ಶಿರಸಿ: ಕೊಡೆಗದ್ದೆ ವಿದ್ವಾನ್ ರಾಮಚಂದ್ರ ಭಟ್ಟ ಅವರ ಸ್ಮರಣಾರ್ಥ ರಾಮಗುಣಪ್ರಭಾ ಸಂಸ್ಮರಣ ಗ್ರಂಥ ಬಿಡುಗಡೆ, ಯಕ್ಷಗಾನ ತಾಳಮದ್ದಲೆ ಜ.22ರ ಮಧ್ಯಾಹ್ನ 3 ರಿಂದ ತಾಲೂಕಿನ ರೇವಣಕಟ್ಟಾ ಶ್ರೀವಿನಾಯಕ ವೈದಿಕ ಸಂಸ್ಕೃತ ಪಾಠಶಾಲೆಯಲ್ಲಿ ನಡೆಯಲಿದೆ.
ಗ್ರಂಥವನ್ನು ಪ್ರಸಿದ್ಧ ವಿದ್ವಾಂಸ ಅಗ್ಗೆರೆ ಗಂಗಾಧರ ಭಟ್ ಲೋಕಾರ್ಪಣೆಗೊಳಿಸಲಿದ್ದು, ಅಧ್ಯಕ್ಷತೆಯನ್ನು ಗೀರ್ವಾಣಿ ವಿದ್ಯಾ ಸಂಸ್ಥೆ ಅಧ್ಯಕ್ಷ ಗಣಪತಿ ಭಟ್ಟ ಕೊಪ್ಪಲತೋಟ ವಹಿಸಿಕೊಳ್ಳುವರು. ಅತಿಥಿಗಳಾಗಿ ಯಕ್ಷಗಾನ ಕಲಾವಿದ ಶಿವಾನಂದ ಹೆಗಡೆ ಕೆರೆಮನೆ, ದೇವಸ್ಥಾನದ ಮೊಕ್ತೆಸರ ವಸಂತ ಹೆಗಡೆ ಸಿರಿಕುಳಿ, ಕರೂರು ಸೀಮಾ ಅಧ್ಯಕ್ಷ ಉಮಾಪತಿ ಭಟ್ಟ ಮತ್ತಿಗಾರ ಪಾಲ್ಗೊಳ್ಳುವರು.
ಬಳಿಕ ಶ್ರೀರಾಮ ನಿರ್ಯಾಣ ತಾಳಮದ್ದಲೆ ನಡೆಯಲಿದೆ. ಹಿಮ್ಮೇಳದಲ್ಲಿ ಅನಂತ ದಂತಳಿಕೆ, ನರಸಿಂಹ ಭಟ್ಟ ಹಂಡ್ರಮನೆ, ಮುಮ್ಮೇಳದಲ್ಲಿ ನಾರಾಯಣ ಯಾಜಿ,ಎಂ.ಎನ್.ಹೆಗಡೆ ಹಲವಳ್ಳಿ, ಶಿವಾನಂದ ಹೆಗಡೆ ಕೆರೆಮನೆ, ನಾರಾಯಣ ಭಟ್ಟ ಬಳ್ಳಿ ಪಾಲ್ಗೊಳ್ಳುವರು . ಕಾರ್ಯಕ್ರಮವನ್ನು ಗೀರ್ವಾಣಿ ವಿದ್ಯಾ ಸಂಸ್ಥೆ, ಶ್ರೀವಿನಾಯಕ ವೈದಿಕ ಸಂಸ್ಕೃತ ಪಾಠಶಾಲೆ, ಕೀರ್ತಿಶೇಷ ವಿದ್ವಾನ್ ರಾಮಚಂದ್ರ ಭಟ್ಟರ ಶಿಷ್ಯವೃಂದ ಹಮ್ಮಿಕೊಂಡಿದೆ.