ನವದೆಹಲಿ: ಭಾನುವಾರ ಪೂಂಚ್ ಜಿಲ್ಲೆಯ ಬಾಲಾಕೋಟ್ ಸೆಕ್ಟರ್‌ನಲ್ಲಿ ಇಬ್ಬರು ನುಸುಳುಕೋರ ಭಯೋತ್ಪಾದಕರನ್ನು ಭಾರತೀಯ ಸೇನೆ ಹತ್ಯೆ ಮಾಡಿದೆ. ಭಯೋತ್ಪಾದಕರು ಗುಂಡಿನ ದಾಳಿ ನಡೆಸಿದ ಹಿನ್ನಲೆಯಲ್ಲಿ ಭಾರತೀಯ ಸೇನೆಯು ಆ ಪ್ರದೇಶದಲ್ಲಿ ಬೃಹತ್ ಶೋಧ ಕಾರ್ಯಾಚರಣೆಯನ್ನು ಪ್ರಾರಂಭಿಸಿ ಉಗ್ರರರನ್ನು ಮಟ್ಟ ಹಾಕಿದೆ. ಇನ್ನಷ್ಟು ಭಯೋತ್ಪಾದಕರು ಇಲ್ಲಿ ಅಡಗಿರುವ ಶಂಕೆಯ ಮೇರೆಗೆ ಕಾರ್ಯಾಚರಣೆ ಮುಂದುವರೆದಿದೆ.
ಭಾರತೀಯ ಸೇನಾ ಪಡೆ ಶೋಧ ಕಾರ್ಯಾಚರಣೆಯ ವೇಳೆ ಶಸ್ತ್ರಾಸ್ತ್ರಗಳು, ಮ್ಯಾಗಜೀನ್‌ಗಳು, ಮದ್ದುಗುಂಡುಗಳು ಮತ್ತು ಇತರ ಯುದ್ಧ ಸಂಬಂಧಿತ ಪರಿಕರಗಳನ್ನು ವಶಪಡಿಸಿಕೊಂಡಿವೆ.
ಸೇನೆಯು ಎರಡು ಮ್ಯಾಗಜೀನ್‌ಗಳು ಮತ್ತು 21 ಸುತ್ತುಗಳೊಂದಿಗೆ ಒಂದು ಎಕೆ 47 ರೈಫಲ್, ಒಂದು ಮಾರ್ಪಡಿಸಿದ ಎಕೆ 56 ರೈಫಲ್, ಒಂದು ಚೈನೀಸ್ ಪಿಸ್ತೂಲ್, ಒಂದು ಮ್ಯಾಗಜೀನ್ ಮತ್ತು ಐದು ಸುತ್ತುಗಳು, ಎರಡು ಚೈನೀಸ್ ಹ್ಯಾಂಡ್ ಗ್ರೆನೇಡ್‌ಗಳು ಮತ್ತು ಎರಡು ಹೈ ಸ್ಫೋಟಕ ಐಇಡಿಗಳು ಮತ್ತು ಮೊಬೈಲ್ ಫೋನ್ ಅನ್ನು ವಶಪಡಿಸಿಕೊಂಡಿದೆ. ಶೋಧ ಕಾರ್ಯಾಚರಣೆ ಇನ್ನೂ ಮುಂದುವರಿದಿದೆ ಎಂದು ವರದಿಗಳು ತಿಳಿಸಿವೆ.
ಈ ನಡುವೆ, ರಕ್ಷಣಾ ವಕ್ತಾರರ ಪ್ರಕಾರ, ಧಂಗ್ರಿ ದಾಳಿಯಲ್ಲಿ ಭಾಗಿಯಾಗಿರುವ ಭಯೋತ್ಪಾದಕರನ್ನು ಸೆರೆಹಿಡಿಯುವ ಕಾರ್ಯಾಚರಣೆಯನ್ನು ಭಾರತೀಯ ಸೇನೆಯು ಇತರ ಭದ್ರತಾ ಪಡೆಗಳೊಂದಿಗೆ ವಿಶೇಷವಾಗಿ ರಜೌರಿ ಮತ್ತು ಪೂಂಚ್ ಜಿಲ್ಲೆಗಳಲ್ಲಿ ಕಾರ್ಯನಿರ್ವಹಿಸುತ್ತಿದೆ.