Slide
Slide
Slide
previous arrow
next arrow

ಮನೆ ಹಬ್ಬದಂತೆ ಗಣರಾಜ್ಯೋತ್ಸವ ಆಚರಣೆ: ಭಂಡಾರಿ

300x250 AD

ಸಿದ್ದಾಪುರ: ಜನವರಿ 26ರ ಗಣರಾಜ್ಯೋತ್ಸವ ಆಚರಣೆ ಕುರಿತು ಪೂರ್ವಭಾವಿ ಸಭೆ ತಹಶೀಲ್ದಾರ ಕಾರ್ಯಾಲಯದಲ್ಲಿ ನಡೆಯಿತು.
ತಹಶೀಲ್ದಾರ ಸಂತೋಷ ಭಂಡಾರಿ ಮಾತನಾಡಿ, ಕೋವಿಡ್ ಪೂರ್ವದ ವರ್ಷಗಳ ಆಚರಣೆಯಂತೆ ಗಣರಾಜ್ಯೋತ್ಸವ ಆಚರಿಸಲಾಗುವುದು. ಪ್ರತಿಯೊಂದು ಇಲಾಖೆಯವರು ನಮ್ಮ ಮನೆ ಹಬ್ಬದಂತೆ ಆಚರಣೆಯಲ್ಲಿ ಪಾಲ್ಗೊಂಡು ತಮಗೆ ವಹಿಸಿದ ಜವಾಬ್ದಾರಿಗಳನ್ನು ನಿರ್ವಹಿಸಬೇಕು. ತಮ್ಮ ತಮ್ಮ ಕಚೇರಿಗಳಲ್ಲಿ ಬೆಳಿಗ್ಗೆ 8 ರಿಂದ 8-33 ರ ಒಳಗೆ ಮುಗಿಸಿ ನೆಹರು ಮೈದಾನದಲ್ಲಿ 9 ಗಂಟೆಗೆ ನಡೆವ ಧ್ವಜಾರೋಹಣದಲ್ಲಿ ಪಾಲ್ಗೊಳ್ಳಲು ಸೂಚಿಸಿದರು.
ಪೊಲೀಸ್, ಹೋಮ್ ಗಾರ್ಡ್ ಹಾಗೂ ಶಾಲಾ ಮಕ್ಕಳಿಂದ ಪಥಸಂಚಲನ, ಆರು ಶಾಲೆಗಳಿಂದ ಸಾಂಸ್ಕೃತಿಕ ಕಾರ್ಯಕ್ರಮ ನಡೆಯಲಿವೆ. ಪಥಸಂಕಲನದಲ್ಲಿ ಪಾಲ್ಗೊಂಡ ಪ್ರಥಮ, ದ್ವಿತೀಯ, ಹಾಗೂ ತ್ರತೀಯ ತಂಡಗಳಿಗೆ ನಿವೃತ್ತ ನೌಕರ ಸಂಘದವರು ಹಾಗೂ ಸಾಂಸ್ಕೃತಿಕ ಕಾರ್ಯಕ್ರಮ ಮೂರು ಸ್ಥಾನ ಪಡೆದ ತಂಡಗಳಿಗೆ ಸಂಕಲ್ಪ ಸೇವಾ ಟ್ರಸ್ಟ್ ವತಿಯಿಂದ ಬಹುಮಾನ ನೀಡಲಾಗುತ್ತದೆ. ಸುವ್ಯವಸ್ಥಿತವಾಗಿ ಗಣರಾಜ್ಯೋತ್ಸವ ಕಾರ್ಯಕ್ರಮ ನಡೆಯಲು ಆರಕ್ಷಕ ಇಲಾಖೆಯವರು ಸೂಕ್ತ ಬಂದೋಬಸ್ತ್ ಏರ್ಪಡಿಸುವಂತೆ ತಿಳಿಸಿದರು.
ಉಪತಹಶೀಲ್ದಾರ ಎನ್.ಐ.ಗೌಡ, ಪಟ್ಟಣ ಪಂಚಾಯತಿ ಉಪಾಧ್ಯಕ್ಷ ರವಿಕುಮಾರ್ ನಾಯ್ಕ, ಸದಸ್ಯ ನಂದನ ಬೋರಕರ, ಮುಖ್ಯಾಧಿಕಾರಿ ಕುಮಾರ ನಾಯ್ಕ, ನಿವೃತ್ತ ನೌಕರರ ಸಂಘದ ಅಧ್ಯಕ್ಷ ಸಿ.ಎಸ್.ಗೌಡರ, ಕಸಪಾ ತಾಲೂಕು ಅಧ್ಯಕ್ಷ ಗೋಪಾಲ ನಾಯ್ಕ, ಸಂಕಲ್ಪ ಸೇವಾ ಸಂಸ್ಥೆಯ ಪಿ.ಬಿ ಹೊಸೂರ ಹಾಗೂ ವಿವಿಧ ಇಲಾಖೆಗಳ ಅಧಿಕಾರಿಗಳು ಉಪಸ್ಥಿತರಿದ್ದರು.

300x250 AD
Share This
300x250 AD
300x250 AD
300x250 AD
Back to top