Slide
Slide
Slide
previous arrow
next arrow

ಯಾರೊಬ್ಬರೂ ಶಿಕ್ಷಣದಿಂದ ವಂಚಿತರಾಗಬಾರದು: ಸುನೀಲ ನಾಯ್ಕ

300x250 AD

ಭಟ್ಕಳ: ಕ್ಷೇತ್ರದಲ್ಲಿ ಶೈಕ್ಷಣಿಕ ಪ್ರಗತಿಗೆ ವಿಶೇಷವಾದ ಮಹತ್ವ ನೀಡಲಾಗಿದ್ದು, ಯಾರೊಬ್ಬರೂ ಶಿಕ್ಷಣದಿಂದ ವಂಚಿತರಾಗಬಾರದೆಂದು ಸರಕಾರದಿಂದ ಹಲವಾರು ಯೋಜನೆಗಳನ್ನೂ ತರುವ ಪ್ರಯತ್ನವೂ ನಡೆದಿದೆ ಎಂದು ಶಾಸಕ ಸುನೀಲ ನಾಯ್ಕ ಹೇಳಿದರು.
ಅವರು ತಾಲೂಕಿನ ಹಡೀನ್ ಸರಕಾರಿ ಪದವಿಪೂರ್ವ ಕಾಲೇಜು ವಾರ್ಷಿಕೋತ್ಸವ ಹಾಗೂ ಪ್ರತಿಭಾ ಪುರಸ್ಕಾರ ಸಮಾರಂಭ ಉದ್ಘಾಟಿಸಿ ಮಾತನಾಡಿ, ಹಡೀನ್‌ನಲ್ಲಿರುವ ಈ ಕಾಲೇಜು ಹಲವಾರು ವಿದ್ಯಾರ್ಥಿಗಳಿಗೆ ಉತ್ತಮ ಅವಕಾಶವಾಗಿದೆ. ಕಾಲೇಜನ್ನು ಅತೀ ಶೀಘ್ರವಾಗಿ ಇನ್ನಷ್ಟು ಅಭಿವೃದ್ಧಿಪಡಿಸಲಾಗುವುದು. ಹೆಚ್ಚುವರಿಯಾಗಿ ಬೇಕಿರುವ ಕೊಠಡಿಗಳನ್ನು ಶೀಘ್ರವಾಗಿ ಒದಗಿಸಿಕೊಡುವ ಭರವಸೆ ನೀಡುತ್ತಿದ್ದೇನೆ. ಉತ್ತಮ ಶಿಕ್ಷಣ ಸಿಗುತ್ತಿರುವ ನಮ್ಮ ಹಡೀನ್ ಸರಕಾರಿ ಪದವಿಪೂರ್ವ ಕಾಲೇಜಲ್ಲಿ ವಿದ್ಯಾರ್ಥಿಗಳಿಗೆ ಅವಶ್ಯಕವಿರುವ ಎಲ್ಲಾ ಮೂಲಸೌಕರ್ಯಗಳನ್ನು ಕಲ್ಪಿಸುವ ನಿಟ್ಟಿನಲ್ಲಿ ಪ್ರಾಮಾಣಿಕ ಪ್ರಯತ್ನ ಮಾಡುತ್ತೇನೆ ಎಂದರು.
ಯಲ್ವಡಿಕವೂರ್ ಗ್ರಾಮ ಪಂಚಾಯತ್ ಅಧ್ಯಕ್ಷ ಲಕ್ಷ್ಮೀನಾರಾಯಣ ನಾಯ್ಕ ಮಾತನಾಡಿ, ಕಾಲೇಜು ಹಡೀನ್‌ನಲ್ಲಿ ಆರಂಭವಾದ ದಿನಗಳ ಬಗ್ಗೆ ಹಾಗೂ ಆರಂಭವಾಗಲು ಕಾರಣೀಕರ್ತರಾದ ಅಂದಿನ ಸಚಿವ ಶಿವಾನಂದ ನಾಯ್ಕರನ್ನು ನೆನಪಿಸಿಕೊಂಡರು. ಪ್ರಸ್ತುತವಾಗಿ ಶಾಸಕ ಸುನಿಲ ನಾಯ್ಕರಲ್ಲಿ ಕಾಲೇಜಿಗೆ ಬೇಕಾಗಿರುವ ಕೊಠಡಿ ಹಾಗೂ ಇನ್ನಿತರ ಸೌಕರ್ಯಗಳ ಬೇಡಿಕೆ ಇಟ್ಟಿದ್ದು, ಇನ್ನು ಕೆಲವೇ ದಿನಗಳಲ್ಲಿ ಅದನ್ನು ಈಡೇರಿಸುತ್ತೇವೆ ಎಂಬ ಭರವಸೆ ಸಿಕ್ಕಿದೆ ಎಂದರು.
ಕಾರ್ಯಕ್ರಮದಲ್ಲಿ ವೆಂಕಟೇಶ್ವರ ವಿದ್ಯಾವರ್ಧಕ ಸಂಘದ ಅಧ್ಯಕ್ಷ ಕೆ.ಆರ್.ನಾಯ್ಕ, ಅಂಕೋಲಾದ ನಿವೃತ್ತ ಉಪನ್ಯಾಸಕ ಎಂ.ಆರ್.ನಾಯಕ, ಸಮಾಜ ಸೇವೆಯಲ್ಲಿ ಮುಂಚೂಣಿಯಲ್ಲಿರುವ ಹೆಸ್ಕಾಂ ಸಹಾಯಕ ಇಂಜಿನಿಯರ್ ಶಿವಾನಂದ ನಾಯ್ಕ, ನಾಮಧಾರಿ ಸಮಾಜದ ಅಧ್ಯಕ್ಷ ಕೃಷ್ಣ ನಾಯ್ಕ ಆಸರಕೇರಿ, ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಕಾಲೇಜಿನ ಪ್ರಾಂಶುಪಾಲರಾದ ಗಜಾನನ ನಾಯ್ಕ ಮಾತನಾಡಿದರು.
ಹಿರಿಯ ಉಪನ್ಯಾಸಕರಾದ ಎಂ.ಕೆ.ನಾಯ್ಕ ಅಥಿತಿಗಳನ್ನು ಸ್ವಾಗತಿಸಿದರು. ಉಪನ್ಯಾಸಕರಾದ ಯೋಗೇಶ ಪಟಗಾರ ವರದಿ ವಾಚಿಸಿದರೆ, ಉಪನ್ಯಾಸಕರಾದ ರಾಜೇಶ ನಾಯ್ಕ ವಂದಿಸಿದರು. ಉಪನ್ಯಾಸಕರಾದ ಮಂಜುನಾಥ ನಾಯ್ಕ ಕಾರ್ಯಕ್ರಮ ನಿರೂಪಿಸಿದರೆ, ರಂಗ ಪಟಗಾರ ಹಾಗೂ ಅಥಿತಿ ಉಪನ್ಯಾಸಕರುಗಳು ಕಾರ್ಯಕ್ರಮ ನಿರ್ವಹಿಸಿದರು. ವೇದಿಕೆಯಲ್ಲಿ ಯಲ್ವಡಿಕವೂರ ಗ್ರಾಮ ಪಂಚಾಯತ್ ಉಪಾಧ್ಯಕ್ಷೆ ಕಾವ್ಯ ಕೃÀಷ್ಣ ನಾಯ್ಕ, ಕಾಲೇಜು ಅಭಿವೃದ್ಧಿ ಸಮಿತಿ ಉಪಾಧ್ಯಕ್ಷ ಮಂಜುನಾಥ ನಾಯ್ಕ ಕರಾವಳಿ, ತಾ. ಪಂ ಮಾಜಿ ಸದಸ್ಯ ಹನುಮಂತ ನಾಯ್ಕ, ಪಿ. ಎಲ್. ಡಿ ಬ್ಯಾಂಕ್ ನಿರ್ದೇಶಕ ಮೋಹನ ನಾಯ್ಕ, ಸರ್ಪನಕಟ್ಟೆ ಸ್ಪೋರ್ಟ್ಸ್ ಕ್ಲಬ್‌ನ ವಾಸು ನಾಯ್ಕ ಮುಂತಾದವರು ಉಪಸ್ಥಿತರಿದ್ದರು.
ಸಮಾರಂಭದಲ್ಲಿ ಕ್ರೀಡೆಯಲ್ಲಿ ಸಾಧನೆ ತೋರಿದ್ದ ವಿದ್ಯಾರ್ಥಿಗಳಿಗೆ ಬಹುಮಾನ ನೀಡಲಾಯಿತು. ಸಭಾ ಕಾರ್ಯಕ್ರಮದ ನಂತರ ಕಾಲೇಜು ವಿದ್ಯಾರ್ಥಿಗಳಿಂದ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆದವು. ಕಾಲೇಜಿನ ಅಭಿವೃದ್ಧಿಗೆ ಸಹಕರಿಸಿದ ಎಲ್ಲಾ ದಾನಿಗಳನ್ನು ಈ ಕ್ಷಣದಲ್ಲಿ ಸನ್ಮಾನಿಸಲಾಯಿತು.

300x250 AD
Share This
300x250 AD
300x250 AD
300x250 AD
Back to top