Slide
Slide
Slide
previous arrow
next arrow

ಬಿಜೆಪಿ ಸೇರಿದ 47ಕ್ಕೂ ಅಧಿಕ ‘ಕೈ’ ಕಾರ್ಯಕರ್ತರು

300x250 AD

ದಾಂಡೇಲಿ: ನಗರದ ಕಾಂಗ್ರೆಸ್ ಓಬಿಸಿ ಘಟಕದ ಅಧ್ಯಕ್ಷ ರೂಪೇಶ್ ಪವಾರ್ ಅವರ ನೇತೃತ್ವದಲ್ಲಿ ಸುಮಾರು 47ಕ್ಕೂ ಅಧಿಕ ಕಾಂಗ್ರೆಸ್ ಕಾರ್ಯಕರ್ತರು ಕಾಂಗ್ರೆಸ್ ತೊರೆದು ಬಿಜೆಪಿಗೆ ಸೇರ್ಪಡೆಗೊಂಡರು.
ನಗರಸಭಾ ಸದಸ್ಯ ರೋಶನಜಿತ್ ಅವರ ಸಾರಥ್ಯದಲ್ಲಿ ನಡೆದ ಕಾರ್ಯಕ್ರಮದಲ್ಲಿ ರೂಪೇಶ್ ಪವಾರ್ ಅವರು ಕಾಂಗ್ರೆಸ್ ಪಕ್ಷದ ಕಾರ‍್ಯಕರ್ತರೊಂದಿಗೆ ಮಾಜಿ ಶಾಸಕ ಸುನೀಲ ಹೆಗಡೆಯವರ ಸಮ್ಮುಖದಲ್ಲಿ ಬಿಜೆಪಿಗೆ ಸೇರ್ಪಡೆಗೊಂಡರು.
ಬಿಜೆಪಿಗೆ ಸೇರ್ಪಡೆಗೊಂಡ ರೂಪೇಶ್ ಪವಾರ್ ಮಾತನಾಡಿ, ಸುನೀಲ ಹೆಗಡೆಯವರ ನಾಯಕತ್ವ, ಕಾರ್ಯಕರ್ತರೊಡನೆ ಬೆರೆಯುವ ರೀತಿ, ಕಾರ್ಯಕರ್ತರೊಂದಿಗಿನ ಒಡನಾಟ, ತಡವರಿಯದ ಸ್ಪಂದನೆ ಹಾಗೂ ಕೇಂದ್ರ ಮತ್ತು ರಾಜ್ಯ ಸರಕಾರದ ಜನಪರ ಆಡಳಿತವನ್ನು ನೋಡಿ ಬಿಜೆಪಿಗೆ ಸೇರ್ಪಡೆಯಾಗಿದ್ದೇವೆ ಎಂದರು.
ಪಕ್ಷಕ್ಕೆ ಬರಮಾಡಿಕೊಂಡು ಮಾತನಾಡಿದ ಸುನೀಲ ಹೆಗಡೆ, ದೇಶದಲ್ಲೆ ಅತೀ ಹೆಚ್ಚು ಕಾರ್ಯಕರ್ತರನ್ನು ಹೊಂದಿರುವ ಜನಪರ ಕಾಳಜಿಯ ಬಿಜೆಪಿ ಪಕ್ಷಕ್ಕೆ ಸೇರ್ಪಡೆಗೊಳ್ಳುತ್ತಿರುವುದಕ್ಕೆ ಅಭಿನಂದನೆ ಸಲ್ಲಿಸಿ, ಪ್ರಧಾನಿ ಮೋದಿಯವರ ಕನಸಿನ ಭಾರತ ನಿರ್ಮಾಣದ ಆಶಯ ಈಡೇರಬೇಕಾದರೆ ಬಿಜೆಪಿ ಪಕ್ಷವನ್ನು ಮತ್ತಷ್ಟು ಶಕ್ತಿಶಾಲಿಯನ್ನಾಗಿಸುವ ಗುರುತರ ಜವಾಬ್ದಾರಿ ನಮ್ಮೆಲ್ಲರ ಮೇಲಿದೆ. ಕೇಂದ್ರ ಮತ್ತು ರಾಜ್ಯ ಸರಕಾರದ ಅಭಿವೃದ್ಧಿ ಯೋಜನೆಗಳು ಮತ್ತು ಅತ್ಯುತ್ತಮ ಆಡಳಿತವೆ ಮುಂಬರಲಿರುವ ಚುನಾವಣೆಯಲ್ಲಿ ಪಕ್ಷದ ಗೆಲುವಿಗೆ ಪ್ರಮುಖ ಪಾತ್ರವಹಿಸಲಿದೆ ಎಂದರು.
ಈ ಸಂದರ್ಭದಲ್ಲಿ ನಗರಸಭಾ ಸದಸ್ಯ ರೋಶನಜಿತ್, ಬರಲಿರುವ ವಿಧಾನಸಭಾ ಚುನಾವಣೆಯಲ್ಲಿ ಪಕ್ಷದ ಅಭ್ಯರ್ಥಿ ಸುನೀಲ ಹೆಗಡೆಯವರ ಗೆಲುವಿಗೆ ನಾವೆಲ್ಲರೂ ಈಗಿಂದಲೆ ಕಾರ್ಯಪ್ರವೃತ್ತರಾಗಬೇಕು. ಆ ನಿಟ್ಟಿನಲ್ಲಿ ಮನೆ ಮನಗಳಲ್ಲಿ ಬಿಜೆಪಿಯನ್ನು ಗಟ್ಟಿಗೊಳಿಸುವ ಮೂಲಕ ಪಕ್ಷದ ಅಭೂತಪೂರ್ವ ಗೆಲುವಿಗೆ ನಾವೆಲ್ಲರೂ ಭದ್ರ ಬುನಾದಿಯಾಗಬೇಕೆಂದು ಕರೆ ನೀಡಿದರು.
ಬಿಜೆಪಿ ತಾಲೂಕು ಘಟಕದ ಪ್ರಧಾನ ಕಾರ್ಯದರ್ಶಿ ಗುರು ಮಠಪತಿ ಸ್ವಾಗತಿಸಿ, ವಂದಿಸಿ, ಕಾರ್ಯಕ್ರಮ ನಿರೂಪಿಸಿದರು. ಬಿಜೆಪಿ ತಾಲೂಕಾಧ್ಯಕ್ಷ ಚಂದ್ರಕಾಂತ ಕ್ಷೀರಸಾಗರ್, ಪಕ್ಷದ ಜಿಲ್ಲಾ ಕಾರ್ಯದರ್ಶಿ ಬಸವರಾಜ ಕಲಶೆಟ್ಟಿ, ಪ್ರಮುಖರುಗಳಾದ ಗೋಪಾಲ್ ಅಂಬೋಜಿ, ಸಂತೋಷ್ ಸೋಮನಾಚೆ, ಗಿರೀಶ ಟೋಸೂರ್, ಶಾರದಾ ಪರಶುರಾಮ, ಚಂದ್ರು ಶೆಟ್ಟಿ, ಗುರುದತ್ತ ಮಿರಾಶಿ, ಗೀತಾ ಶಿಕಾರಿಪುರ, ಸಂತೋಷ್ ಬುಲುಬುಲೆ, ಉದಯ್ ಕೋಳಿ, ಸಂದೀಪ್ ನಾಯ್ಕ, ವಿಷ್ಣು ನಾಯರ್, ನಗರ ಸಭಾ ಸದಸ್ಯರುಗಳಾದ ಮಹಾದೇವಿ ಭದ್ರಶೆಟ್ಟಿ, ಅನ್ನಪೂರ್ಣ ಬಾಗಲಕೋಟೆ, ಶೋಭಾ ಜಾಧವ್, ಗ್ರಾ.ಪಂ ಸದಸ್ಯರಾದ ಸುಭಾಷ್ ಬೋವಿವಡ್ಡರ್ ಮೊದಲಾದವರು ಇದ್ದರು.

300x250 AD
Share This
300x250 AD
300x250 AD
300x250 AD
Back to top