• first
  Slide
  Slide
  previous arrow
  next arrow
 • ಜ.18ರಿಂದ ಕುಣಬಿಗಳ ಜೊಯಿಡಾ ಟು ಕಾರವಾರ ಚಲೋ

  300x250 AD

  ಕಾರವಾರ: ಕುಣಬಿ ಬುಡಕಟ್ಟು ಸಮುದಾಯದವರನ್ನು ಪರಿಶಿಷ್ಟ ಪಂಗಡಕ್ಕೆ ಸೇರಿಸುವಂತೆ ಒತ್ತಾಯಿಸಿ ಜ.18ರಿಂದ 20ರವರೆಗೆ ಜೊಯಿಡಾದಿಂದ ಜಿಲ್ಲಾ ಕೇಂದ್ರ ಕಾರವಾರಕ್ಕೆ 100 ಕಿ.ಮೀ. ಪಾದಯಾತ್ರೆ ಹಮ್ಮಿಕೊಳ್ಳಲಾಗಿದೆ ಎಂದು ಕುಣಬಿ ಸಮಾಜದ ಅಧ್ಯಕ್ಷ ಸುಭಾಷ ಗಾವಡಾ ತಿಳಿಸಿದರು.
  ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಬುಡಕಟ್ಟು ಕುಣಬಿ ಸಮುದಾಯದವರು ಜಿಲ್ಲೆಯಲ್ಲಿ ಸುಮಾರು 50 ಸಾವಿರಕ್ಕೂ ಹೆಚ್ಚು ಜನರಿದ್ದು, ಕಳೆದ 30 ವರ್ಷಗಳಿಂದ ಪರಿಶಿಷ್ಟ ಪಂಗಡಕ್ಕೆ ಸೇರಿಸುವಂತೆ ಆಗ್ರಹಿಸಲಾಗುತ್ತಿದೆ. ಸಮುದಾಯದ ಬಹುಪಾಲು ಜನರು ಅರಣ್ಯವಾಸಿಗಳಾಗಿದ್ದು, ಕಲೆ ಸಂಸ್ಕೃತಿ, ಜಾನಪದ ಕಲೆಗಳು ನಮ್ಮ ಸ್ಥಿತಿಗತಿಗಳನ್ನು ತಿಳಿಸುತ್ತವೆ. ಪರಿಶಿಷ್ಟ ಪಂಗಡಕ್ಕೆ ಸೇರ್ಪಡೆಗೆ ಎಲ್ಲ ರಿತಿಯ ಅರ್ಹತೆ ಇದ್ದರು ಸೌಲಭ್ಯ ಪಡೆದುಕೊಳ್ಳಲಾಗದ ಕಾರಣ ನಮಗೆ ತುಂಬಾ ಅನ್ಯಾಯವಾಗಿದೆ. ನಮ್ಮ ಪಕ್ಕದ ಗೋವಾದಲ್ಲಿ ನಮ್ಮ ಸಂಬಂಧಿಗಳೇ ಆಗಿರುವ ಕುಣಬಿ ಸಮುದಾಯದವರಿಗೆ 2003ರಲ್ಲಿ ಪರಿಶಿಷ್ಟ ಪಂಗಡಕ್ಕೆ ಸೇರಿಸಿದೆ. ಆದರೆ ಅದೇ ಸಮುದಾಯದ ರಾಜ್ಯದಲ್ಲಿರುವುದು ನಮಗೆ ಸ್ಥಾನಮಾನ ನೀಡಿಲ್ಲ ಎಂದು ಬೇಸರಿಸಿದರು.
  ಇದೇ ಕಾರಣಕ್ಕೆ ಜ.18ರಿಂದ 20 ವರೆಗೆ ಮೂರು ದಿನಗಳ ಕಾಲ 100 ಕಿ.ಮೀ. ಕಾಲ್ನಡಿಗೆಯಲ್ಲಿ ಜಿಲ್ಲಾ ಕಛೇರಿಗೆ ಸಾಗಿ ನಮ್ಮ ಹಕ್ಕೊತ್ತಾಯವನ್ನು ಜಿಲ್ಲಾಧಿಕಾರಿಗೆ ಸಲ್ಲಿಸಲಾಗುತ್ತದೆ. ಈ ಪ್ರತಿಭಟನೆಯನ್ನು ಪಕ್ಷಾತೀತವಾಗಿ ಮಾಡುತ್ತಿದ್ದು, ಇದರಲ್ಲಿ ಯಾವುದೇ ರಾಜಕೀಯ ದುರುದ್ದೇಶವಿಲ್ಲ. ಪ್ರತಿಭಟನೆಗೆ ಎಲ್ಲ ಪಕ್ಷದವರು ಬೆಂಬಲ ನೀಡಿದ್ದು, ನಮ್ಮದೆ ಸಮುದಾಯದ ಗೋವಾದ ಸಭಾಧ್ಯಕ್ಷರು ಪ್ರತಿಭಟನೆಯಲ್ಲಿ ಭಾಗವಹಿಸಲಿದ್ದಾರೆ ಎಂದು ಹೇಳಿದರು.
  ಸುದ್ದಿಗೋಷ್ಟಿಯಲ್ಲಿ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಚಂದ್ರಶೇಖರ ಸಾವರಕರ ಇನ್ನಿತರರು ಇದ್ದರು

  300x250 AD
  Share This
  300x250 AD
  300x250 AD
  300x250 AD
  Back to top