Slide
Slide
Slide
previous arrow
next arrow

ಇನ್ಸ್ಪೈರ್ ಪುರಸ್ಕಾರಕ್ಕೆ ಚಂದನ ಶಾಲೆಯ ವಿದ್ಯಾರ್ಥಿಗಳು ಆಯ್ಕೆ

300x250 AD

ಶಿರಸಿ: ಭಾರತ ಸರಕಾರದ ವಿಜ್ಞಾನ ಮತ್ತು ತಂತ್ರಜ್ಞಾನ ಸಚಿವಾಲಯ ಹಾಗೂ ವಿಜ್ಞಾನ ಮತ್ತು ತಂತ್ರಜ್ಞಾನ ಇಲಾಖೆ ಜಂಟಿಯಾಗಿ  ನಡೆಸುವ ರಾಷ್ಟ್ರಮಟ್ಟದ ಇನ್ಸ್ಪೈರ್ ಪುರಸ್ಕಾರದ 2022-23ರ ಸ್ಪರ್ಧೆಯಲ್ಲಿ ಚಂದನ ಆಂಗ್ಲ ಮಾಧ್ಯಮ ಶಾಲೆಯ 9ನೇ ವರ್ಗದ ವಿದ್ಯಾರ್ಥಿಗಳು ಆಯ್ಕೆಯಾಗಿದ್ದಾರೆ.

ಎಂ.ಎಸ್. ವರ್ಷಾ ‘ಪರಿಸರ ಸಂರಕ್ಷಣೆಗೆ ಸಸ್ಯ ಪಾಲನಾ ಕ್ಷೇತ್ರಗಳಲ್ಲಿ ಜೈವಿಕ ವಿಘಟನೀಯ ಕುಂಡಗಳ ಬಳಕೆ’ ವಿಷಯದಲ್ಲಿ ಹಾಗೂ ಹರ್ಷಾ ಪಟಗಾರ್ ‘ವಾಹನ ಚಲಿಸುವಾಗ ನಿದ್ದೆ ಬರದಂತೆ ತಡೆಯುವ ಕನ್ನಡಕ’ ಈ ಯೋಜನೆಗೆಳ ಮಾದರಿ ತಯಾರಿಸಿ ಆಯ್ಕೆಯಾಗಿದ್ದಾರೆ. ವಿದ್ಯಾರ್ಥಿಗಳ ಸಾಧನೆಗೆ ಹಾಗೂ ಮಾರ್ಗದರ್ಶಿ ಶಿಕ್ಷಕ ದೇವರಾಜ ಬಿ. ಇವರಿಗೆ ಆಡಳಿತ ಮಂಡಳಿ, ಶಿಕ್ಷಕರು, ಪಾಲಕರು ಹಾಗೂ ವಿದ್ಯಾರ್ಥಿಗಳು ಅಭಿನಂದಿಸಿದ್ದಾರೆ.

300x250 AD

Share This
300x250 AD
300x250 AD
300x250 AD
Back to top