• first
  Slide
  Slide
  previous arrow
  next arrow
 • ದಾಂಡೇಲಿ ಟ್ರಾನ್ಸಪೋರ್ಟ್ ಅಸೋಸಿಯೇಶನ್‌ನಿಂದ ಆರ್.ವಿ.ಡಿ.ಗೆ ಸನ್ಮಾನ

  300x250 AD

  ದಾಂಡೇಲಿ: ನಗರದ ಹಳಿಯಾಳ ರಸ್ತೆಯಲ್ಲಿರುವ ದಾಂಡೇಲಿ ಟ್ರಾನ್ಸ್ಪೋರ್ಟ್ ಅಸೋಸಿಯೇಶನ್ ನೂತನ ಕಚೇರಿಗೆ ಭೇಟಿ ನೀಡಿದ ಶಾಸಕ ಆರ್.ವಿ.ದೇಶಪಾಂಡೆ ಅವರಿಗೆ, ರಾಜ್ಯ ವಿಧಾನಸಭೆಯ 2022ನೇ ಸಾಲಿನ ಅತ್ಯುತ್ತಮ ಶಾಸಕ ಪ್ರಶಸ್ತಿ ಪಡೆದಿದ್ದಕ್ಕಾಗಿ ಅಸೋಸಿಯೇಶನ್ ವತಿಯಿಂದ ಗೌರವಪೂರ್ವಕವಾಗಿ ಸನ್ಮಾನಿಸಲಾಯಿತು.
  ಆನಂತರ ದಾಂಡೇಲಿ ಟ್ರಾನ್ಸಪೋರ್ಟ್ ಅಸೋಸಿಯೇಶನ್ ಪದಾಧಿಕಾರಿಗಳ ಜೊತೆ ಮಾತನಾಡಿ, ಸಂಘಟನೆಯ ಮೂಲಕ ಸಮಸ್ಯೆಗಳ ಪರಿಹಾರಕ್ಕೆ ಹೆಚ್ಚಿನ ಒತ್ತು ನೀಡಬೇಕೆಂದರು. ಈ ಸಂದರ್ಭದಲ್ಲಿ ದಾಂಡೇಲಿ ಟ್ರಾನ್ಸಪೋರ್ಟ್ ಅಸೋಸಿಯೇಶನ್ ಪದಾಧಿಕಾರಿಗಳು ಟ್ರಕ್ ಟರ್ಮಿನಲ್ ನಿರ್ಮಾಣ ಕಾಮಗಾರಿಯನ್ನು ಆದಷ್ಟು ಶೀಘ್ರ ಪ್ರಾರಂಭಿಸಲು ರಾಜ್ಯ ಸರಕಾರದ ಮೇಲೆ ಒತ್ತಡ ತರುವಂತೆ ಆರ್.ವಿ.ದೇಶಪಾಂಡೆಯವರಿಗೆ ಮನವಿ ಮಾಡಿದರು.
  ಈ ಸಂದರ್ಭದಲ್ಲಿ ದಾಂಡೇಲಿ ಟ್ರಾನ್ಸಪೋರ್ಟ್ ಅಸೋಸಿಯೇಶನ್ ಅಧ್ಯಕ್ಷ ದಿನೇಶ್ ಹಳದನಕರ್, ಉಪಾಧ್ಯಕ್ಷ ಮಹೇಶ ಶಿರೋಡ್ಕರ್, ಪ್ರಧಾನ ಕಾರ್ಯದರ್ಶಿ ಶ್ರೀನಾಥ್ ಪಾಸಲ್ಕರ್, ಸಹ ಕಾರ್ಯದರ್ಶಿ ಮಲ್ಲಿಕ್ ಬಾಳೆಕುಂದ್ರಿ, ಖಜಾಂಚಿ ಹುಸೇನ್ ಸೈಯದ್, ಸಂಘದ ಪ್ರಮುಖರುಗಳಾದ ಅಶುತೋಷ್‌ಕುಮಾರ್ ಹಾಗೂ ಸಂಘದ ಪದಾಧಿಕಾರಿಗಳು, ಸದಸ್ಯರು ಇದ್ದರು.

  300x250 AD
  Share This
  300x250 AD
  300x250 AD
  300x250 AD
  Back to top