ಕುಮಟಾ: ತಾಲೂಕಿನ ಉಪ್ಪಿನಪಟ್ಟಣ ಗ್ರಾಮೀಣ ಸೇವಾ ಸಹಕಾರಿ ಸಂಘ ಕತಗಾಲ್‌ನ ನೂತನ ಕಟ್ಟಡ ಲೋಕಾರ್ಪಣೆ ಮತ್ತು ಸಂಘದ ಶತಮಾನೋತ್ಸವ ಸಂಭ್ರಮಾಚರಣೆ ಕಾರ್ಯಕ್ರಮ ಜ.21ರಂದು ನಡೆಯಲಿದೆ ಎಂದು ಉಪ್ಪಿನಪಟ್ಟಣ ಗ್ರಾಮೀಣ ಸೇವಾ ಸಹಕಾರಿ ಸಂಘ ಅಧ್ಯಕ್ಷ ವೆಂಕಟರಮಣ ಹೆಗಡೆ ತಿಳಿಸಿದರು.
ಸುದ್ದಿಗೋಷ್ಠಿಯಲ್ಲಿ ಕಾರ್ಯಕ್ರಮದ ಆಮಂತ್ರಣ ಪತ್ರಿಕೆ ಬಿಡುಗಡೆಗೊಳಿಸಿ ಅವರು ಮಾತನಾಡಿದರು. ನಮ್ಮ ಸಂಘವು ರೈತರ ಕಲ್ಯಾಣಕ್ಕಾಗಿ 1923ರಲ್ಲಿ ಸ್ಥಾಪನೆಯಾಗಿದ್ದು, ಇಂದಿಗೆ ನೂರನೇ ವರ್ಷವಾಗಿದೆ. ಈ ನೂರು ವರ್ಷಗಳಲ್ಲಿ ಸಂಘವು ಸಾಕಷ್ಟು ಬೆಳೆದಿದೆ. ಅಳಕೋಡ ಗ್ರಾಪಂ ವ್ಯಾಪ್ತಿಯ 16 ಕಂದಾಯ ಗ್ರಾಮಗಳ ಕಾರ್ಯಕ್ಷೇತ್ರ ಹೊಂದಿದ್ದು, ಆ ಭಾಗದ ರೈತರು ನಮ್ಮ ಸಂಘದ ಸದಸ್ಯರಾಗಿದ್ದು, ಕೃಷಿಕರ ಆರ್ಥಿಕ ಅಭಿವೃದ್ಧಿಯ ಶಕ್ತಿ ಕೇಂದ್ರವಾಗಿ ಸಂಘ ಬೆಳೆದಿದೆ. ಕೃಷಿ ಸಾಲ, ಕೃಷಿಯೇತರ ಸಾಲ ಸೇರಿದಂತೆ ಸಣ್ಣಪುಟ್ಟ ವ್ಯಾಪಾರ ಸಾಲದ ಜೊತೆಗೆ ರೈತರಿಗೆ ಅನೇಕ ಸೌಲತ್ತುಗಳನ್ನು ನೀಡುವ ಮೂಲಕ ಸಂಘವು ಯಶಸ್ವಿ ಹೆಜ್ಜೆಯನ್ನಿಟ್ಟಿದೆ.
ಕಳೆದ 12 ವರ್ಷಗಳಿಂದ ಎಸಿಸಿ ಸಿಮೆಂಟ್ ಡೀಲರಾಗಿಯೂ ಕಾರ್ಯ ನಿರ್ವಹಿಸುತ್ತಿದೆ. ಅಡಿಕೆ, ತೆಂಗು, ಕಾಳುಮೆಣಸು, ಜಾಯಿಕಾಯಿಗಳನ್ನು ಟೆಂಡರ್ ಮೂಲಕ ಮಾರಾಟವಾಗುವಂತೆ ಕಾರ್ಯನಿರ್ವಹಿಸಿ ರೈತರ ಬೆಳೆಗೆ ಯೋಗ್ಯ ದರ ದೊರಕಿಸಿಕೊಡುವ ಕೆಲಸ ಮಾಡುತ್ತಿರುವ ಜಿಲ್ಲೆಯಲ್ಲಿಯೇ ಏಕೈಕ ಸಂಘ ನಮ್ಮದಾಗಿದೆ. ಕಳೆದ ವರ್ಷ ಸಂಘದ ಹೊಸ ಕಟ್ಟಡ ನಿರ್ಮಾಣವಾಗಿದ್ದು, ಉದ್ಘಾಟನೆಗೆ ಸಿದ್ಧವಾಗಿದೆ. ಶತಮಾನೋತ್ಸವ ಸಂಭ್ರಮದ ಜೊತೆಗೆ ಕಟ್ಟಡದ ಉದ್ಘಾಟನೆ ಕಾರ್ಯಕ್ರಮ ಕೂಡ ಜ. 21ರಂದು ನಡೆಸಲು ಎಲ್ಲ ಸಿದ್ಧತೆ ಮಾಡಿಕೊಳ್ಳಲಾಗಿದೆ. ಜ.21ರ ಬೆಳಗ್ಗೆ 11 ಗಂಟೆಗೆ ಕಾರ್ಯಕ್ರಮದ ಉದ್ಘಾಟನೆಯನ್ನು ವಿಧಾನ ಸಭಾಧ್ಯಕ್ಷ ವಿಶೇಶ್ವರ ಹೆಗಡೆ ಕಾಗೇರಿ ನೆರವೇರಿಸಲಿದ್ದಾರೆ. ಕಟ್ಟಡದ ಉದ್ಘಾಟನೆ ಕಾರ್ಮಿಕ ಸಚಿವ ಶಿವರಾಮ ಹೆಬ್ಬಾರ, ಕ್ಯಾಶ್ ಕೌಂಡರ್ ಉದ್ಘಾಟನೆಯನ್ನು ಜಿಲ್ಲಾ ಉಸ್ತುವಾರಿ ಸಚಿವ ಶ್ರೀನಿವಾಸ ಪೂಜಾರಿ ನೆರವೇರಿಸಲಿದ್ದಾರೆ. ಸ್ಮರಣ ಸಂಚಿಕೆ ಬಿಡುಗಡೆ ಸಂಸದ ಅನಂತಕುಮಾರ ಹೆಗಡೆ, ಭದ್ರತಾ ಕೋಶವನ್ನು ಶಾಸಕ ದಿನಕರ ಶೆಟ್ಟಿ ಉದ್ಘಾಟಿಸಲಿದ್ದಾರೆ. ಸಭಾಧ್ಯಕ್ಷೆಯನ್ನು ನಾನು ವಹಿಸಲಿದ್ದೇನೆ. ಜಿಲ್ಲೆಯ ಶಾಸಕರು, ಎಂಎಲ್‌ಸಿಗಳು ಸೇರಿದಂತೆ ಅನೇಕ ಗಣ್ಯರು ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲಿದ್ದಾರೆ ಎಂದರು.
ಸ್ಮರಣ ಸಂಚಿಕೆ ಸಂಪಾದಕ ಪಿ.ಆರ್.ಭಟ್ ಮತ್ತು ಸಂಘದ ಮುಖ್ಯ ಕಾರ್ಯನಿರ್ವಾಹಕ ಜೋನ್ ಫರ್ನಾಂಡೀಸ್ ಮಾತನಾಡಿ, ಶತಮಾನೋತ್ಸವ ಸಂಭ್ರಮಾಚರಣೆಯನ್ನು ವಿಜೃಂಭಣೆಯಿoದ ನಡೆಸಲು ಎಲ್ಲ ಸಿದ್ಧತೆ ಮಾಡಿಕೊಂಡಿದ್ದೇವೆ. ಸಭಾ ಕಾರ್ಯಕ್ರಮದ ಬಳಿಕ ಸಾಯಂಕಾಲ ಶಾಲಾ ಮಕ್ಕಳಿಂದ ಸಾಂಸ್ಕೃತಿಕ ಕಾರ್ಯಕ್ರಮ ನಡೆಯಲಿದೆ. ರಾತ್ರಿ ಝೆಂಕಾರ ಮೆಲೋಡಿಯಸ್ ಭಟ್ಕಳದಿಂದ ರಸಮಂಜರಿ ಕಾರ್ಯಕ್ರಮ ಕೂಡ ನಡೆಯಲಿದೆ. ರೈತರು, ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಂಡು ಯಶಸ್ವಿಗೊಳಿಸಬೇಕೆಂದು ವಿನಂತಿಸಿದರು.
ಸುದ್ದಿಗೋಷ್ಠಿಯಲ್ಲಿ ಉಪ್ಪಿನಪಟ್ಟಣ ಗ್ರಾಮೀಣ ಸೇವಾ ಸಹಕಾರಿ ಸಂಘದ ಉಪಾಧ್ಯಕ್ಷ ಮಹೇಶ ದೇಶಭಂಡಾರಿ, ನಿರ್ದೇಶಕರಾದ ಗಜಾನನ ಹೆಗಡೆ, ದೇವು ಗೌಡ, ಮಹೇಂದ್ರ ನಾಯ್ಕ, ವಿನಾಯಕ ನಾಯ್ಕ, ಮೀನಾಕ್ಷಿ ನಾಯ್ಕ ಇತರರು