Slide
Slide
Slide
previous arrow
next arrow

ಅತಿಕ್ರಮಣ ಸಕ್ರಮಕ್ಕೆ ಆಗ್ರಹಿಸಿ ಶಿರವಾಡ ಗ್ರಾಮಸ್ಥರ ಪಾದಯಾತ್ರೆ

300x250 AD

ಕಾರವಾರ: ಅತಿಕ್ರಮಣ ಜಾಗ ಸಕ್ರಮ ಮಾಡಿಕೊಡುವಂತೆ ಆಗ್ರಹಿಸಿ ಕರ್ನಾಟಕ ದಲಿತ ರಕ್ಷಣಾ ವೇದಿಕೆ ಜಿಲ್ಲಾಧ್ಯಕ್ಷ ಎಲಿಷಾ ಜಿ.ಯಲಕಪಾಟಿ ನೇತೃತ್ವದಲ್ಲಿ ಶಿರವಾಡದಿಂದ 10 ಕಿ.ಮೀ. ಪಾದಯಾತ್ರೆಯ ಮೂಲಕ ಜಿಲ್ಲಾಧಿಕಾರಿ ಕಚೇರಿಗೆ ಆಗಮಿಸಿ ಧರಣಿ ನಡೆಸಲಾಯಿತು.
ಶಿರವಾಡದ ಗ್ರಾಮಸ್ಥರಿಗೆ ಅತಿಕ್ರಮಣ ಸಕ್ರಮ ಮಾಡಿಕೊಡುವಂತೆ ಹತ್ತಾರು ವರ್ಷಗಳಿಂದ ಹೋರಾಡುತ್ತಿದ್ದರೂ ನ್ಯಾಯ ಒದಗಿಸಿಕೊಡದ ಕಾರಣ ಶಿರವಾಡದ ಗ್ರಾಮ ಪಂಚಾಯತಿಯಿಂದ ಬಂಗಾರಪ್ಪ ನಗರದ ನೇರ ಮಾರ್ಗವಾಗಿ ಗೀತಾಂಜಲಿ ಟಾಕೀಸ್, ಹೂವಿನ ಚೌಕ, ಸವಿತಾ ಹೋಟೆಲ್, ಸುಭಾಷ್ ಸರ್ಕಲ್, ಅಂಬೇಡ್ಕರ್ ಸರ್ಕಲ್ ಮುಖಾಂತರ ಜಿಲ್ಲಾಧಿಕಾರಿಗಳ ಕಚೇರಿಯವರೆಗೆ ಶಿರವಾಡದ ಗ್ರಾಮಸ್ಥರು ಮಕ್ಕಳು ಸೇರಿದಂತೆ ಕುಟುಂಬ ಸಮೇತವಾಗಿ ಪಾದಯಾತ್ರೆ ಪ್ರತಿಭಟನಾ ಮೆರಣಿಗೆ ನಡೆಸಿದರು.
ಶಿರವಾಡದಲ್ಲಿ ಸುಮಾರು 35 ರಿಂದ 40 ವರ್ಷಗಳು 200ಕ್ಕೂ ಅಧಿಕ ಕುಟುಂಬಗಳು ನಿರಾಶ್ರಿತರ ಜಾಗದಲ್ಲಿ ಹಾಗೂ ಅರಣ್ಯ ಜಾಗದಲ್ಲಿ ವಾಸ ಮಾಡುತ್ತಾ ಬಂದಿದ್ದಾರೆ. ಈ ಅತಿಕ್ರಮಣ ಜಾಗದಲ್ಲಿ ವಾಸ ಮಾಡುತ್ತಿರುವ ಕಾರಣ ಇಲ್ಲಿನ ಜನರು ಕನಿಷ್ಠ ಮೂಲಸೌಕರ್ಯಗಳಿಂದ ವಂಚನೆಯಾಗುತ್ತಾ ಬಂದಿದ್ದಾರೆ. ಈಗಾಗಲೇ ಅತಿಕ್ರಮಣ ಸಕ್ರಮ ಮಾಡಿಕೊಡುವ ಕುರಿತು ಹಲವಾರು ಬಾರಿ ಸಂಬಂಧಪಟ್ಟ ಇಲಾಖೆಗಳಿಗೆ ಮನವಿ ನೀಡುತ್ತಾ ಬರಲಾಗಿದೆ. ಅಲ್ಲದೇ ಜಿಲ್ಲಾಧಿಕಾರಿಗಳ ಕಛೇರಿ ಹಾಗೂ ಜಿ.ಪಂ ಕಛೇರಿಯಲ್ಲಿ ಜಿಲ್ಲಾಧಿಕಾರಿಗಳು ಮತ್ತು ಜಿ.ಪಂ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಅವರೊಂದಿಗೆ ಕೆಲವು ಬಾರಿ ಚರ್ಚೆ ಕೂಡ ಮಾಡಲಾಗಿದೆ. ಇದರ ಬಗ್ಗೆ ಪರಿಹಾರ ಕೊಡಿಸುವುದಾಗಿ ಮೌಖಿಕವಾಗಿ ಭರವಸೆ ನೀಡಿದ್ದರೂ ಇದುವರೆಗೂ ಯಾವುದೇ ಸೂಕ್ತ ಪರಿಹಾರ ಒದಗಿ ಬಂದಿಲ್ಲ ಎಂದು ಎಲಿಷಾ ಅಸಮಾಧಾನ ವ್ಯಕ್ತಪಡಿಸಿದರು.
ಇದೇ ವೇಳೆ ಜಿಲ್ಲಾಧಿಕಾರಿ ಪ್ರಭುಲಿಂಗ ಕವಳಿಕಟ್ಟಿ ಪ್ರತಿಭಟನಾ ಸ್ಥಳಕ್ಕಾಗಮಿಸಿ ಮನವಿ ಸ್ವೀಕರಿಸಿದರು. ಈ ಸಂದರ್ಭದಲ್ಲಿ ಶಿರವಾಡದ ಗ್ರಾಮಸ್ಥರು ಹಾಗೂ ಕದರವೇ ಕಾರ್ಯಕರ್ತರಾದ ಜಾಫರ್ ಕರ್ಜಗಿ, ನರಸಿಂಹ ನಾಯ್ಕ, ಯಲ್ಲಪ್ಪಾ ಎನ್.ವಡ್ಡರ್, ಶಂಕರ್ ವಡ್ಡರ, ಹುಸೇನ್, ಶಾಂತಾ ಆಚಾರಿ, ಗ್ರಾಪಂ ಸದಸ್ಯೆ ಗಂಗಾ ನಾಯ್ಕ್, ಶಾಂತಾ ಇ.ವೈ., ಶಾರದಾ ಲಮಾಣಿ, ಬಸವರಾಜ್ ವಾಲ್ಮೀಕಿ, ರುಸ್ತುಂ, ಕೆಂಪಣ್ಣ ಮಣ್ಣವದ್ದರ್, ಗಣೇಶ್ ಜಶನೂರು ಹಾಗೂ ಇನ್ನಿತರರು ಹಾಜರಿದ್ದರು.

300x250 AD
Share This
300x250 AD
300x250 AD
300x250 AD
Back to top