ಭಟ್ಕಳ: ಸಾಕಷ್ಟು ವರ್ಷಗಳಿಂದ ತಾಲೂಕಿನ ಪೇಟೆ ರಸ್ತೆಗೆ ತೆರಳುವ ಹೆದ್ದಾರಿಗೆ ತಾಗಿಕೊಂಡಿರುವ ಹಳೆಯ ಫುಟ್ಪಾತ್ನ್ನು ಪೊಲೀಸರು ವಾಹನ ದಟ್ಟಣೆ ಸರಿದೂಗಿಸುವ ಹಿನ್ನೆಲೆ ತೆರವು ಮಾಡಿ ವಾಹನ ಸವಾರರಿಗೆ ಅನೂಕೂಲ ಮಾಡಿಕೊಟ್ಟಿದ್ದಾರೆ.
ಪಟ್ಟಣದಲ್ಲಿ ದಿನದಿಂದ ದಿನಕ್ಕೆ ವಾಹನ ದಟ್ಟಣೆ ಸೇರಿದಂತೆ ಅಪಘಾತದ ಸಂಖ್ಯೆ ಏರಿಕೆಯಾಗುತ್ತಿದ್ದು, ಈ ನಿಟ್ಟಿನಲ್ಲಿ ಪೊಲೀಸರು ಅನುಕೂಲಕರ ಸಂಚಾರ ವ್ಯವಸ್ಥೆ ಮಾಡಿಕೊಡಲು ಮುಂದಾದರೂ ನಿಯಂತ್ರಣ ಮಾತ್ರ ಸಾಧ್ಯವಾಗಿಲ್ಲವಾಗಿತ್ತು. ಇದೀಗ ತಾಲೂಕು ಪಂಚಾಯತಿ ಕಚೇರಿಯಿಂದ ಹೆದ್ದಾರಿಗೆ ಹೊಂದಿಕೊಂಡಂತೆ ಪೇಟೆ ಮುಖ್ಯ ರಸ್ತೆಗೆ ಸಂಪರ್ಕ ಸಾಧಿಸುವ ರಸ್ತೆಯಲ್ಲಿ ಬಹು ವರ್ಷಗಳ ಹಿಂದೆ ಪಾದಚಾರಿಗಳಿಗೆ ನಿರ್ಮಿಸಲಾದ ಫುಟ್ಪಾತ್ನ್ನು ವಾಹನ ಸವಾರರ ಅನುಕೂಲಕ್ಕಾಗಿ ಹಾಗೂ ಅಪಘಾತ ನಿಯಂತ್ರಣಕ್ಕಾಗಿ ತೆರವುಗೊಳಿಸಿ ಸುಗಮ ಸಂಚಾರಕ್ಕೆ ಅನುವು ಮಾಡಿಕೊಟ್ಟಿದ್ದಾರೆ.
ಸದ್ಯ ನಡೆಯುತ್ತಿರುವ ಹೆದ್ದಾರಿ ಅಗಲೀಕರಣದಿಂದ ಫುಟ್ಪಾತ್ಗೆ ಹಾಕಲಾದ ಕಬ್ಬಿಣದ ಗೇಟ್ ಸಹ ಕಿತ್ತು ಹೋಗಿದ್ದರಿಂದ ಕೆಲವು ದ್ವಿಚಕ್ರ ವಾಹನ ಸವಾರರು ವಿರುದ್ಧ ದಿಕ್ಕಿನಲ್ಲಿ ಸಂಚರಿಸುತ್ತಾ ಅಪಘಾತಕ್ಕೆ ಕಾರಣವಾಗುತ್ತಿದ್ದರು. ಹೀಗಾಗಿ ಸಿಪಿಐ ದಿವಾಕರ ಅವರ ಮುಂದಾಳತ್ವದಲ್ಲಿ ಹೆದ್ದಾರಿ ಅಗಲೀಕರಣ ಕಾಮಗಾರಿ ನಡೆಸುತ್ತಿರುವ ಐಆರ್ಬಿ ಕಂಪನಿಯು ಹೊಂಡದಿoದ ಕೂಡಿರುವ ಫುಟ್ ಪಾತ್ ತೆರವು ಮಾಡಿ ದ್ವಿಮುಖ ರಸ್ತೆ ಸಂಚಾರದ ರೀತಿಯಲ್ಲಿ ಮಧ್ಯದಲ್ಲಿ ಬ್ಯಾರಿಕೇಡ್ ಅಳವಡಿಸಲಾಗಿದೆ. ಸದ್ಯಕ್ಕೆ ತೆರವಾದ ಜಾಗದಲ್ಲಿ ಮಣ್ಣು, ಕಲ್ಲು ಹಾಕಿ ತಾತ್ಕಾಲಿಕವಾಗಿ ವಾಹನ ಸಂಚಾರಕ್ಕೆ ವ್ಯವಸ್ಥೆ ನೀಡಿ ಓರ್ವ ಪೊಲೀಸ್ ಸಿಬ್ಬಂದಿಯನ್ನು ಪೇಟೆ ರಸ್ತೆಯ ಇಳಿಜಾರು ಚೌಕಿಯಲ್ಲಿ ನಿಯೋಜಿಸಲಾಗಿದೆ. ಟ್ರಾಫಿಕ್ ಜಾಮ್ ಆದಲ್ಲಿ ನಿಯಂತ್ರಿಸುವ ಕೆಲಸ ಸಹ ಪೋಲಿಸ ಇಲಾಖೆ ನಿರ್ವಹಿಸುತ್ತಿದೆ.
ವಾಹನ ದಟ್ಟಣೆ ನಿಯಂತ್ರಣದ ಹಿನ್ನೆಲೆ ಸಂಶುದ್ದೀನ್ ಸರ್ಕಲ್ ಬಳಿಯೂ ಪೊಲೀಸ್ ಚೌಕಿ ನಿರ್ಮಿಸಿ, ಪಾದಚಾರಿಗಳಿಗೆ ರಸ್ತೆ ದಾಟಲು ಅನುಕೂಲವಾಗಲು ಜೀಬ್ರಾ ಪಟ್ಟಿಯನ್ನು ಅಳವಡಿಸಲಾಗಿತ್ತು. ಜೊತೆಗೆ ಹೆದ್ದಾರಿ ಮಧ್ಯದ ಡಿವೈಡರ್ನಲ್ಲಿ ಸ್ಥಳೀಯ ಸಂಘ- ಸಂಸ್ಥೆಗಳ ಸಹಕಾರದಿಂದ ಕಬ್ಬಿಣದ ಬೋರ್ಡನ್ನು ಅಳವಡಿಸುವ ಮೂಲಕ ಸ್ವಲ್ಪ ಮಟ್ಟಿಗೆ ವಾಹನ ದಟ್ಟಣೆ ನಿಯಂತ್ರಿಸುವಲ್ಲಿ ಪೊಲೀಸ್ ಇಲಾಖೆ ಯಶಸ್ವಿಯಾಗಿದೆ.