Slide
Slide
Slide
previous arrow
next arrow

‘ರಾಜ್ಯ ಯುವ ಪ್ರಶಸ್ತಿ’ಗೆ ಜಿಲ್ಲೆಯ ವಿನಾಯಕ ನಾಯ್ಕ ಆಯ್ಕೆ

300x250 AD

ಹೊನ್ನಾವರ: ತಾಲೂಕಿನ ಮೂಡ್ಕಣಿ ಗ್ರಾಮದ ನಿವಾಸಿಯಾಗಿರುವ ವಿನಾಯಕ ನಾಯ್ಕ ಅವರು 2022-23ನೇ ಸಾಲಿನ ‘ರಾಜ್ಯ ಯುವ ಪ್ರಶಸ್ತಿ’ಗೆ ಆಯ್ಕೆಯಾಗಿದ್ದಾರೆ.
ಸಾಮಾಜಿಕ ಕಾಳಜಿ ಹಾಗೂ ನಿಸ್ವಾರ್ಥ ಗಣನೀಯ ಸೇವೆಯನ್ನು ಪರಿಗಣಿಸಿ ಪ್ರಶಸ್ತಿ ನೀಡಲಾಗುತ್ತಿದೆ. ಕರ್ನಾಟಕ ರಾಜ್ಯ ಯುವ ಸಂಘಗಳ ಒಕ್ಕೂಟ ಹಾಗೂ ದಕ್ಷಿಣ ಕನ್ನಡ ಜಿಲ್ಲಾ ಯುವ ಒಕ್ಕೂಟದ ಸಂಯುಕ್ತ ಆಶ್ರಯದಲ್ಲಿ ಜ.18ರಂದು ದಕ್ಷಿಣ ಕನ್ನಡ ಜಿಲ್ಲೆಯ ಕಡಬಾ ತಾಲ್ಲೂಕಿನ ವಲ್ಲಿಶಾ ಸಭಾಂಗಣದಲ್ಲಿ ನಡೆಯುವ ಸ್ವಾಮಿ ವಿವೇಕಾನಂದ ಜನ್ಮದಿನಾಚರಣೆ ಹಾಗೂ ರಾಜ್ಯ ಯುವ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಪ್ರಶಸ್ತಿ ಸ್ವೀಕರಿಸಲಿದ್ದಾರೆ.
ವಿನಾಯಕ ನಾಯ್ಕ ಅವರು ಕಳೆದ ಸುಮಾರು 10 ವರ್ಷಗಳಿಂದ ಶಿಕ್ಷಣ, ಕಲೆ, ಸಾಂಸ್ಕೃತಿಕ, ಆರೋಗ್ಯ ಹೀಗೆ ವಿವಿಧ ಕ್ಷೇತ್ರಗಳಲ್ಲಿ ಸೇವೆ ಸಲ್ಲಿಸುತ್ತಿದ್ದಾರೆ. ಸರಕಾರಿ ಶಾಲಾ ಮಕ್ಕಳಿಗೆ ಉಚಿತ ನೋಟ್ ಬುಕ್ ವಿತರಣೆ, ಆಸಕ್ತ ಮಹಿಳೆಯರಿಗೆ ಉಚಿತ ಹೊಲಿಗೆ ತರಬೇತಿ ಮತ್ತು ಸರಕಾರದಿಂದ ಹೊಲಿಗೆ ಯಂತ್ರ ದೊರಕುವಂತೆ ಮಾಡಿದ್ದರು. ಆಸಕ್ತ ವಿದ್ಯಾರ್ಥಿಗಳಿಗೆ ಉಚಿತ ಕಂಪ್ಯೂಟರ್ ತರಬೇತಿ, ಆರೋಗ್ಯ ತಪಾಸಣೆಯ ಉಚಿತ ಶಿಬಿರಗಳ ಆಯೋಜನೆ, ಸ್ವಚ್ಚ ಭಾರತ ಅಭಿಯಾನ, ಪರಿಸರ ಜಾಗೃತಿ, ಮತ್ತು ಪ್ಲಾಸ್ಟಿಕ ಬಳಕೆಯ ದುಷ್ಪರಿಣಾಮಗಳಿಗೆ ಸಂಬoಧಿಸಿದ ಅರಿವು ಮೂಡಿಸುವ ಕಾರ್ಯಕ್ರಮ ಆಯೋಜನೆ, ವಿವಿಧ ಇಲಾಖೆಗಳ ಸಹಯೋಗದಲ್ಲಿ ಯುವಜನ ಮೇಳ, ಯುವಜನೋತ್ಸವ, ಯುವ ಸೌರಭ ಕಾರ್ಯಕ್ರಮಗಳನ್ನು ಸಂಘಟನೆ ಯಶಸ್ವಿಗೊಳಿಸಿದ್ದರು.
ಗ್ರಾಮಗಳಲ್ಲಿ ನಿರಂತರ ಸಾಕ್ಷರತೆಯ ಅಭಿವೃದ್ಧಿಗಾಗಿ ಶ್ರಮಿಸಿದ್ದಾರೆ. ಶೌಚಾಲಯ ಅಗತ್ಯ ಬಿಂಬಿಸುವ ಕಾರ್ಯಕ್ರಮಗಳು. ಕೋವಿಡ್ ಸಂದರ್ಭದಲ್ಲಿ ಆಶಾ ಹಾಗೂ ಅಂಗನವಾಡಿ ಕಾರ್ಯಕರ್ತೆಯರಿಗೆ ಅಗತ್ಯವಿರುವ ಸಾಮಗ್ರಿಗಳ ಉಚಿತ ವಿತರಣೆ. ಕೋವಿಡ್ ಸೊಂಕಿತರಿಗೆ ಉಚಿತ ಔಷಧಿ ವಿತರಣೆ, ಕೋವಿಡ್ ಸಂದರ್ಭದಲ್ಲಿ ಬಡ ಅರ್ಹ ಫಲಾನುಭವಿಗಳಿಗೆ ಉಚಿತ ದಿನಸಿ ಮತ್ತು ಅವಶ್ಯಕ ವಸ್ತುಗಳ ವಿತರಣೆ, ಕನ್ನಡ ಮತ್ತು ಸಂಸ್ಕೃತ ಇಲಾಖೆಯ ಸಹಕಾರದಲ್ಲಿ ವಿವಿಧ ಕಲೆ ಮತ್ತು ಸಾಂಸ್ಕೃತಿಕ ಕಾರ್ಯಕ್ರಮಗಳು ಮತ್ತು ಸಾಮಾಜಿಕ ನಾಟಕ ಆಯೋಜನೆ, ಹಳ್ಳಿಯ ಯುವಜನತೆಗೆ ವಿವಿಧ ಸ್ಪರ್ಧೆಗಳ ಆಯೋಜನೆ ಮತ್ತು ಬಹುಮಾನ ನೀಡಿರುವುದು.ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿದ ಮಹನೀಯರಿಗೆ ಸನ್ಮಾನ ಮಾಡಿರುವುದು, ವಿವಿಧ ಕ್ರೀಡಾ ಚಟುವಟಿಕೆಗಳನ್ನು ಏರ್ಪಡಿಸಿ ಪ್ರೋತ್ಸಾಹಿಸಿದ್ದಾರೆ.
ಶ್ರೀಶಂಬುಲಿoಗೇಶ್ವರ ಯುವಕ ಸಂಘದ ಅಧ್ಯಕ್ಷರಾಗಿ ಕಾರ್ಯನಿರ್ವಹಣೆ, ಜಿಲ್ಲಾ ಒಕ್ಕೂಟದ ಪ್ರಧಾನ ಕಾರ್ಯದರ್ಶಿ, ತಾಲೂಕ ಯುವ ಒಕ್ಕೂಟದ ಅಧ್ಯಕ್ಷರಾಗಿ ಜವಾಬ್ದಾರಿ ವಹಿಸಿಕೊಂಡಿದ್ದಾರೆ. ಜಿಲ್ಲಾ ಯುವ ಪ್ರಶಸ್ತಿ, ಸ್ವಾಮಿ ವಿವೇಕಾನಂದ ಸದ್ಭಾವನಾ ರಾಜ್ಯ ಪ್ರಶಸ್ತಿ ಪಡೆದಿದ್ದಾರೆ.

300x250 AD
Share This
300x250 AD
300x250 AD
300x250 AD
Back to top