Slide
Slide
Slide
previous arrow
next arrow

ಹಣಕಾಸು ಮಾರುಕಟ್ಟೆಯಲ್ಲಿ ವೃತ್ತಿ ಅವಕಾಶಗಳು ಮಾಹಿತಿ ಕಾರ್ಯಾಗಾರ

300x250 AD

ದಾಂಡೇಲಿ: ನಗರದ ಬಂಗೂರನಗರ ಪದವಿ ಮಹಾವಿದ್ಯಾಲಯದ ಗ್ರಂಥಾಲಯ ಸಭಾಭವನದಲ್ಲಿ ಕಾಲೇಜಿನ ವಾಣಿಜ್ಯ ವಿಭಾಗದ ಆಶ್ರಯದಡಿ ಹಣಕಾಸು ಮಾರುಕಟ್ಟೆಯಲ್ಲಿ ವೃತ್ತಿ ಅವಕಾಶಗಳು ಎಂಬ ವಿಷಯದ ಬಗ್ಗೆ ವಾಣಿಜ್ಯ ಪದವಿ ವಿದ್ಯಾರ್ಥಿಗಳಿಗೆ ಮಾಹಿತಿ ಕಾರ್ಯಾಗಾರ ನಡೆಯಿತು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ಕಾಲೇಜಿನ ಪ್ರಾಚಾರ್ಯ ಡಾ.ಬಿ.ಎಲ್.ಗುಂಡೂರ್, ವಾಣಿಜ್ಯ ಪದವಿ ವಿದ್ಯಾರ್ಥಿಗಳಿಗೆ ಈ ತರಬೇತಿ ಕಾರ್ಯಕ್ರಮವು ಅವಶ್ಯಪೂರ್ಣವಾಗಿದೆ. ಮುಂದಿನ ಕಲಿಕೆಗೆ ಹಾಗೂ ಉಜ್ವಲ ಜೀವನಕ್ಕೆ ಈ ತರಬೇತಿಯ ಲಾಭವನ್ನು ಪಡೆದುಕೊಳ್ಳುವಂತೆ ಕರೆ ನೀಡಿದರು.
ಸಂಪನ್ಮೂಲ ವ್ಯಕ್ತಿಗಳಾಗಿ ಭಾಗವಹಿಸಿ ಮಾತನಾಡಿದ ನಂದನ್ ಗುಲಾಲ್ ದವರ್ ಅವರು ಇಡೀ ವಿಶ್ವವೆ ಹಣದ ಮೇಲೆ ನಿಂತಿದೆ. ನಮ್ಮ ಪ್ರತಿಯೊಂದು ಅವಶ್ಯಕತೆಗಳನ್ನು ಪೊರೈಸಲು ಬಹುಮುಖ್ಯವಾಗಿ ಹಣ ಬೇಕು. ಹಣದ ಹೂಡಿಕೆ ಯಾಕೆ, ಹೇಗೆ ಎಂಬುವುದನ್ನು ವಿವರಿಸಿದ ಅವರು ಶೇರು ಮಾರುಕಟ್ಟೆಯಲ್ಲಿ ಶೇರಿನ ವ್ಯವಹಾರ ಮಾಡುವ ವಿಧಾನವನ್ನು ವಿವರಿಸಿದರು.
ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದ ಕಾಲೇಜಿನ ಉಪ ಪ್ರಾಚಾರ್ಯರುಗಳಾದ ಡಾ.ನಯನಾ ರೇವಣಕರ್ ಮತ್ತು ಎಸ್.ಎಸ್.ಹಿರೇಮಠ ಅವರು ಸಂದರ್ಭೋಚಿತವಾಗಿ ಮಾತನಾಡಿದರು. ಕಾರ್ಯಕ್ರಮದಲ್ಲಿ ಕಾಲೇಜಿನ ನೂತನ ಪ್ರಾಚಾರ್ಯರಾದ ಡಾ.ಬಿ.ಎಲ್.ಗುಂಡೂರ್ ಹಾಗೂ ನಂದನ್ ಗುಲಾಲ್ ದವರ್ ಅವರನ್ನು ಸನ್ಮಾನಿಸಲಾಯಿತು. ಆಶಿತಾ ಸಾಲ್ಡಾನ ಸ್ವಾಗತಿಸಿದ ಕಾರ್ಯಕ್ರಮಕ್ಕೆ ಲಕ್ಷ್ಮಿ ಬಿ.ಪರಬ್ ವಂದಿಸಿದರು. ಏಂಜೆಲ್ ಜಾನ್ ಕಾರ್ಯಕ್ರಮವನ್ನು ನಿರೂಪಿಸಿದರು. ವೇದಿಕೆಯಲ್ಲಿ ವಾಣಿಜ್ಯ ವಿಭಾಗದ ಮುಖ್ಯಸ್ಥೆ ಆಶಿತಾ ಸಾಲ್ಡಾನ, ಉಪನ್ಯಾಸಕಿ ರಹಿಲಾ ಎಸ್.ಸನದಿ ಉಪಸ್ಥಿತರಿದ್ದರು.

300x250 AD
Share This
300x250 AD
300x250 AD
300x250 AD
Back to top