Slide
Slide
Slide
previous arrow
next arrow

ಜ.12ಕ್ಕೆ 18 ಅಡಿ ಎತ್ತರದ ವಿವೇಕಾನಂದ ಪ್ರತಿಮೆ ಲೋಕಾರ್ಪಣೆ

300x250 AD

ಯಲ್ಲಾಪುರ: ಅಂಕೋಲಾ ತಾಲೂಕಿನ ಗ್ರಾಮೀಣ ಪ್ರದೇಶದಲ್ಲಿ ಒಂದಾದ ಬ್ರಹ್ಮೂರು- ಕಬಗಾಲದ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ವಿದ್ಯಾರ್ಥಿ ಪಾಲಕರೋರ್ವರು 18 ಅಡಿಯಷ್ಟು ಎತ್ತರದ ವಿವೇಕಾನಂದ ಪ್ರತಿಮೆಯನ್ನು ಸಿದ್ಧ ಮಾಡಿದ್ದಾರೆ.
ಕಬಗಾಲ ಶಾಲೆಯ 6ನೇ ವರ್ಗದಲ್ಲಿ ಓದುತ್ತಿರುವ ತಿಲಕ್ ಹೆಗಡೆ ತಂದೆ ರಾಘವೇಂದ್ರ ಹೆಗಡೆ ಎನ್ನುವ ಕಲಾವಿದನೇ ಈ ಮಹತ್ಕಾರ್ಯ ನಿರ್ವಹಿಸಿದವರಾಗಿದ್ದಾರೆ. ಇವರು ನಿರ್ಮಿಸಿದ ಮೂರ್ತಿ ಸುಮಾರು 9 ಅಡಿಯಷ್ಟು ಎತ್ತರವಿದೆ. ವಿದ್ಯಾರ್ಥಿಗಳ ಸುರಕ್ಷತೆ ದೃಷ್ಟಿಯಿಂದ ಆಳದಿಂದಲೇ ನಿರ್ಮಿಸಿ ಕೊಂಡುಬಂದ ಪೀಠ ಸೇರಿದಂತೆ ಒಟ್ಟು 18 ಅಡಿಗಿಂತಲು ಎತ್ತರದ ಆಕರ್ಷಣೆಯುಳ್ಳ ಮೂರ್ತಿಯನ್ನು ನಿರ್ಮಿಸಿ ಗಮನ ಸೆಳೆದಿದ್ದಾರೆ.
ಸುಮಾರು ಒಂದೂವರೆ ಲಕ್ಷ ರೂಪಾಯಿಗಿಂತ ಹೆಚ್ಚಿನ ಹಣವನ್ನು ಮೂರ್ತಿ ನಿರ್ಮಾಣಕ್ಕಾಗಿ ಖರ್ಚು ಮಾಡಿದ್ದಾರೆ. ಪ್ರಾರಂಭದಲ್ಲಿ ಯಾರಿಂದಲೂ ಸಹಾಯ ಪಡೆಯದೇ, ನಂತರದ ದಿನಗಳಲ್ಲಿ ಬೆರಳೆಣಿಕೆಯ ಜನ ಸಹಾಯ ನೀಡಿದ್ದಾರೆ. ಇನ್ನೂ ಹೆಚ್ಚಿನ ಸಹಕಾರ ಅವಶ್ಯಕತೆಯಿದೆ ಎಂದು ಅವರು ತಿಳಿಸಿದ್ದಾರೆ.
ಸುಮಾರು 6 ತಿಂಗಳಿಂದ ಮೂರ್ತಿ ನಿರ್ಮಾಣ ಕಾರ್ಯದಲ್ಲಿ ಅವರ ಪತ್ನಿ ಸಹ ರಾತ್ರಿ ಹಗಲೆನ್ನದೇ ಸಹಕರಿಸಿದ್ದಾರೆ. ಜನವರಿ 12ರ ವಿವೇಕಾನಂದರ ಜನ್ಮ ದಿನದಂದು ಸ್ಥಳೀಯ ಶಾಲೆಯ ಎಸ್‌ಡಿಎಂಸಿ ಹಾಗೂ ಆಗಮಿಸುವ ಗಣ್ಯರ ಉಪಸ್ಥಿತಿಯಲ್ಲಿ ಈ ಪ್ರತಿಮೆಯನ್ನು ಲೋಕಾರ್ಪಣೆ ಮಾಡಬೇಕೆಂಬ ಹಂಬಲ ಕಲಾವಿದರದ್ದಾಗಿದೆ.

300x250 AD
Share This
300x250 AD
300x250 AD
300x250 AD
Back to top