Slide
Slide
Slide
previous arrow
next arrow

ವೈಶ್ಯ ಸಮಾಜದ ಆರ್ಥಿಕ ಸ್ವಾವಲಂಬನೆಗೆ ಕೆಲವು ಯೋಜನೆಗಳ ಜಾರಿ ಅವಶ್ಯ:ಸುಬ್ರಾಯ ವಾಳ್ಕೆ

300x250 AD

ಕುಮಟಾ: ಪಟ್ಟಣದ ಹೊನ್ಮಾವ್ ಕ್ರಾಸ್‌ನ ವೈಶ್ಯವಾಣಿ ಸಮಾಜದ ಸಭಾಭವನದಲ್ಲಿ ವೈಶ್ಯ ಸಮಾಜದ ವಾರ್ಷಿಕ ಸ್ನೇಹ ಸಮ್ಮೇಳನ ನಡೆಯಿತು.
ಬೆಳಗಾವಿ ಉದ್ಯಮಿ ಹಾಗೂ ವೈಶ್ಯ ವಾಣಿ ಸಮಾಜದ ಮುಖಂಡ ರೋಹನ್ ಜವಳಿ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ವೈಶ್ಯ ಸಮಾಜ ಪುಟ್ಟ ಸಮಾಜವಾದರೂ ಪ್ರಬಲ ಸಮಾಜವಾಗಿದೆ. ನಮ್ಮ ಸಮಾಜ ವ್ಯಾಪಾರ, ವ್ಯವಹಾರ ಕ್ಷೇತ್ರದ ಮೂಲಕ ಸಮಾಜ ಸೇವೆ ಮಾಡಿಕೊಂಡು ಬಂದಿದೆ. ಆದರೆ ಈಗಿನ ಯುವಕರು ಐಟಿ, ಬಿಟಿ ಉದ್ಯೋಗದತ್ತ ಆಕರ್ಷಿತರಾಗಿದ್ದಾರೆ. ಹಾಗಾಗಿ ನಮ್ಮ ಮಕ್ಕಳಲ್ಲಿ ವ್ಯಾಪಾರ ಕ್ಷೇತ್ರದ ಬಗ್ಗೆ ಜಾಗೃತಿ ಮೂಡಿಸುವ ಕಾರ್ಯವಾಗಬೇಕು. ಈ ಕ್ಷೇತ್ರದಿಂದ ಹಲವರಿಗೆ ಉದ್ಯೋಗ ನೀಡುವ ಮೂಲಕ ಸಮಾಜವನ್ನು ಸುಧಾರಣೆ ಮಾಡಲು ಸಾಧ್ಯ. ನಮ್ಮ ಗುರುಗಳ ಆಶೀರ್ವಾದ ನಮ್ಮ ಸಮಾಜಬಾಂಧವರ ಮೇಲಿದೆ. ನಾವೆಲ್ಲ ನಿಸ್ವಾರ್ಥ ಸೇವೆಯ ಮೂಲಕ ನಮ್ಮ ಸಮಾಜದ ಮುಖಂಡ ಸುಬ್ರಾಯ ವಾಳ್ಕೆ ಅವರನ್ನು ರಾಜಕೀಯವಾಗಿ ಬೆಳೆಸುವ ಸಂಕಲ್ಪ ಮಾಡೋಣ ಎಂದರು.
ವೈಶ್ಯ ವಾಣಿ ಸಮಾಜದ ಅಧ್ಯಕ್ಷ ಮತ್ತು ಬೆಳಗಾವಿ ಉದ್ಯಮಿ ದತ್ತಾ ಕಾಣಬರ್ಗಿ ಮಾತನಾಡಿ, ವೈಶ್ಯ ಸಮಾಜಕ್ಕೆ ಮೀಸಲಾತಿ ಒದಗಿಸಿಕೊಡಲು ನಮ್ಮ ಗುರುಗಳ ಆಶೀರ್ವಾದ ಮತ್ತು ಮಾರ್ಗದರ್ಶನದಲ್ಲಿ ಕೆಲಸ ಮಾಡುತ್ತಿದ್ದೇವೆ. ಸಚಿವರು ಸೇರಿದಂತೆ ಸಂಬoಧಪಟ್ಟ ಅಧಿಕಾರಿಗಳನ್ನು ಭೇಟಿ ಮಾಡಿ, ಓಬಿಸಿಯಲ್ಲಿ ನಮ್ಮ ಸಮಾಜವನ್ನು ಸೇರಿಸುವ ಪ್ರಕ್ರಿಯೆ ಬಹುತೇಕ ಪೂರ್ಣಗೊಳ್ಳುವ ಮಟ್ಟಿಗೆ ತಲುಪಿದೆ. ಇನ್ನು ನಮ್ಮ ಸಮಾಜ ಬಾಂಧವರೆಲ್ಲರಿಗೂ ಒಳಿತಾಗಲಿ ಎಂದು ಶುಭ ಹಾರೈಸಿದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಚಿತ್ರ ನಿರ್ಮಾಪಕ ಮತ್ತು ಬಿಜೆಪಿ ಮುಖಂಡ ಸುಬ್ರಾಯ ವಾಳ್ಕೆ ಮಾತನಾಡಿ, ನಮ್ಮ ಸ್ವಾಮಿಗಳ ಪಾದಯಾತ್ರೆ ಕಷ್ಟಕರವಾಗಿದ್ದರೂ ಯಶಸ್ಸಿನತ್ತ ಸಾಗಿದೆ. ನಮ್ಮ ಸಮಾಜಕ್ಕೆ ಗುರುಗಳ ಮಾರ್ಗದರ್ಶನ ಸಿಕ್ಕ ಮೇಲೆ ಸಮಾಜದ ದಿಶೆ ಬದಲಾಗಿದೆ. ಸಾಕಷ್ಟು ಬೆಳವಣಿಗೆ ಕಂಡಿದೆ. ನಮ್ಮ ಮಠವನ್ನು ಆರ್ಥಿಕವಾಗಿ ಸ್ವಾವಲಂಬಿಗೊಳಿಸಲು ಕೆಲ ಯೋಜನೆಗಳನ್ನು ಚಿಂತಿಸಿದ್ದೇನೆ. ಮಠದಿಂದ ಸಹಕಾರಿ ಬ್ಯಾಂಕ್ ಸ್ಥಾಪಿಸಬೇಕು. ಇದರಿಂದ ನಮ್ಮ ಸಮಾಜ ಬಾಂಧವರಿಗೆ ಆರ್ಥಿಕ ಸೌಲಭ್ಯದ ಜೊತೆಗೆ ಉದ್ಯೋಗವಕಾಶ ಕಲ್ಪಿಸಿದಂತಾಗುತ್ತದೆ. ಮಹಿಳಾ ಉದ್ಯಮ ಸ್ಥಾಪಿಸಿ ಮಹಿಳಾ ಸಬಲೀಕರಣ ಮಾಡಬೇಕು. ಈ ಬಗ್ಗೆ ಸ್ವಾಮೀಜಿಯವರ ಬಳಿ ಒಂದು ಹಂತದ ಮಾತುಕತೆ ನಡೆದಿದೆ. ಅವರು ಪಾದ ಯಾತ್ರೆ ಪೂರ್ಣಗೊಳಿಸಿದ ಬಳಿಕ ಈ ಯೋಜನೆಯನ್ನು ಪ್ರಸ್ತಾಪಿಸಿ, ಕಾರ್ಯರೂಪಕ್ಕೆ ತರಲು ಸಮಾಜಬಾಂಧವರು ಕೈಜೋಡಿಸಬೇಕು ಎಂದರು.
ಈ ಸಂದರ್ಭದಲ್ಲಿ ಉದ್ಯಮಿಗಳಾದ ಸುಬ್ರಾಯ ವಾಳ್ಕೆ, ರೋಹನ ಜುವಳಿ ಮತ್ತು ದತ್ತಾ ಕಾಣಬರ್ಗಿ ಅವರನ್ನು ಸನ್ಮಾನಿಸಲಾಯಿತು. ಅಲ್ಲದೇ ವಿವಿಧ ಸ್ಪರ್ಧೆಗಳಲ್ಲಿ ವಿಜೇತರಾದ ವಿದ್ಯಾರ್ಥಿಗಳಿಗೆ ಮತ್ತು ಸಮಾಜ ಬಾಂಧವರಿಗೆ ಬಹುಮಾನ ವಿತರಿಸಿ, ಪುರಸ್ಕರಿಸಲಾಯಿತು.
ಕಾರ್ಯಕ್ರಮದಲ್ಲಿ ವೈಶ್ಯ ಸಮಾಜದ ತಾಲೂಕು ಅಧ್ಯಕ್ಷ ದಿನೇಶ ವಾಳ್ಕೆ, ಪ್ರಮುಖರಾದ ಕಿಶನ್ ವಾಳ್ಕೆ, ರಾಮದಾಸ ವಾಳ್ಕೆ ಇತರರು ಇದ್ದರು. ವೈಶ್ಯ ಸಮಾಜದ ಕಾರ್ಯದರ್ಶಿ ಪ್ರಕಾಶ ಶೇಟ್ ವರದಿ ವಾಚಿಸಿದರು. ಮುಖ್ಯಾಧ್ಯಾಪಕ ಪಾಂಡುರoಗ ವಾಗ್ರೇಕರ್ ಅತಿಥಿಗಳನ್ನು ಪರಿಚಯಿಸಿದರು. ವಿಜಯಲಕ್ಷ್ಮಿ ಶೇಟ್ ನಿರೂಪಿಸಿದರು. ಅಮೀತಾ ಗೋವೇಕರ್ ವಂದಿಸಿದರು.

300x250 AD
Share This
300x250 AD
300x250 AD
300x250 AD
Back to top