Slide
Slide
Slide
previous arrow
next arrow

ಸಹಕಾರಿ‌ ಸಂಸ್ಥೆಗಳು ಪ್ರತಿ ಕುಟುಂಬಕ್ಕೂ ಆರ್ಥಿಕ ಶಿಸ್ತು ಕಲಿಸಬೇಕು: ಸ್ಪೀಕರ್ ಕಾಗೇರಿ

300x250 AD

ಶಿರಸಿ: ಪ್ರತಿ ಕುಟುಂಬಕ್ಕೂ ಸಹಕಾರಿ ಸಂಘಗಳು ಆರ್ಥಿಕ ಶಿಸ್ತು ಕಲಿಸಬೇಕು‌. ಹೆಚ್ಚೆಚ್ಚು ಯುವ ಶಕ್ತಿ ಬರಬೇಕು ಎಂದು ಸ್ಪೀಕರ್ ವಿಶ್ವೇಶ್ವರ ಹೆಗಡೆ ಕಾಗೇರಿ ಹೇಳಿದರು.
ತಾಲೂಕಿನ ಯಡಹಳ್ಳಿಯ ಕಾನಗೋಡ ಗ್ರೂಪ್ ವಿವಿಧೊದ್ದೇಶಗಳ ಸಹಕಾರಿ‌ ಸಂಘದ ಅಮೃತ‌ ಮಹೋತ್ಸವಕ್ಕೆ ಚಾಲನೆ‌ ನೀಡಿ‌ ಮಾತನಾಡಿದರು.
ಆರ್ಥಿಕ‌ ಶಿಸ್ತು ಎಲ್ಲರೂ ಪಾಲಿಸಿದರೆ ಆರ್ಥಿಕ ಶಕ್ತಿ ಸದ್ವಿನಿಯೋಗ ಆಗುತ್ತದೆ. ಧರ್ಮ ಮಾರ್ಗದಲ್ಲಿ ಹಣ ಮಾಡಬೇಕು ಎಂದರು.
ಸಹಕಾರಿ ತತ್ವದ ಜನಾಂದೋಲನದ ಬೆಳೆದಿದೆ. ಮನೆಯ ಭಾಗವಾಗಿ ಸಹಕಾರಿ ಸಂಘಗಳು ಇದ್ದಿದ್ದರಿಂದ‌ ಈ ಸಾಧನೆ ಆಗಿದೆ‌ಎಂದ ಅವರು, ಹಿರಿಯ ಸಹಕಾರಿಗಳ ಸಾಧನೆ, ಪರಿಶ್ರಮದಿಂದ ಸಹಕಾರಿ‌ ಕ್ಷೇತ್ರದಲ್ಲಿ ಅಸಾಧರಣ ಸಾಧನೆ ಆಗಿದೆ . ಹಿಂದಿನಂತೆ ಸಹಕಾರಿ ಸಂಘಗಳನ್ನು‌ ಇಂದಿಗೂ ಬೆಳೆಸಬೇಕು. ಪಾರದರ್ಶಕತೆ, ಬದ್ದತೆ, ರಾಜಕೀಯ ಇಲ್ಲದೇ ಕೆಲಸ‌ ಮಾಡಬೇಕು ಎಂದರು.
ಜಿಲ್ಲೆಯ ಸಹಕಾರಿ ಕ್ಷೇತ್ರದ ಇತಿಹಾಸ ನೋಡಿದರೆ ಹೆಮ್ಮೆ ಬರುತ್ತದೆ. ಮನೆಯ ಭಾಗವಾಗಿ ಸೊಸೈಟಿಗಳು ಬೆಳೆದಿವೆ ಎಂದ ಅವರು, ಗ್ರಾಮ ಪಂಚಾಯತಕ್ಕೊಂದು ಸೊಸೈಟಿ ಆಗಬೇಕು. ಸರಕಾರ ಏನು‌ ಕೊಡಬೇಕು ಎಂಬುದನ್ನು ಸಹಕಾರಿ ಸಂಘಗಳ‌ ಮೂಲಕ‌ ಕೊಡುತ್ತಿವೆ ಎಂದರು.
ಸಹಕಾರಿ ಸಂಘಗಳ ಸದಸ್ಯರಿಗೆ ನಮ್ಮ ಸಂಘ ಎಂಬ ಅಭಿಮಾನ ತೊಡಗಿಕೊಂಡರು. ಸಂಕಷ್ಟದ ಕಾಲದಲ್ಲೂ ಸೊಸೈಟಿ ಅಭಿವೃದ್ದಿಗೊಳಿಸಲು ಮುಂದಾಗಿದ್ದಾರೆ. ಅಭಿಮಾನದ‌ ಸಂಘವಾಗಿ ಹಿರಿಯರು ಬೆಳೆಸಿದ್ದಾರೆ. ಇಂದಿನ‌ ಸಂಘದ ಸ್ಥಿತಿಗೆ ಅಂದಿನ ಭದ್ರ ಬುನಾದಿ ಹಾಕಿದ್ದಾರೆ. ಹಿರಿಯರ ಶ್ರಮದ ಫಲ ಸೊಸೈಟಿ ಬೆಳೆದಿದೆ ಎಂದರು.
ಸಹಕಾರಿ ಮಾಡುತ್ತದೆಂದು ಸವಾಲುಗಳು ಅಷ್ಟೇ ಇವೆ. ಸಹಕಾರಿ ಕ್ಷೇತ್ರ ಪಾವಿತ್ರ್ಯತೆ ನಮ್ಮಲ್ಲಿ ಇದ್ದಂತೆ ಉಳಿದಡೆ ಉಳಿಸಿಕೊಂಡಿಲ್ಲ. ಹಾಗಾಗಿ ಸರಕಾರ‌ ಕೂಡ ನಿಯಂತ್ರಣ ಮಾಡುತ್ತಿದೆ. ಇನ್ನಾರೋ ತಪ್ಪು ಮಾಡಿದ್ದನ್ನು ಸರಿ‌ಮಾಡಲು‌ ಸಮಸ್ಯೆ ನಮಗೂ ಆಗುತ್ತಿದೆ. ಆರ್ಥಿಕ ಕ್ಷೇತ್ರಕ್ಕೆ ಪಾವಿತ್ರ್ಯತೆ, ಪ್ರಾಮುಖ್ಯತೆ ಎರಡೂ ಇದೆ ಎಂದರು.

ಅತಿಥಿಯಾಗಿ‌ ಪಾಲ್ಗೊಂಡ ಧಾರವಾಡ ಹಾಲು ಒಕ್ಕೂಟ ನಿರ್ದೇಶಕ ಸುರೇಶ್ಚಂದ್ರ ಹೆಗಡೆ ಕೆಶಿನ್ಮನೆ ಒಬ್ಬ ವ್ಯಕ್ತಿಗೆ 75 ಅಂದರೆ ವೃದ್ದಾಪ್ಯ. ಸಂಸ್ಥೆಗೆ ಯೌವ್ವನದ ಕಾಲ. ಸಹಕಾರಿ ಸಂಸ್ಥೆ ಅನೇಕ ಸವಾಲುಗಳ ಎದುರಿಸಿ ನಡೆಯಬೇಕು ಎಂದರು.
ಎಪಿಎಂಸಿ ಅಧ್ಯಕ್ಷ ಪ್ರಶಾಂತ ಗೌಡ, ಸಹಕಾರಿ ಸಂಘಗಳಿಗೆ ಏನಾದರೂ ಮಾಡಬೇಕು. ಯಡಹಳ್ಳಿ ಸಹಿತ ನಾಲ್ಕು ಸಂಘಗಳಿಗೆ ಗೋದಾಮು ಕೊಡಲು ಟೆಂಡರ್ ಆಗಿದೆ. ಹಲವು ಸೊಸೈಟಿಗಳಿಗೆ ಮೂರು ಕೋಟಿ ರೂ. ಕಾಮಗಾರಿ ಪ್ರಸ್ತಾವನೆ ಇದೆ ಎಂದರು.
ಸಹಕಾರಿ ರತ್ನ ಶಂಭುಲಿಂಗ ಹೆಗಡೆ ನಿಡಗೋಡ, ರೈತರು ಮಿಶ್ರ ಬೆಳೆಗೆ ಹೋಗಬೇಕಾದ್ದು ಅನಿವಾರ್ಯ ಆಗಲಿದೆ ಎಂದರು.
ಅಧ್ಯಕ್ಷತೆವಹಿಸಿದ್ದ ಸಂಘದ ಅಧ್ಯಕ್ಷ ಜಿ.ಆರ್.ಹೆಗಡೆ ಬೆಳ್ಳೇಕೇರಿ, ಸಂಘ ಕಷ್ಟದಲ್ಲಿ ಕೂಡ ಬೆಳೆದಿದೆ. ಅಂದಿನವರ ಪರಿಶ್ರಮದಿಂದ ಇಂದು ಅಮೃತ ಮಹೋತ್ಸವದ ಹರ್ಷದಲ್ಲಿದೆ ಎಂದರು.
ಯಡಹಳ್ಳಿ ಗ್ರಾ.ಪಂ.ಅಧ್ಯಕ್ಷೆ ರಾಜೇಶ್ವರಿ ಗೌಡ, ಕಾನಗೋಡ ಗ್ರಾ.ಪಂ.ಅಧ್ಯಕ್ಷೆ ಗೀತಾ ಪೂಜಾರಿ, ಉಪಾಧ್ಯಕ್ಷ ಶ್ರೀಪತಿ ಭಟ್ಟ ಬೂದಿಮುರಡು, ದೇವರು ಭಟ್ಟ, ಜಿ.ಎಸ್.ಹೆಗಡೆ, ವಿಜಯಾ ಹೆಗಡೆ, ಶ್ರೀಮತಿ ಹೆಗಡೆ, ಮಂಜುನಾಥ ಹೆಗಡೆ, ಮುಖ್ಯ‌ಕಾರ್ಯನಿರ್ವಾಹಕ ಮುರಳೀಧರ ಹೆಗಡೆ ಕಲ್ಲಕೈ ವೇದಿಕೆಯಲ್ಲಿದ್ದರು.
ಎ.ಆರ್.ಭಟ್ಟ ಕರಸುಳ್ಳಿ ಸ್ವಾಗತಿಸಿದರು. ಅಧ್ಯಕ್ಷ ಜಿ.ಆರ್.ಹೆಗಡೆ ಬೆಳ್ಳೇಕೇರಿ ಪ್ರಾಸ್ತಾವಿಕ ಮಾತನಾಡಿದರು. ಶುಭಾ‌ ಭಟ್, ವಿ.ಜಿ.ಹೆಗಡೆ ನಿರ್ವಹಿಸಿದರು. ರಾಜಶೇಖರ ಭಟ್ಟ ವಂದಿಸಿದರು.
ಇದೇ ವೇಳೆ ಐವರು ಹಿರಿಯ ಸದಸ್ಯರಾದ ಗಣಪತಿ ಮಾ ಭಟ್ಟ ಕರಸುಳ್ಳಿ, ಗಣಪತಿ ಹೆಗಡೆ ಕೂಡಗಟ್ಟಿಗೆ, ಮಹಾಬಲೇಶ್ವರ ನಾಯ್ಕ ಕಾನಗೋಡ, ಸಾವಿತ್ರಿ ಗೌಡ ಕಂಬಳೀಸರ, ವಿಶ್ವನಾಥ ಹೆಗಡೆ ಯಡಹಳ್ಳಿ ಹಿರಿಯ ಸಹಕಾರಿ ಗೌರವ ಸಲ್ಲಿಸಲಾಯಿತು. ಸೈನಿಕರಾದ ನಿವೃತ್ತರಾದ ಕೇಶವ ಹೆಗಡೆ ಅಬ್ರಿಮನೆ, ನರೇಂದ್ರ ಅಣ್ಣಪ್ಪ ನಾಯ್ಕ, ಜೈವಂತ ಸು.ನಾಯ್ಕ ಅವರನ್ನು, ವಿಶ್ವಶಾಂತಿ‌ ಸರಣಿಯಲ್ಲಿ ಯಕ್ಷಗಾನದಲ್ಲಿ ಇಂಡಿಯಾ ಬುಕ್ ಆಪ್ ರೆಕಾರ್ಡ ಮಾಡಿದ ತುಳಸಿ ಹೆಗಡೆ ಅವರನ್ನು ಅಭಿನಂದಿಸಲಾಯಿತು. ಅಮೃತ ಸಿಂಚನ ಬಿಡುಗಡೆಗೊಳಿಸಲಾಯಿತು. ರಂಗೋಲಿ, ಕರಕುಶಲ ವಸ್ತುಗಳ‌ ಪ್ರದರ್ಶನ ಗಮನ ಸೆಳೆಯಿತು.

ಅಡಿಕೆ ತೋಟ ಬೇರೆಯವರಿಗೆ ನಿರ್ವಹಣೆ ಆಗದಿದ್ದರೆ ಸೊಸೈಟಿ‌ ನಿರ್ವಹಣೆ‌ ಮಾಡುತ್ತೇವೆ. ಬೆಟ್ಟ ಅಭಿವೃದ್ದಿಗೂ ಯೋಜಿಸಿದ್ದೆವೆ.- ಜಿ.ಆರ್.ಹೆಗಡೆ ಬೆಳ್ಳೇಕೇರಿ, ಅಧ್ಯಕ್ಷರು

ಸೊಸೈಟಿಗಳು ಕುಟುಂಬ, ಕೃಷಿ ನಿರ್ವಹಿಸಬೇಕಾಗುವ ಕಾಲ ಬರಲಿದೆ. ಸಂಘಗಳು ಹಳ್ಳಿ ಉಳಿಸುವ ಕೆಲಸ ಮಾಡಬೇಕಿದೆ. ಯುವ ಶಕ್ತಿ ಉಳಿಸುವ ಕೆಲಸ ಆಗಬೇಕು. ಸಹಕಾರಿ ಸಂಘಗಳೂ ಶೈಕ್ಷಣಿಕ ಸಾಲ ಕೊಡಲೂ ಸೂಚಿಸಿದ್ದೇವೆ.- ವಿಶ್ವೇಶ್ವರ ಹೆಗಡೆ ಕಾಗೇರಿ, ಸ್ಪೀಕರ್

300x250 AD

ಕಾನೂನು ತಿಳುವಳಿಕೆ ಮಾಡಿಕೊಳ್ಳುವ ಸಹಕಾರಿ ನಿರ್ದೇಶಕರು ಬೇಕು. ಬದಲಾಗುತ್ತಿರುವ ಕಾಲ ಘಟ್ಟದಲ್ಲಿ ಸಂಸ್ಥೆಗೆ ಸಮಯ ಕೊಟ್ಟು ಕೆಲಸ ಮಾಡುವ ಯುವ ಪ್ರಾತಿನಿಧ್ಯ ಬೇಕು.- ಸುರೇಶ್ಚಂದ್ರ ಹೆಗಡೆ‌ ಕೆಶಿನ್ಮನೆ, ನಿರ್ದೇಶಕರು, ಕೆಡಿಸಿಸಿ ಬ್ಯಾಂಕ್

Share This
300x250 AD
300x250 AD
300x250 AD
Back to top