Slide
Slide
Slide
previous arrow
next arrow

ವಿದ್ಯಾರ್ಥಿನಿಗೆ ಅಶ್ಲೀಲ ಮೆಸೇಜ್; ಶಿರಸಿ ಕಾಲೇಜು ಉಪನ್ಯಾಸಕನಿಗೆ ಗೂಸಾ

300x250 AD

ಶಿರಸಿ: ಇಲ್ಲಿಯ ಪದವಿ ಪೂರ್ವ ಕಾಲೇಜಿನ ಅತಿಥಿ ಉಪನ್ಯಾಸಕನೋರ್ವ ವಿದ್ಯಾರ್ಥಿನಿಯೋರ್ವಳಿಗೆ ಅಶ್ಲೀಲವಾಗಿ ಮೆಸೇಜ್ ಮಾಡಿ ಸಾರ್ವಜನಿಕರಿಂದ‌ ಒದೆತಿಂದ ಘಟನೆ ನಡೆದಿದೆ.

ಈತ ನಗರದ ಎರಡು ಸರಕಾರಿ ಪದವಿಪೂರ್ವ ಕಾಲೇಜುಗಳಲ್ಲಿ ಅತಿಥಿ ಉಪನ್ಯಾಸಕನಾಗಿ ಇಂಗ್ಲಿಷ್ ಬೋಧನೆ ಮಾಡುತ್ತಿದ್ದು, ಕೊರೋನಾ ಸಂದರ್ಭದಲ್ಲಿ ವಿದ್ಯಾರ್ಥಿಗಳಿಗೆ ಆನ್‌ಲೈನ್ ಪಾಠಕ್ಕಾಗಿ ವಾಟ್ಸಪ್ ಗ್ರೂಪ್ ಮಾಡಿಕೊಂಡಿದ್ದಾಗ, ವಿದ್ಯಾರ್ಥಿನಿಯರಿಗೆ ಕರೆ ಮಾಡಿ ಪರಿಚಯ ಮಾಡಿಕೊಂಡಿದ್ದನು.

ಕಾಲ ಕ್ರಮೇಣ ಪರಿಚಯವನ್ನೇ ದುರುಪಯೋಗಪಡಿಸಿಕೊಂಡು ಕೆಲವು ವಿದ್ಯಾರ್ಥಿನಿಯರಿಗೆ ಅಶ್ಲೀಲವಾಗಿ ಮೆಸೇಜ್ ಮಾಡುತ್ತಿದ್ದನೆಂದು ಹೇಳಲಾಗಿದೆ. ಕೆಲವು ಹುಡುಗಿಯರು ಈ ಮೆಸೇಜನ್ನು ಸ್ವೀಕರಿಸಿದರೂ ಕೆಲವರು ತಿರಸ್ಕರಿಸಿ ತಿದ್ದಿಕೊಳ್ಳಲು ಅವಕಾಶ ನೀಡಿದ್ದರೆಂದು ಹೇಳಲಾಗಿದೆ. ಆದರೆ ಮರಾಠಿಕೊಪ್ಪದ ವಿದ್ಯಾರ್ಥಿನಿಯೊರ್ವಳು ಮಾತ್ರ ಸರಿಯಾಗಿ ಪಾಠ ಕಲಿಸಿದ್ದಾಳೆ. ಉಪನ್ಯಾಸಕನನ್ನು ನಗರಸಭೆಯ ನೀರಿನ ಟ್ಯಾಂಕ್ ಬಳಿ ಕರೆಸಿಕೊಂಡು ಹೊಡೆಸಿದ್ದಾಳೆಂದು ತಿಳಿದು ಬಂದಿದೆ. ಹೊಡೆತ ತಿಂದವನು ತನ್ನ ಗೆಳೆಯರ ಸಹಾಯದಿಂದ ಆಸ್ಪತ್ರೆ ಸೇರಿದರೆ, ಹೊಡೆದವರು ಕಾಲೇಜಿಗೆ ಹೋಗಿ ನಿಮ್ಮ ಉಪನ್ಯಾಸಕನಿಗೆ ಚೆನ್ನಾಗಿ ಪಾಠ ಕಲಿಸಿದ್ದೇವೆಂದು ಹೇಳಿ ಹೋಗಿದ್ದಾರಂತೆ ಎಂದು ತಿಳಿದುಬಂದಿದೆ.

300x250 AD

Share This
300x250 AD
300x250 AD
300x250 AD
Back to top