Slide
Slide
Slide
previous arrow
next arrow

ಸೇವಾಭಾರತಿ ಸೇವಾಧಾಮದ ವತಿಯಿಂದ ಉಚಿತ ವೈದ್ಯಕೀಯ ತಪಾಸಣೆ ಯಶಸ್ವಿ  

300x250 AD

ಶಿರಸಿ : ಸೇವಾಭಾರತಿ ಸೇವಾಧಾಮದಿಂದ ಬೆನ್ನುಹುರಿ ಅಪಘಾತಕ್ಕೊಳಗಾದ ದಿವ್ಯಾಂಗರಿಗೆ 19ನೇ ಉಚಿತ ವೈದ್ಯಕೀಯ ತಪಾಸಣೆ ಮತ್ತು ಮಾಹಿತಿ ಶಿಬಿರವು ನಗರದ ಸ್ಕ್ಯಾನ್ ಸೆಂಟರ್, ರೋಟರಿ ಕ್ಲಬ್ ಸಿರ್ಸಿ, ಇಂಡಿಯನ್ ಮೆಡಿಕಲ್ ಅಸೋಸಿಯೇಶನ್ ಸಿರ್ಸಿ ಇವುಗಳ ಸಹಯೋಗದಲ್ಲಿ ಸಿರ್ಸಿ ಸ್ಕ್ಯಾನ್ ಡಯಗ್ನೋಸ್ಟಿಕ್ ಮತ್ತು ರೀಸರ್ಚ್ ಸೆಂಟರನಲ್ಲಿ ಜ.17 ಮತ್ತು 18 ಎರಡು ದಿನಗಳ ಕಾಲ ಯಶಸ್ವಿಯಾಗಿ ನಡೆಯಿತು.  

ಜ.17 ರಂದು ಕಾರ್ಯಕ್ರಮವನ್ನು  ಕರ್ನಾಟಕ ವಿಧಾನ ಪರಿಸತ್ ಸದಸ್ಯ ಶಾಂತರಾಮ್ ಸಿದ್ದಿ  ಉದ್ಘಾಟಿಸಿ ಮಾತನಾಡಿ, ಉತ್ತರ ಕನ್ನಡ ಜಿಲ್ಲೆಯ ಬೆನ್ನುಹುರಿ ಅಪಘಾತಕೊಳಗದವರಿಗೆ ಬೇಕಾಗುವ ಸೌಲಭ್ಯಗಳನ್ನು ಕಲ್ಪಿಸಿ ಕೊಡುವ ಭರವಸೆ ನೀಡಿ, ಸೇವಾಭಾರತಿ ಸೇವಾಕಾರ್ಯ ಚಟುವಟಿಕೆ ಬಗ್ಗೆ ಮೆಚ್ಚುಗೆ ವ್ಯಕ್ತ ಪಡಿಸಿದರು. 

ಶಿಬಿರದ ಅಧ್ಯಕ್ಷತೆಯನ್ನು ವಹಿಸಿದ ಸೇವಾ ಭಾರತಿಯ ಅಧ್ಯಕ್ಷ ಕೆ ವಿನಾಯಕ ರಾವ್,  ಪ್ರಾಸ್ತಾವಿಕ ನುಡಿಗಳನ್ನಾಡಿ ಸೇವಾಭಾರತಿಯ ಕಾರ್ಯಚಟುವಟಿಕೆ ಬಗ್ಗೆ ಸವಿಸ್ತಾರವಾಗಿ ವಿವರಿಸಿದರು. ಕಾರ್ಯಕ್ರಮದ ಮುಖ್ಯ ಅತಿಥಿ ರೋ. ಗಣೇಶ್ ಹೆಗಡೆ, ಶಿಬಿರದ ಉದ್ದೇಶ ಹಾಗೂ ಸದುಪಯೋಗ ಪಡೆದುಕೊಂಡು ದಿವ್ಯಾಂಗರು ಉತ್ತಮ ಆರೋಗ್ಯವಂತರಾಗಬೇಕೆಂದು ಶುಭ ಹಾರೈಸಿದರು. 

300x250 AD

ಶಿಬಿರದಲ್ಲಿ 15ಜನ ಪಲಾನುಭವಿಗಳು  ನುರಿತ ತಜ್ಞ ವೈದ್ಯರಿಂದ ತಪಾಸಣೆ ಫಿಸಿಯೋತೆರಫಿ. ರಕ್ತ ಪರೀಕ್ಷೆ ,ಸ್ಕ್ಯಾನಿಂಗ್ ಎಕ್ಸರೆ ಪಲಾನುಭವಿಗಳು ಪಡೆದುಕೊಂಡರು.  ಶಿಬಿರ ದಲ್ಲಿ 6 ಗಾಲಿ ಕುರ್ಚಿ , 2 ವಾಟರ್ ಬೆಡ್ ,1 ಎರ್ಬೆಡ್ 2 ಸೆಲ್ಫೀಕೇರ್ ಕಿಟ್  ಮತ್ತು 7 ಜನರಿಗೆ ಮೆಡಿಕಲ್ ಕಿಟ್ಗಳನ್ನು ಪಲಾನುಭವಿಗೆ ವಿತರಣೆ ಮಾಡಲಾಯಿತು.

Share This
300x250 AD
300x250 AD
300x250 AD
Back to top