Slide
Slide
Slide
previous arrow
next arrow

ಜನತೆಯ ಪರ ಕೆಲಸ ಮಾಡುವವರಿಗೆ ಮತ ನೀಡಿ: ಆರ್.ವಿ.ಡಿ

300x250 AD

ಜೊಯಿಡಾ: ಪ್ರತಿ ಶಾಸಕನಿಗೂ 2 ಕೋಟಿ ಅನುದಾನ ಸರ್ಕಾರದಿಂದ ಬರುತ್ತದೆ. ಆದರೆ ಸರ್ಕಾರದಿಂದ 200 ಕೋಟಿ ಹಣ ತರುವ ಬುದ್ಧಿವಂತಿಕೆ ಬೇಕು. ಎಲ್ಲಾ ಶಾಸಕರಿಗೂ ಅಭಿವೃದ್ಧಿ ಮಾಡುವ ಮನಸ್ಸು ಇರುವುದಿಲ್ಲ. ಸಧ್ಯದಲ್ಲೇ ಚುನಾವಣೆ ಬರಲಿದ್ದು, ಯಾರು ಅಭಿವೃದ್ಧಿಯ ಹಾಗೂ ಜನರ ಪರವಾಗಿ ಕೆಲಸ ಮಾಡುತ್ತಾರೋ ಅಂಥವರಿಗೆ ನಿಮ್ಮ ಮತ ನೀಡಿ. ಕಾಂಗ್ರೆಸ್ ಪಕ್ಷದಲ್ಲಿ ಎಂದಿಗೂ ಜಾತಿ ಬೇಧ ಇಲ್ಲ ಎಂದು ಶಾಸಕ ಆರ್.ವಿ.ದೇಶಪಾಂಡೆ ಹೇಳಿದರು.
ಅವರು ನಾಗೋಡಾದಲ್ಲಿ 1.80 ಕೋಟಿ ಮೊತ್ತದ ವಿವಿಧ ಅಭಿವೃದ್ಧಿ ಕಾಮಗಾರಿಗಳಿಗೆ ಹಾಗೂ ದೇಶಪಾಂಡೆ ರುಡ್‌ಸೆಟ್, ದಾಂಡೇಲಿ ವೆಸ್ಟ್ಕೋಸ್ಟ್ಟ್ ಪೇಪರ್ ಮಿಲ್ ಅವರ ಸಹಯೋಗದಲ್ಲಿ ರುಡ್‌ಸೆಟ್‌ನಲ್ಲಿ ತರಬೇತಿ ಪಡೆದ ಮಹಿಳೆಯರಿಗೆ ಹೋಲಿಗೆ ಮಿಷನ್ ನೀಡುವ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡುತ್ತಿದ್ದರು.
ಜೊಯಿಡಾ ಹಿಂದುಳಿದ ತಾಲೂಕಲ್ಲ. ಇಲ್ಲಿ ಕಳೆದ 10 ವರ್ಷಗಳಲ್ಲಿ ಸಾಕಷ್ಟು ಅಭಿವೃದ್ಧಿ ಆಗಿದೆ. ರಸ್ತೆ, ಸೇತುವೆ, ಕುಡಿಯುವ ನೀರು, ಆಸ್ಪತ್ರೆ, ಶಿಕ್ಷಣಕ್ಕೆ ಕೋಟ್ಯಾಂತರ ಹಣ ತಾಲೂಕಿಗೆ ನೀಡಲಾಗಿದೆ. ಅಭಿವೃದ್ಧಿ ಮಾಡುವುದು ನನ್ನ ಕೆಲಸ, ಅಭಿವೃದ್ಧಿ ಕೆಲಸಗಳು ಸರಿಯಾಗಿ ನಡೆಯುತ್ತಿವೆಯೋ ಇಲ್ಲವೋ ಎಂಬುದನ್ನು ಗಮನಿಸುವುದು ನಿಮ್ಮ ಕೆಲಸ. ನಿಮ್ಮ ಊರಿನ ಅಭಿವೃದ್ಧಿ ಕೆಲಸಗಳು ಆಗಬೇಕಾದರೆ ಕೆಲಸ ಉತ್ತಮವಾಗಿ ನಡೆಯುತ್ತಿದೆಯೇ ಎಂಬುದನ್ನು ಸಾರ್ವಜನಿಕರು ಗಮನಿಸಬೇಕು. ಅಭಿವೃದ್ಧಿ ನಿಂತ ನೀರಾಗಬಾರದು. ಅಭಿವೃದ್ಧಿ ಎನ್ನುವುದು ನಿರಂತರವಾಗಿರಬೇಕು ಎಂದರು.
ನಾಗೋಡಾ ಗ್ರಾಮ ಪಂಚಾಯತಿ ಅಧ್ಯಕ್ಷ ದಿಗಂಬರ ದೇಸಾಯಿ ಮಾತನಾಡಿ, ಆರ್.ವಿ.ದೇಶಪಾಂಡೆ ಅವರು ಕಳೆದ 5 ವರ್ಷಗಳಲ್ಲಿ ನಮ್ಮ ಗ್ರಾಮ ಪಂಚಾಯತ ವ್ಯಾಪ್ತಿಗೆ ಎಲ್ಲಾ ಮೂಲಸೌಕರ್ಯಗಳನ್ನು ಒದಗಿಸಿಕೊಟ್ಟಿದ್ದಾರೆ. ನಮ್ಮ ಗ್ರಾಮ ಪಂಚಾಯತಗೆ ಅಷ್ಟೇ ಅಲ್ಲದೇ ನಮ್ಮ ತಾಲೂಕಿನ ಸಮಗ್ರ ಅಭಿವೃದ್ಧಿಗೆ ಪಣ ತೊಟ್ಟಿದ್ದಾರೆ. ಅವರಿಗೆ ಉತ್ತಮ ಶಾಸಕ ಪ್ರಶಸ್ತಿ ಸಿಕ್ಕಿರುವುದು ಸಂತಸ ತಂದಿದೆ ಎಂದರು.
ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಸದಾನಂದ ದಬ್ಗಾರ ಮಾತನಾಡಿ, ನಮ್ಮ ತಾಲೂಕಿನಲ್ಲಿ ಚುನಾವಣೆ ಬಂದಾಗ ದೇಶಪಾಂಡೆ ಅವರಿಗೆ ಬಹಳ ಮೋಸ ಮಾಡುತ್ತಾರೆ. ದೇಶಪಾಂಡೆ ಸಹಾಯ ಪಡೆದು ನಂತರ ಪಕ್ಷ ಬದಲಿಸುತ್ತಾರೆ. ಕೆಲವರು ಬೇರೆ ಪಕ್ಷದಲ್ಲಿದ್ದು ನಮ್ಮ ನಾಯಕರ ಸಹಾಯ ಕೇಳುತ್ತಾರೆ ಎಂದರು.
ಈ ಸಂದರ್ಭದಲ್ಲಿ ಜಿ.ಪಂ. ಮಾಜಿ ಸದಸ್ಯ ರಮೇಶ ನಾಯ್ಕ, ನಾಗೋಡಾ ಗ್ರಾ.ಪಂ ಸದಸ್ಯ ಶ್ರೀಧರ ದಬ್ಗಾರ, ಕಾಂಗ್ರೆಸ್ ಪಕ್ಷದ ಮಂಗೇಶ್ ಕಾಮತ್, ವಿನಯ ದೇಸಾಯಿ, ದತ್ತಾ ನಾಯ್ಕ, ದೇವಿದಾಸ ದೇಸಾಯಿ, ಜಿ.ಪಂ. ಇಲಾಖೆಯ ಅಧಿಕಾರಿಗಳಾದ ಇಝಾನ್ ಮಹಮ್ಮದ್, ಮಂಜುನಾಥ ಕೆ., ಲೋಕೋಪಯೋಗಿ ಇಲಾಖೆಯ ವಿಜಯಕುಮಾರ್, ಇಓ ಆನಂದ ಬಡಕುಂದ್ರಿ ಇತರರು ಇದ್ದರು.

300x250 AD
Share This
300x250 AD
300x250 AD
300x250 AD
Back to top