ಶಿರಸಿ: ತಾಲೂಕಿನ ಇಸಳೂರಿನಲ್ಲಿರುವ ಶ್ರೀ ರಾಜರಾಜೇಶ್ವರೀ ವಿದ್ಯಾ ಸಂಸ್ಥೆ, ಸೋಂದಾ ಇದರ ಅಡಿಯಲ್ಲಿ ನಡೆಯುತ್ತಿರುವ ಶ್ರೀನಿಕೇತನ ಶಾಲೆಯ ವಿದ್ಯಾರ್ಥಿಗಳು ರೋಟರಿ ಕ್ಲಬ್ ನಡೆಸಿದ ಕ್ರೀಡಾ ಸ್ಪರ್ಧೆಯಲ್ಲಿ ಭಾಗವಹಿಸಿ ಪದಕಗಳನ್ನು ತಮ್ಮದಾಗಿಸಿಕೊಂಡಿದ್ದಾರೆ. 9 ನೇ ತರಗತಿಯ ಅಖಿಲ್ ಕಂಚುಗಾರ್ 100 ಮೀಟರ್ ಓಟದಲ್ಲಿ ಪ್ರಥಮ, 9 ನೇ ತರಗತಿಯ ಧೀರಜ್ ಗುಂಡು ಎಸೆತದಲ್ಲಿ ಪ್ರಥಮ, 9 ನೇ ತರಗತಿಯ ಮಂಥನ್ ಉದ್ದಜಿಗಿತದಲ್ಲಿ ಪ್ರಥಮ, 9 ನೇ ತರಗತಿಯ ಸಿಂಚನಾ ಚಕ್ರ ಎಸೆತದಲ್ಲಿ ದ್ವಿತೀಯ, 9 ನೇ ತರಗತಿಯ ಪ್ರಣೀತಾ 200 ಮೀಟರ್ ಓಟದಲ್ಲಿ ತೃತೀಯ, 9 ನೇ ತರಗತಿಯ ಅದಿತಿ ಜೋಶಿ ಉದ್ದಜಿಗಿತದಲ್ಲಿ ತೃತೀಯ, 9 ನೇ ತರಗತಿಯ ಅನಘಾ ಹೆಗಡೆ ಗುಂಡು ಎಸೆತದಲ್ಲಿ ತೃತೀಯ ಸ್ಥಾನ ಪಡೆದಿದ್ದಾರೆ. ವಿದ್ಯಾರ್ಥಿಗಳ ಈ ಸಾಧನೆಗೆ ಶಾಲಾ ಆಡಳಿತ ಮಂಡಳಿ, ಪ್ರಾಚಾರ್ಯರು, ಶಿಕ್ಷಕ – ಶಿಕ್ಷಕೇತರ ಸಿಬ್ಬಂದಿಗಳು ಹಾಗೂ ಪಾಲಕರು ಹರ್ಷ ವ್ಯಕ್ತಪಡಿಸಿದ್ದಾರೆ.