• Slide
  Slide
  Slide
  previous arrow
  next arrow
 • ಫೆ.23ಕ್ಕೆ ಕಾರವಾರ ತಾಲೂಕಾ 7ನೇ ಕನ್ನಡ ಸಾಹಿತ್ಯ ಸಮ್ಮೇಳನ

  300x250 AD

  ಕಾರವಾರ: ತಾಲ್ಲೂಕು ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ರಾಮಾ ನಾಯ್ಕರವರ ಅಧ್ಯಕ್ಷತೆಯಲ್ಲಿ ಕನ್ನಡ ಭವನದಲ್ಲಿ ಸಭೆ ಸೇರಿ ತಾಲ್ಲೂಕು 7ನೇ ಕನ್ನಡ ಸಾಹಿತ್ಯ ಸಮ್ಮೇಳನವನ್ನು ಜಿಲ್ಲಾ ರಂಗಮಂದಿರದಲ್ಲಿ ಫೆಬ್ರುವರಿ 23ರಂದು ಆಚರಿಸಲು ನಿರ್ಧರಿಸಲಾಯಿತು.
  ಸಭೆಯನ್ನುದ್ದೇಶಿಸಿ ಜಿಲ್ಲಾ ಕಸಾಪ ಪರಿಷತ್ತಿನ ಗೌರವ ಕಾರ್ಯದರ್ಶಿ ಜಾರ್ಜ್ ಫರ್ನಾಂಡೀಸ್ ಮಾತನಾಡುತ್ತಾ, ಸಮ್ಮೇಳನ ಉತ್ತಮವಾಗಿ ನಡೆಯಲಿ, ಅದಕ್ಕೆ ನನ್ನೆಲ್ಲಾ ಸಹಕಾರ ಮತ್ತು ಬೆಂಬಲವಿದೆ ಎಂದರು. ಕಾರ್ಯಕಾರಿ ಮಂಡಳಿ ಸದಸ್ಯ ಮಾಧವ ನಾಯಕ, ಸಮ್ಮೇಳನದ ಉಪಹಾರ ಮತ್ತು ಊಟದ ವ್ಯವಸ್ಥೆಯನ್ನು ನೋಡಿಕೊಳ್ಳುವದಾಗಿ ಹೇಳಿದರು.
  ಇದೇ ಸಂದರ್ಭದಲ್ಲಿ ಕನ್ನಡ ಸಾಹಿತ್ಯ ಲೋಕದ ಶ್ರೇಷ್ಠ ಮಹಿಳಾ ಲೇಖಕಿ ಹಾಗೂ ಪ್ರಗತಿಪರ ಚಿಂತಕಿಯಾಗಿದ್ದ ಸಾರಾ ಅಬೂಬಕ್ಕರವರಿಗೆ ಶ್ರದ್ಧಾಂಜಲಿ ಅರ್ಪಿಸಲಾಯಿತು. ಗೌರವ ಕಾರ್ಯದರ್ಶಿ ಗಣೇಶ ಬಿಷ್ಠಣ್ಣನವರ ಸ್ವಾಗತಿಸಿ ಸಭೆ ನಡೆಸಿಕೊಟ್ಟರು. ಸಭೆಯಲ್ಲಿ ಗೌರವ ಕಾರ್ಯದರ್ಶಿ ಬಾಬು ಶೇಖ್, ಸದಸ್ಯರಾದ ಇಬ್ರಾಹಿಂ ಕಲ್ಲೂರ್, ಎಮ್.ಎ.ಖತೀಬ, ಜಿ.ಡಿ.ಪಾಲೇಕರ, ವ್ಹಿ.ಪಿ.ನಾಯ್ಕ, ಜಿ.ಡಿ.ಮನೋಜ, ಅಲ್ತಾಫ್ ಶೇಖ್, ರಮೇಶ ಗುನಗಿ, ಮಚ್ಚೆಂದ್ರ ಮಹಾಲೆ, ಮಹಾದೇವ ರಾಣೆ, ಖೈರುನ್ನಿಸಾ ಶೇಖ್ ಉಪಸ್ಥಿತರಿದ್ದರು.

  300x250 AD
  Share This
  300x250 AD
  300x250 AD
  300x250 AD
  Leaderboard Ad
  Back to top