Slide
Slide
Slide
previous arrow
next arrow

ಸಿದ್ದೇಶ್ವರ ಶ್ರೀಗಳ ಚಿತಾಭಸ್ಮ ವಿಸರ್ಜನೆ; ಯಲ್ಲಾಪುರದಲ್ಲಿ ಅನ್ನಸಂತರ್ಪಣೆ

300x250 AD

ಯಲ್ಲಾಪುರ: ವಿಜಯಪುರ ಜಿಲ್ಲೆಯ ತಿಕೋಟಾ ತಾಲ್ಲೂಕಿನ ಬಿಜ್ಜರಗಿ ಗ್ರಾಮಲ್ಲಿ ಜನಸಿ ಎರಡನೇ ವಿವೇಕಾನಂದ ಎನಿಸಿ ಭಕ್ತರಿಂದ ಕರೆಯಿಸಿಕೊಂಡಿದ್ದ ಶ್ರೀ ಸಿದ್ದೇಶ್ವರ ಮಹಾಸ್ವಾಮಿಜಿಗಳ ಚಿತಾಭಸ್ಮವನ್ನು ಉತ್ತರ ಕನ್ನಡ ಜಿಲ್ಲೆಯ ಗೋಕರ್ಣದ ಸಮುದ್ರದಲ್ಲಿ ವಿಸರ್ಜಿಸಲು ಮರಳಿ ಮಠಕ್ಕೆ ತೆರಳುತ್ತಿದ್ದ ನೂರಾರು ಜನ ಸ್ವಾಮಿಗಳು ಹಾಗೂ ಭಕ್ತರಿಗೆ ಸೋಮವಾರ ಮಧ್ಯಾಹ್ನ ಯಲ್ಲಾಪುರದ ವೆಂಕಟ್ರಮಣ ಮಠದಲ್ಲಿ ಅನ್ನ ಸಂತರ್ಪಣೆ ವ್ಯವಸ್ಥೆ ಮಾಡಲಾಗಿತ್ತು.
ವಿಜಯಪುರ(ಬಿಜಾಪುರದ) ಮಲ್ಲಿಕಾರ್ಜುನ ಆಶ್ರಮದ ಅಧ್ಯಕ್ಷ ಬಸವಲಿಂಗಶ್ರೀ ಸ್ವಾಮಿಗಳು, ಉಪಾಧ್ಯಕ್ಷ ಅಮೃತಾನಂದ ಶ್ರೀಗಳು, ವಿಜಯಪುರ ಡಿಎಎಸ್‌ಪಿ ನ್ಯಾಮರೆಗೌಡ ದಂಪತಿ, ಕನ್ನೇರಿ ಮಠದ ಮಲ್ಲಯ್ಯ ಶ್ರೀಗಳು, ಉಲ್ಯಾಳ ಮಠದ ಹರ್ಷಾನಂದ ಶ್ರೀಗಳು, ಮಠದ ಇನ್ನಿತರ ಶ್ರೀಗಳು ಹಾಗೂ ನೂರಾರು ಜನ ಭಕ್ತರು ಅನ್ನ ಪ್ರಸಾದವನ್ನು ಸ್ವೀಕರಿಸಿದರು.
ಕಾರ್ಮಿಕ ಸಚಿವ ಶಿವರಾಮ ಹೆಬ್ಬಾರ್ ಸೂಚನೆಯ ಮೇರೆಗೆ ಉದ್ಯಮಿ ಬಾಲಕೃಷ್ಣ ನಾಯಕ, ಪಟ್ಟಣ ಪಂಚಾಯಿತಿ ಸದಸ್ಯ ಸತೀಶ ನಾಯ್ಕ ಇನ್ನಿತರರು ಭೋಜನ ವ್ಯವಸ್ಥೆಯ ಮುಂದಾಳತ್ವ ವಹಿಸಿಸಿಕೊಂಡಿದ್ದರು. ಅನ್ನಸಂತರ್ಪಣೆ ವೇಳೆಯಲ್ಲಿ ಸಾಮಾಜಿಕ ಕಾರ್ಯಕರ್ತ ಬಾಲಕೃಷ್ಣ ನಾಯಕ, ಪಟ್ಟಣ ಪಂಚಾಯತಿ ಸದಸ್ಯ ಸತೀಶ ನಾಯ್ಕ, ಅಮಿತ ಅಂಗಡಿ, ಪತ್ರಕರ್ತ ಜಗದೀಶ ನಾಯಕ, ಮನೋಜ ನಾಯ್ಕ, ಶಿವು ಕವಳಿ, ಬಾಲಕೃಷ್ಣ ನಾಯ್ಕ ಅರಬೈಲ್, ಬಾಲಕೃಷ್ಣ ಬೋರಕರ್, ಹಾವೇರಿ ಜಿಲ್ಲೆ ಹಾನಗಲ್ ತಾಲೂಕಿನ ಬೊಮ್ಮನಹಳ್ಳಿಯ ಭಕ್ತರಾದ ಸಿದ್ದನಗೌಡ ಪಾಟೀಲ, ವಿಜಯಕುಮಾರ ಮಲ್ಲಮ್ಮನವರ, ಸಂಗಮೇಶ ನೆಲಮೋಗಿ, ಬಸವರಾಜ ಪಾಳೇದ, ಚಂದ್ರು ಪಾಟೀಲ, ಸುರೇಶ ಧಾರವಾಡ ಅನ್ನಪ್ರಸಾದ ನೀಡಿದರು.
ಯಲ್ಲಾಪುರದ ವೀರಶೈವ ಲಿಂಗಾಯತ ಸಮುದಾಯದ ಅಧ್ಯಕ್ಷ ಮಹೇಶ ಗೌಳಿ, ಸಮಾಜದ ಪ್ರಮುಖರಾದ ಬಸವರಾಜ ಗೌಳಿ, ಗುರುಪಾದಯ್ಯ ಹಿರೇಮಠ, ವಿರೂಪಾಕ್ಷಿ, ಶಿವಯ್ಯ ಹಿರೇಮಠ, ಶಿವಯ್ಯ, ಚನ್ನಬಸವೇಶ್ವರ ಪಾಟೀಲ ಮುಂತಾದವರು ಇದ್ದರು.
***

300x250 AD
Share This
300x250 AD
300x250 AD
300x250 AD
Back to top