Slide
Slide
Slide
previous arrow
next arrow

ವಿವಿಧ ಅಭಿವೃದ್ಧಿ ಕಾಮಗಾರಿಗಳಿಗೆ ದೇಶಪಾಂಡೆ ಚಾಲನೆ

300x250 AD

ದಾಂಡೇಲಿ: ತಾಲೂಕಿನ ಕೋಗಿಲಬನ/ ಬಡಕಾನಶಿರಡಾ ಗ್ರಾಮ ಪಂಚಾಯತಿ ವ್ಯಾಪ್ತಿಯಡಿ ಗ್ರಾಮೀಣಾಭಿವೃದ್ಧಿ ಹಾಗೂ ಪಂಚಾಯತ್‌ರಾಜ್ ಇಂಜಿನಿಯರಿಂಗ್ ಉಪವಿಭಾಗದ 2022- 23ನೇ ಸಾಲಿನ ವಿಶೇಷ ಯೋಜನೆಯಡಿ ಮಂಜೂರುಗೊಂಡ ರೂ.90 ಲಕ್ಷ ಮೊತ್ತದ ವಿವಿಧ ಅಭಿವೃದ್ಧಿ ಕಾಮಗಾರಿಗಳಿಗೆ ಶಾಸಕ ಆರ್.ವಿ.ದೇಶಪಾಂಡೆ ಕೋಗಿಲಬನದಲ್ಲಿರುವ ಸರಕಾರಿ ಹಿ.ಪ್ರಾ.ಶಾಲೆಯ ಆವರಣದಲ್ಲಿ ಚಾಲನೆ ನೀಡಿದರು.
ಬಳಿಕ ಮಾತನಾಡಿದ ಅವರು, ಒಂದು ಕಾಲದಲ್ಲಿ ಕೋಗಿಲಬನ ಗ್ರಾಮ ಅತ್ಯಂತ ಹಿಂದುಳಿದ ಗ್ರಾಮವಾಗಿ ಅನೇಕ ಮೂಲಸೌಕರ‍್ಯಗಳಿಂದ ವಂಚಿತವಾಗಿತ್ತು. ಆದರೆ ಕಾಲಕ್ರಮೇಣ ಈ ಭಾಗದ ಸಮಸ್ಯೆಗಳಿಗೆ ಸ್ಪಂದಿಸುವುದರೊಂದಿಗೆ ಅಗತ್ಯ ಮೂಲಸೌಕರ‍್ಯಗಳನ್ನು ಒದಗಿಸಿಕೊಡುವ ಮೂಲಕ ಕೋಗಿಲಬನ ಗ್ರಾಮ ಸಮಗ್ರ ಅಭಿವೃದ್ಧಿಯೆಡೆಗೆ ಸಾಗುತ್ತಿರುವುದು ಉತ್ತಮವಾದ ಬೆಳವಣಿಗೆ. ಕೋಗಿಲಬನ/ಬಡಕಾನಶಿರಡಾ ಗ್ರಾಮದ ಜನತೆಯ ಬೇಡಿಕೆಗಳಿಗೆ ಯಾವತ್ತು ಇಲ್ಲ ಎಂದು ಹೇಳಲಾಗದು. ಇಲ್ಲಿಯ ಜನತೆಯ ತಾಳ್ಮೆ ಹಾಗೂ ಪ್ರೀತಿ ವಾತ್ಸಲ್ಯಕ್ಕೆ ಬೆಲೆ ಕಟ್ಟಲಾಗದು. ಕ್ಷೇತ್ರದ ಜನತೆ ನೀಡುವ ಪ್ರೀತಿ, ವಾತ್ಸಲ್ಯ, ಅಭಿಮಾನವೇ ನಮಗೆ ಮತ್ತಷ್ಟು ಜನಸೇವೆ ಮಾಡಲು ಪ್ರೇರಣೆಯಾಗಿದೆ. ಈ ಭಾಗದಲ್ಲಿ ಇನ್ನೂ ಅಭಿವೃದ್ಧಿ ಕಾರ‍್ಯಗಳು ನಡೆಯಬೇಕಿದ್ದು, ಅವುಗಳನ್ನು ಕೂಡ ಮಾಡಲು ಪ್ರಾಮಾಣಿಕ ಪ್ರಯತ್ನ ಮಾಡುತ್ತೇನೆ. ಅಭಿವೃದ್ಧಿ ವಿಚಾರದಲ್ಲಿ ಪಕ್ಷಬೇಧ ಮರೆತು ಜೊತೆಯಾಗಿ ಸಾಗಬೇಕು. ಆಗ ಮಾತ್ರ ಗ್ರಾಮದ ಸಮಗ್ರ ಅಭಿವೃದ್ಧಿ ಸಾಧ್ಯ ಎಂದರು.
ಹಳಿಯಾಳ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಕೃಷ್ಣ ಪಾಟೀಲ್ ಮಾತನಾಡಿ, ಆರ್.ವಿ.ದೇಶಪಾಂಡೆಯವರಲ್ಲಿ ಯಾವುದೇ ಒಂದು ಕೆಲಸ ಹೇಳಿದ್ದಲ್ಲಿ ಅದು ಸಂಪೂರ್ಣ ಆಗುವವರೆಗೆ ಅವರು ವಿರಮಿಸದೇ ಕೆಲಸ ಮಾಡುವ ಜಾಯಮಾನದವರು. ಒಬ್ಬ ಶ್ರೇಷ್ಟ ಜನಪರ ಚಿಂತಕ ನಮ್ಮ ಕ್ಷೇತ್ರದ ಶಾಸಕರಾಗಿರುವುದು ನಮ್ಮೆಲ್ಲರ ಸೌಭಾಗ್ಯ ಎಂದರು.
ಕೋಗಿಲಬನ/ ಬಡಕಾನಶಿರಡಾ ಗ್ರಾಮ ಪಂಚಾಯತಿ ಅಧ್ಯಕ್ಷ ಅಶೋಕ ನಾಯ್ಕ, ಸದಸ್ಯ ಗೋಕುಲ ಮಿರಾಶಿ ಮಾತನಾಡಿದರು. ಇದೇ ಸಂದರ್ಭದಲ್ಲಿ ಅತ್ಯುತ್ತಮ ಶಾಸಕ ಪ್ರಶಸ್ತಿಗೆ ಭಾಜನರಾಗಿರುವ ಆರ್.ವಿ.ದೇಶಪಾಂಡೆಯವರನ್ನು ಗ್ರಾ.ಪಂ ಪರವಾಗಿ ಸನ್ಮಾನಿಸಲಾಯಿತು. ವೇದಿಕೆಯಲ್ಲಿ ದಾಂಡೇಲಿ ಬ್ಲಾಕ್ ಯುವ ಕಾಂಗ್ರೆಸ್ ಅಧ್ಯಕ್ಷ ಉಸ್ಮಾನ್ ಮುನ್ನ ವಹಾಬ್, ಗ್ರಾ.ಪಂ ಉಪಾಧ್ಯಕ್ಷೆ ಪಾರ್ವತಿ ಹರಿಜನ, ಗ್ರಾ.ಪಂ ಸದಸ್ಯರುಗಳಾದ ರಮೇಶ ನಾಯ್ಕ, ಮಲ್ಲವ್ವಾ ಪಾಟೀಲ್, ಮಂಜುಳಾ ರಜಪೂತ್, ಸಾವಿತ್ರಿ ಪಟಕಾರೆ, ಅಂಬೇವಾಡಿ ಗ್ರಾ.ಪಂ ಅಧ್ಯಕ್ಷೆ ಶೈನಾಜ್ ಅಂಕೋಲೆಕರ್, ಗ್ರಾಮೀಣಾಭಿವೃದ್ಧಿ ಹಾಗೂ ಪಂಚಾಯತ್ ರಾಜ್ ಇಂಜಿನಿಯರಿಂಗ್ ಉಪ ವಿಭಾಗದ ಸಹಾಯಕ ಕಾರ‍್ಯನಿರ್ವಾಹಕ ಅಭಿಯಂತರರಾದ ಮಹಮ್ಮದ್ ಇಜಾನ್ ಸಬೂರ್, ತಾ.ಪಂ ಕಾರ್ಯನಿರ್ವಾಹಣಾಧಿಕಾರಿ ಪ್ರಕಾಶ ಹಾಲಮನ್ನವರ, ಮಾಜಿ ತಾ.ಪಂ ಸದಸ್ಯರಾದ ಬಾಳು ಪಾಟೀಲ್, ಕಾಂಗ್ರೆಸ್ ಮುಖಂಡರುಗಳಾದ ವಿಷ್ಣುಮೂರ್ತಿ ರಾವ್, ಅನಿಲ್ ದಂಡಗಲ್, ರಾಹುಲ್ ದಂಡಗಲ್, ಅಮೀನ್ ಮೊದಲಾದವರು ಉಪಸ್ಥಿತರಿದ್ದರು.

300x250 AD
Share This
300x250 AD
300x250 AD
300x250 AD
Back to top