Slide
Slide
Slide
previous arrow
next arrow

ಕೋರಾರ ಸಮಾಜದ ಪ್ರಮುಖರಿಂದ ಹಕ್ಕು ಪತ್ರ ನೀಡುವಂತೆ ಮನವಿ ಸಲ್ಲಿಕೆ

300x250 AD

ಶಿರಸಿ: ಸಮಾಜ ಕಲ್ಯಾಣ ಮಂತ್ರಿಗಳು ಹಾಗೂ ಉತ್ತರ ಕನ್ನಡ ಜಿಲ್ಲಾ ಉಸ್ತುವಾರಿ ಸಚಿವರಾದ ಶ್ರೀನಿವಾಸ ಪೂಜಾರಿರವರ ಕೋಟಾದ ನಿವಾಸದಲ್ಲಿ ಡಾ. ಅಂಬೇಡ್ಕರ ಪ್ರಗತಿಪರ ದಲಿತ ವೇದಿಕೆಯ ನೇತೃತ್ವದಲ್ಲಿ ಉತ್ತರ ಕ್ನನಡ ಜಿಲ್ಲೆಯ ಕೋರಾರ ಸಮಾಜದ ಪ್ರಮುಖರು ಜ.10 ರಂದು ಭೇಟಿಯಾಗಿ ಉತ್ತರ ಕನ್ನಡ ಜಿಲ್ಲೆಯ ನಗರಸಭೆಗಳಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಸಪಾಯಿ ಕರ್ಮಚಾರಿಗಳ (ಪೌರಕಾರ್ಮಿಕರು) ಸಮಸ್ಯೆಗಳ ಬಗ್ಗೆ ವಿವರಿಸಿದರು. ಹಾಗೂ ಮುಖ್ಯವಾಗಿ ಕುಮಟಾ ಪುರಸಭೆಯ ಪೌರ ಕಾರ್ಮಿಕರ ವಸತಿ ಗೃಹಗಳಲ್ಲಿ ಅನೇಕ ವರ್ಷಗಳಿಂದ ವಾಸಿಸುತ್ತಿರುವ ಸಪಾಯಿ ಕರ್ಮಾಚಾರಿಗಳ ಹಾಗೂ ಅವಲಂಬಿತರಿಗೆ ಹಕ್ಕು ಪತ್ರ ನೀಡುವಂತೆ ಮನವಿ ನೀಡಲಾಯಿತು.

ಈ ಸಮಯದಲ್ಲಿ ವೇದಿಕೆಯ ಪ್ರಮುಖರಾದ ಗಣಪತಿ ಮುರುಡೇಶ್ವರ, ವಿ. ಗಣೇಶ, ಮಂಜುನಾಥ ಹೊನ್ನಾವರ, ಕುಂದಾಪುರ ನಗರಸಭೆಯ ಸದಸ್ಯರಾದ ವಿ. ಪ್ರಭಾಕರ ಮತ್ತು ನಾಗರಾಜ ಶೇಡಗೇರಿ, ಅಣ್ಣಪ್ಪ ಸಿರ್ಸಿಕರ, ದೀಪಕ ಮೂರುರು, ಲೋಕೇಶ ಮಾಜಾಳಿ, ಭೂಷಣ ಇನ್ನಿತರರು ಉಪಸ್ಥಿತರಿದ್ದರು.

300x250 AD
Share This
300x250 AD
300x250 AD
300x250 AD
Back to top