ಕಾರವಾರ: ಕೇಂದ್ರ, ರಾಜ್ಯ ಸರ್ಕಾರಗಳ ಯೋಜನೆಗಳನ್ನು ಮನೆ ಮನೆಗೂ ತಲುಪಿಸಿ, ಪಕ್ಷ ಬಲವರ್ಧನೆಗೆ ಶ್ರಮಿಸುವಂತೆ ಶಾಸಕಿ ರೂಪಾಲಿ ಎಸ್.ನಾಯ್ಕ ವಿನಂತಿಸಿದರು.
ಭಾರತೀಯ ಜನತಾ ಪಕ್ಷ ತಾಲೂಕು ಗ್ರಾಮೀಣ ಮಂಡಲದ ವತಿಯಿಂದ ಮಲ್ಲಾಪುರ, ಕದ್ರಾ ಹಾಗೂ ಘಾಡಸಾಯಿ ಹಳಗಾ ವ್ಯಾಪ್ತಿಯ ಬೂತ್ ಸಂಖ್ಯೆ 46,47,45 ಹಾಗೂ 53 ಹಮ್ಮಿಕೊಂಡಿದ್ದ ಬೂತ್ ವಿಜಯ ಅಭಿಯಾನದಲ್ಲಿ ಪಾಲ್ಗೊಂಡು ಅವರು ಮಾತನಾಡಿದರು.
ಬೂತ್ ವಿಜಯ ಅಭಿಯಾನಕ್ಕೆ ಅಭೂತಪೂರ್ವ ಬೆಂಬಲ ವ್ಯಕ್ತವಾಗುತ್ತಿದೆ. ಕದ್ರಾ, ಮಲ್ಲಾಪುರ, ಹಳಗಾ ಬೂತ್ ಸಮಿತಿಯನ್ನು ಪರಿಶೀಲಿಸಿ 12 ಜನರ ತಂಡವನ್ನು ರಚಿಸಲಾಗಿದೆ. ಅವರೆಲ್ಲರ ಮಾಹಿತಿಯನ್ನು ಪಡೆದು ಪರಿಶೀಲಿಸಲಾಗಿದೆ. ಪಂಚರತ್ನ ಸಮಿತಿಯನ್ನೂ ಕೂಡ ಪರಿಶೀಲಿಸಿ ರಚಿಸಿದ್ದು. ಪೇಜ್ ಪ್ರಮುಖರ ನೇಮಕ, ವಾಟ್ಸ್ ಆಪ್ ಗ್ರೂಪ್‌ಗಳ ರಚನೆ ಮಾಡುವ ಬಗ್ಗೆ ವಿವರಿಸಲಾಗಿದೆ. ಪಕ್ಷ ಸಂಘಟನೆಗೆ ನೀಡಿದ ಯೋಜನೆಯನ್ನು ಕಾರ್ಯಗಳನ್ನು ಶಕ್ತಿಮೀರಿ ಮಾಡಬೇಕು ಎಂದರು.
ಪಕ್ಷ ಸಂಘಟನೆಯಲ್ಲಿ ಬೂತ್ ಕಮಿಟಿ ಅಧ್ಯಕ್ಷರ ಮತ್ತು ಸದಸ್ಯರ ಪಾತ್ರ ಮಹತ್ವದ್ದಾಗಿರುತ್ತದೆ. ಪಕ್ಷವು ನೀಡಿದ ಕಾರ್ಯವನ್ನು ಅಚ್ಚುಕಟ್ಟಾಗಿ ನಿರ್ವಹಿಸಬೇಕಾಗಿದೆ. ಕೇಂದ್ರ ಹಾಗೂ ರಾಜ್ಯ ಸರ್ಕಾರದ ಯೋಜನೆಗಳು ಪ್ರತಿಯೊಬ್ಬರಿಗೂ ತಲುಪಿಸುವ ಕಾರ್ಯ ಪ್ರತಿ ಬೂತ್‌ನಲ್ಲಿ ಮಾಡಬೇಕು ಮತ್ತು ಪಕ್ಷ ಬಲವರ್ಧನೆಗೆ ಶ್ರಮಿಸಬೇಕು ಎಂದರು.
ಈ ಸಂದರ್ಭದಲ್ಲಿ ಬಿಜೆಪಿ ಗ್ರಾಮೀಣ ಮಂಡಲದ ಅಧ್ಯಕ್ಷ ಸುಭಾಷ್ ಗುನಗಿ, ಪ್ರಧಾನ ಕಾರ್ಯದರ್ಶಿಗಳು, ಮಹಾಶಕ್ತಿ ಕೇಂದ್ರ, ಶಕ್ತಿಕೇಂದ್ರದ ಪ್ರಮುಖರು, ವಿವಿಧ ಮೋರ್ಚಾ ಪದಾಧಿಕಾರಿಗಳು, ಪ್ರಮುಖರು, ಪಕ್ಷದ ಬೂತ್ ಕಮಿಟಿಯವರು, ಕಾರ್ಯಕರ್ತರು, ಉಪಸ್ಥಿತರಿದ್ದರು.
ಅಭಿಯಾನದಲ್ಲಿ ಶಾಂತಾ ಬಾಂದೇಕರ ಭಾಗಿ
ಮಲ್ಲಾಪುರ ಬೂತ್ ಸಂಖ್ಯೆ 46ರಲ್ಲಿ ಜಿಲ್ಲಾ ಪಂಚಾಯತ ಮಾಜಿ ಸದಸ್ಯ ಶಾಂತಾ ಬಾಂದೇಕರ ಭಾರತೀಯ ಜನತಾ ಪಕ್ಷದ ಬೂತ್ ವಿಜಯ ಅಭಿಯಾನ ಕಾರ್ಯಕ್ರಮದಲ್ಲಿ ಸ್ವಯಂಪ್ರೇರಿತವಾಗಿ ಪಾಲ್ಗೊಂಡಿದ್ದು ಗಮನಾರ್ಹವಾಗಿತ್ತು. ಅವರು ಬಿಜೆಪಿ ಧ್ವಜವನ್ನು ಹಿಡಿದು ಕಾರ್ಯಕ್ರಮದ ಕೊನೆಯವರೆಗೂ ಉಪಸ್ಥಿತರಿದ್ದರು.
ಸರ್ಕಾರಿ ಯೋಜನೆಗಳನ್ನು ಮನೆ ಮನೆಗೂ ತಲುಪಿಸಿ: ಶಾಸಕಿ ರೂಪಾಲಿ
