Slide
Slide
Slide
previous arrow
next arrow

ದೇಶದ ಏಳಿಗೆಗೆ ದೇವ ಮಾನವ ಮೋದಿ ಶ್ರಮಿಸುತ್ತಿದ್ದಾರೆ: ಶಾಸಕಿ ರೂಪಾಲಿ

300x250 AD

ಕಾರವಾರ: ವಿಶ್ವದಲ್ಲಿಯೇ ಭಾರತ ಶ್ರೇಷ್ಠ ದೇಶವಾಗಿದೆ. ದೇಶದ ಏಳಿಗೆಗೆ ನಮ್ಮ ಹೆಮ್ಮೆಯ ಪ್ರಧಾನಿ, ದೇವ ಮಾನವ ನರೇಂದ್ರ ಮೋದಿಯವರು ಹಗಲು- ರಾತ್ರಿ ಶ್ರಮಿಸುತ್ತಿದ್ದಾರೆ. ನಾವೆಲ್ಲರೂ ದೇಶದ ಏಳಿಗೆಗೆ ಅವರೊಟ್ಟಿಗೆ ನಿಲ್ಲಬೇಕು ಎಂದು ಶಾಸಕಿ ರೂಪಾಲಿ ನಾಯ್ಕ ಕರೆನೀಡಿದರು.
ಬಿಜೆಪಿ ನಗರ ಹಾಗೂ ಗ್ರಾಮೀಣ ಮಂಡಲದ ವಿಜಯ ಸಂಕಲ್ಪ ಅಭಿಯಾನದ ಅಂಗವಾಗಿ ತಾಲೂಕಿನ ಕಡವಾಡ ಹಾಗೂ ಬೂತ್ ಸಂಖ್ಯೆ 73, 74ರಲ್ಲಿ ಹಮ್ಮಿಕೊಂಡಿದ್ದ ಕಾರ್ಯಕ್ರಮದಲ್ಲಿ ಕೇಂದ್ರ, ರಾಜ್ಯ ಸರ್ಕಾರದ ಸಾಧನೆ ಹಾಗೂ ಕ್ಷೇತ್ರದ ವಿವಿಧ ಕೆಲವು ಪ್ರಮುಖ ಕಾರ್ಯಕ್ರಮಗಳು, ಸಾಧನೆಗಳು ಹಾಗೂ ಅಭಿವೃದ್ಧಿ ಯೋಜನೆಗಳ ಕಿರು ಮಾಹಿತಿಯ ಕರಪತ್ರವನ್ನು ಬಿಡುಗಡೆ ಮಾಡಿ ಅವರು ಮಾತನಾಡಿದರು.
ಬಿಜೆಪಿ ಸದಸತ್ವಕ್ಕೆ ದೂರವಾಣಿ ಸಂಖ್ಯೆ: 80000890009 ಗೆ ಮಿಸ್ಡ್ ಕಾಲ್ ನೀಡುವ ಬಗ್ಗೆ ಮಾಹಿತಿ ನೀಡಿದ ಅವರು, ಕೇಂದ್ರ ಸರ್ಕಾರದಿಂದ ಕೊರೋನಾ ಸಂದರ್ಭದಲ್ಲಿ ದೇಶದ ಜನತೆಗೆ ಉಚಿತ ಲಸಿಕೆ ನೀಡಲಾಯಿತು. ಆಕ್ಸಿಜನ್ ಅವಶ್ಯಕತೆ ಇದ್ದಾಗ ಆಮ್ಲಜನಕ ಘಟಕ ನಿರ್ಮಿಸಿ ಜನರ ಆರೋಗ್ಯ ರಕ್ಷಣೆ ಮಾಡಿದರು. ಪ್ರವಾಹ, ಕೋವಿಡ್ ಸಂದರ್ಭದಲ್ಲಿ ಜನರಿಗೆ ನೆರವಾಗಿದೆ. ಪರಿಹಾರವನ್ನು ತಕ್ಷಣಕ್ಕೆ ಖಾತೆಗಳಿಗೆ ಜಮಾ ಮಾಡುವ ಮೂಲಕ ಸರ್ಕಾರ ನೆರವಾಗಿದೆ. ನಾವೆಲ್ಲರೂ ಸಾಮಾಜಿಕ ಕಳಕಳಿಯಿಂದ ಸೇವೆ ಮಾಡಬೇಕು. ಮಾನವೀಯತೆಯನ್ನು ಬೆಳೆಸಿಕೊಳ್ಳಬೇಕು ಎಂದರು.
ಈ ಸಂದರ್ಭದಲ್ಲಿ ಬಿಜೆಪಿ ಗ್ರಾಮೀಣ ಮಂಡಲದ ಅಧ್ಯಕ್ಷ ಸುಭಾಷ್ ಗುನಗಿ, ಪ್ರಧಾನ ಕಾರ್ಯದರ್ಶಿ ದತ್ತರಾಮ್ ಬಾಂದೇಕರ್, ಗ್ರಾಮ ಪಂಚಾಯತಿ ಅಧ್ಯಕ್ಷೆ ಪ್ರಿಯಾ ಗೌಡ, ಸದಸ್ಯರಾದ ಗಣರಾಜ್ ನಾರ್ವೇಕರ್, ಸ್ಟೀಫನ್ ಸುಭಾಷ್, ಚಂದ್ರಕಾಂತ, ಗಣೇಶ್, ರಾಜು, ಸಂತೋಷ್, ಸುಶಾಂತ್, ಸುರೇಂದ್ರ, ಸುಧಾಕರ್, ದಾಮೋದರ್, ರಾಜ ಗುರು, ಡಿಂಗ ಗುನಗಿ, ಬಿಜೆಪಿ ನಗರ ಮಂಡಲದ ಅಧ್ಯಕ್ಷ ನಾಗೇಶ್ ಕುರುಡೇಕರ್, ನಗರ ಪ್ರಭಾರಿ ಆರತಿ ಗೌಡ, ಬೂತ್ ಅಧ್ಯಕ್ಷರು ಹಾಗೂ ನಗರಸಭೆ ಸದಸ್ಯರಾದ ಮಾಲಾ ಹುಲಸ್ವಾರ್, ಸಂಜಯ್ ನಾಯ್ಕ್, ಮಹಾಶಕ್ತಿ ಕೇಂದ್ರದ ಅಧ್ಯಕ್ಷ್ಷೆ ಸುನಿತಾ ಸಾರಂಗ, ಸ್ಥಾಯಿ ಸಮಿತಿ ಅಧ್ಯಕ್ಷೆ ಸುಜಾತಾ ತಾಮಸೆ, ಅನ್ಮೋಲ್ ರೇವಣಕರ್, ಕಿಶನ್ ಕಾಂಬ್ಳೆ, ಅಜಯ ಜೋಶಿ, ವೃಂದಾ ದಾಮಸಾಡೇಕರ್, ಅನು ಟಕ್ಕರ, ಪ್ರತಿಮಾ ಲೋಟಲೇಕರ್, ಲಕ್ಷ್ಮಿಕಾಂತ ಧುರಿ, ರಾಜೇಶ ನಾಯ್ಕ್, ನಾಗೇಶ ಅಣ್ವೇಕರ್, ವೈಶಾಲಿ ತಾಂಡೇಲ್, ವೀರೇಂದ್ರ ಕೊಳಮಕರ್, ಪ್ರದೀಪ ಹುಲಸ್ವಾರ್, ಮಂಜು ಪಾಲನಕರ, ಪದಾಧಿಕಾರಿಗಳು, ಕಾರ್ಯಕರ್ತರು ಉಪಸ್ಥಿತರಿದ್ದರು.

300x250 AD
Share This
300x250 AD
300x250 AD
300x250 AD
Back to top