ದಾಂಡೇಲಿ: ರಾಜ್ಯ ವಿಧಾನಸಭೆಯ 2022ನೇ ಸಾಲಿನ ಅತ್ಯುತ್ತಮ ಶಾಸಕ ಪ್ರಶಸ್ತಿ ಪಡೆದ ಆರ್.ವಿ.ದೇಶಪಾಂಡೆಯವರನ್ನು ದಾಂಡೇಲಿಯ ಜೈನ ಸಮಾಜ ಸೇವಾ ಟ್ರಸ್ಟ್ ವತಿಯಿಂದ ಶನಿವಾರ ಅವರ ಸ್ವಗೃಹದಲ್ಲಿ ಗೌರವಪೂರ್ವಕವಾಗಿ ಸನ್ಮಾನಿಸಲಾಯಿತು.
ಸನ್ಮಾನಕ್ಕೆ ಕೃತಜ್ಞತೆ ಸಲ್ಲಿಸಿದ ಆರ್.ವಿ.ದೇಶಪಾಂಡೆಯವರು ಕೆಲ ಹೊತ್ತು ಜೈನ ಸಮಾಜ ಸೇವಾ ಟ್ರಸ್ಟ್ ಪದಾಧಿಕಾರಿಗಳ ಜೊತೆ ಮಾತುಕತೆ ನಡೆಸಿದರು. ಈ ಸಂದರ್ಭದಲ್ಲಿ ದಾಂಡೇಲಿಯ ಜೈನ ಸಮಾಜ ಸೇವಾ ಟ್ರಸ್ಟ್ ಪದಾಧಿಕಾರಿಗಳಾದ ಸಂದೇಶ್ ಎಸ್.ಜೈನ್, ಮಹಾವೀರ ಬಂಡಿ, ಅಭಯ್ ಎಸ್.ಸದಲಗಿ, ಶ್ರೀಕಾಂತ ದೇವಕಿ, ಶಾಂತಿನಾಥ ಟೋಪನ್ನವರ, ರುದ್ರಪ್ಪ ಗಂದಿಗವಾಡ, ಮಹಾವೀರ ಟೋಪಣ್ಣವರ್, ಸಂತೋಷ್ ಜೈನ್, ಮಂಜುನಾಥ್ ಟೋಪಣ್ಣವರ್, ಸುಯೋಗ್.ಎಸ್.ಜೈನ್ ಮೊದಲಾದವರು ಇದ್ದರು.