ಹಳಿಯಾಳ: ಕೇಂದ್ರ ಸರ್ಕಾರದ ಶಿಕ್ಷಣ ಸಚಿವಾಲಯದ ರಾಷ್ಟ್ರೀಯ ಶಿಕ್ಷಣ ಮಿಷನ್ ಅಭಿಯಾನದ ಅಡಿಯಲ್ಲಿ ಬಾಂಬೆಯಲ್ಲಿರುವ ಭಾರತೀಯ ತಂತ್ರಜ್ಞಾನ ಸಂಸ್ಥೆಯು ಆಯೋಜಿಸಿದ್ದ ಸ್ಪೋಕನ್ ಟ್ಯುಟೋರಿಯಲ್‌ನಲ್ಲಿ ಕೆಎಲ್‌ಎಸ್ ವಿಡಿಐಟಿಯ 502 ವಿದ್ಯಾರ್ಥಿಗಳು ತರಬೇತಿ ಪಡೆದುಕೊಂಡಿರುವುದಕ್ಕೆ ಐಐಟಿ ಬಾಂಬೆಯು ಪ್ರಶಂಸಿಸಿದೆ.
ಕಂಪ್ಯೂಟರ್ ಸೈನ್ಸ್ ವಿಭಾಗದ 232 ವಿದ್ಯಾರ್ಥಿಗಳು ಪೈತಾನ್, ಸಿಸಿಪಿಪಿ, ಅಡ್ವಾನ್ಸ್ ಸಿಪಿಪಿ, ಹೆಚ್‌ಟಿಎಂಎಲ್, ಸಿವಿಲ್ ವಿಭಾಗದ 158 ವಿದ್ಯಾರ್ಥಿಗಳು ಕ್ಯೂಕ್ಯಾಡ್, ಬ್ಲೆಂಡರ್, ಸೈ ಲ್ಯಾಬ್, ಮೆಕ್ಯಾನಿಕಲ್ ವಿಭಾಗದ 78 ವಿದ್ಯಾರ್ಥಿಗಳು ಓಪನ್ ಫೋರ್ಮ್ ಹಾಗೂ ಎಲೆಕ್ಟ್ರಿಕಲ್ ವಿಭಾಗದ 34 ವಿದ್ಯಾರ್ಥಿಗಳು ಇ- ಸಿಮ್ ಕೋರ್ಸಿನ ತರಬೇತಿ ಪಡೆದುಕೊಂಡಿದ್ದಾರೆ. ಡಾ.ಗುರುರಾಜ್ ಹತ್ತಿ ಅವರ ಮಾರ್ಗದರ್ಶನದಲ್ಲಿ ಪ್ರೊ.ಭರತ್ ಪಾಟೀಲ್, ಪ್ರೊ.ಬಸವರಾಜಗೌಡರ್, ಪ್ರೊ.ರವೀಂದ್ರ ಪಾಟೀಲ್, ಪ್ರೊ.ಪ್ರಾಣೇಶ್‌ಕುಲಕರ್ಣಿ, ಪ್ರೊ.ವಿಜಯಲಕ್ಷ್ಮಿ, ಪ್ರೊ.ಶ್ರೀಪಾದರಾಜ ಇನಾಮ್ದಾರ್ ವಿದ್ಯಾರ್ಥಿಗಳಿಗೆ ಸ್ಪೋಕನ್ ಟ್ಯುಟೋರಿಯಲ್ ತರಬೇತಿ ನೀಡಿದ್ದಾರೆ.
ಕೆಎಲ್‌ಎಸ್ ವಿಡಿಐಟಿಯ ವಿದ್ಯಾರ್ಥಿಗಳ ಉತ್ತರಕರ್ನಾಟಕದ ಸಾಂಪ್ರದಾಯಿಕ ತಂತ್ರಜ್ಞಾನ ಬಳಸಿ ಮನೆಯ ಮೇಲ್ಚಾವಣಿಯ ಟ್ಯಾಂಕಿಯಲ್ಲಿರುವ ನೀರನ್ನು ತಂಪಾಗಿರಿಸುವ ಯೋಜನಾ ಕಾರ್ಯವನ್ನು ಮೆಚ್ಚಿ ಗ್ಲೋಬಲ್ ಸೆಂಟರ್ ಆಫ್ ಎಕ್ಸಲೆನ್ಸ್ ಇನ್ ಅಫೇರ್ಡಬಲ್ ಮತ್ತು ಗ್ರೀನ್ ಎನರ್ಜಿ, ಭಾರತೀಯ ತಂತ್ರಜ್ಞಾನ ಸಂಸ್ಥೆ ಧಾರವಾಡ, ಸೆಲ್ಕೋ ಫೌಂಡೇಷನ್ ಇವರುಗಳು ಧನಸಹಾಯ ಮತ್ತು ಯೋಜನಾ ಕಾರ್ಯಕ್ಕೆ ಮೂರು ತಿಂಗಳುಗಳ ಸಹಾಭಾಗಿತ್ವವನ್ನು ನೀಡಿದೆ. ಡಾ.ಕೆ.ಎಸ್.ಪೂಜಾರ್ ಅವರ ಮಾರ್ಗದರ್ಶನದಲ್ಲಿ ಸಮ್ಮೇದ, ಚಂದ್ರಶೇಖರ, ಗಣೇಶ್, ಹೇಮಂತ್ ಇವರುಗಳು ಯೋಜನಾ ಕಾರ್ಯವನ್ನು ಕೈಗೊಂಡಿದ್ದಾರೆ.
ಮಹಾವಿದ್ಯಾಲಯದ ವಿದ್ಯಾರ್ಥಿಗಳ ಈ ಎಲ್ಲಾ ಸಾಧನೆಗೆ ಆಡಳಿತ ಮಂಡಳಿಯ ಅಧ್ಯಕ್ಷ ವಿನಾಯಕ ಲೋಕುರ್, ಪ್ರಾಚಾರ್ಯರಾದ ಡಾ.ವಿ.ಎ.ಕುಲಕರ್ಣಿ ಹಾಗೂ ಎಲ್ಲಾ ಬೋಧಕ- ಬೋಧಕೇತರ ಸಿಬ್ಬಂದಿಗಳು ಅಭಿನಂದಿಸಿದ್ದಾರೆ.