ಮುಂಡಗೋಡ: ಪಟ್ಟಣದಲ್ಲಿ ಗುರುವಾರ ಸ್ವಾಮಿ ವಿವೇಕಾನಂದರ ಜನ್ಮದಿನದೊಂದು ತಂಬಾಕು ನಿಯಂತ್ರಣ ಜಾಗೃತಿ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ.
ಪಟ್ಟಣದ ಸರಕಾರಿ ಪದವಿಪೂರ್ವ ಕಾಲೇಜಿನಲ್ಲಿ ತಂಬಾಕು ಜಾಗೃತಿಯ ಜಾಥಾಗೆ ತಾ.ಪಂ ಕಾರ್ಯನಿರ್ವಣಾಧಿಕಾರಿ ಪ್ರವೀಣ ಕಟ್ಟಿ ಹಸಿರು ನಿಶಾನೆ ತೋರಿಸುವ ಮೂಲಕ ಚಾಲನೆ ನೀಡಿದರು.
ವಿದ್ಯಾರ್ಥಿಗಳೊಂದಿಗೆ ಹೊರಟ ಜಾಥಾ ಪಟ್ಟಣದ ಪ್ರಮುಖ ಬೀದಿಗಳಲ್ಲಿರುವ ತಂಬಾಕು ಉತ್ಪನ್ನ ಮಾರಾಟ ಮಾಡುವ ಅಂಗಡಿಕಾರರಿಗೆ ಗುಲಾಬಿ ಹೂ ನೀಡಿ, ತಂಬಾಕು ಸೇವನೆಯ ದುಷ್ಪರಿಣಾಮಗಳು ಕುರಿತು ಅರಿವು ಹಾಗೂ ತಂಬಾಕು ಮಾರಾಟ ಮಾಡದಂತೆ ಮನಃಪರಿವರ್ತನೆ ಮಾಡುವ ಮೂಲಕ ತಂಬಾಕು ಜಾಗೃತಿ ಕಾರ್ಯಕ್ರಮವನ್ನು ಯಶಸ್ವಿಗೊಳಿಸಲಾಯಿತು.
ಈ ಸಂದರ್ಭ ಸಿಪಿಐ ಎಸ್.ಎಸ್.ಸಿಮಾನಿ, ಆಡಳಿತ ವೈದ್ಯಾಧಿಕಾರಿ ಭರತ ಡಿ.ಟಿ., ಸಿಡಿಪಿಒ ದೀಪಾ ಬಂಗೇರಾ, ಆರೋಗ್ಯ ಇಲಾಖೆಯ ಸಿಬ್ಬಂದಿ, ಆಶಾ ಕಾರ್ಯಕರ್ತೆಯರು, ಉಪನ್ಯಾಸಕರು, ಶಿಕ್ಷಕರು ಇದ್ದರು.
ಮುಂಡಗೋಡದಲ್ಲಿ ತಂಬಾಕು ನಿಯಂತ್ರಣ ಜಾಗೃತಿ ಜಾಥಾ
