೊರೆಯಲಿವೆ. ಎಲ್ಲ ವಸ್ತುಗಳೂ ಒಂದೇ ಸೂರಿನಡಿ ಸಿಗಲಿದೆ.–ಜಿಎಂ.ಹೆಗಡೆ ಹುಳಗೋಳ, ಅಧ್ಯಕ್ಷರು ಟಿಎಂಎಸ್, ಶಿರಸಿ

   Share This
   300x250 AD
   300x250 AD
   300x250 AD
   Back to top