Slide
Slide
Slide
previous arrow
next arrow

ಮಾನವ ಸಂಪನ್ಮೂಲದ ಸದ್ಬಳಕೆಯಾದಾಗ ಪ್ರಗತಿ ಸಾಧ್ಯ: ಜಗದೀಶ ಕಮ್ಮಾರ

300x250 AD

ಯಲ್ಲಾಪುರ: ಮೂಲಸೌಲಭ್ಯಗಳ ಅಭಿವೃದ್ಧಿಯ ಕುರಿತಾದ ಸುಸ್ಥಿರ ಅಭಿವೃದ್ಧಿ ಪ್ರಾದೇಶಿಕವಾಗಿ ಮಹತ್ವ ಪಡೆದಿದೆ. ಗ್ರಾಮೀಣ ಪ್ರದೇಶದ ಅಭಿವೃದ್ಧಿಗಾಗಿ ಮತ್ತು ಯೋಜನೆಗಳ ಅನುಷ್ಠಾನಗೊಳಿಸಲು ಈ ತರಬೇತಿ ಉಪಯುಕ್ತವಾಗಿದೆ. ನಿಗದಿತ ಅವಧಿಯಲ್ಲಿ ಗುರಿ ಸಾಧಿಸಲು ಗುಣಾತ್ಮಕ ಅಂಶಗಳನ್ನು ಈ ಮೂಲಕ ಸಾಧಿಸಬಹುದು ಎಂದು ಎಂದು ತಾಲ್ಲೂಕು ಪಂಚಾಯತ ಕಾರ್ಯನಿರ್ವಹಣಾಧಿಕಾರಿ ಜಗದೀಶ ಕಮ್ಮಾರ ಅಭಿಪ್ರಾಯಪಟ್ಟರು.
ಅವರು ಪಟ್ಟಣದ ಸಾಮರ್ಥ್ಯ ಸೌಧದಲ್ಲಿ ಗ್ರಾಮ ಪಂಚಾಯತ ಚುನಾಯಿತ ಸದಸ್ಯರ, ಅಧಿಕಾರಿಗಳು ಸಿಬ್ಬಂದಿಗಳ ಹಾಗೂ ಸ್ವ-ಸಹಾಯ ಸಂಘದ ಒಕ್ಕೂಟದ ಸದಸ್ಯರಿಗಾಗಿ ಪಂಚಾಯತರಾಜ್ ಸಂಸ್ಥೆ, ಸ್ವಸಹಾಯ ಸಂಘಗಳ ಒಗ್ಗೂಡಿಸುವಿಕೆಯ ಒಂದು ದಿನದ ಮುಖಾಮುಖಿ ತರಬೇತಿ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡುತ್ತಿದ್ದರು. ನಮ್ಮ ಜವಾಬ್ದಾರಿಗಳನ್ನು ಅರಿತು ಮಾನವ ಸಂಪನ್ಮೂಲದ ಸದ್ಬಳಕೆ ಸಮರ್ಪಕವಾದಾಗ ಪ್ರಗತಿ ಸಾಧ್ಯ ಎಂದು ಹೇಳಿದರು.
ಇದೇ ಸಂದರ್ಭದಲ್ಲಿ ತರಬೇತಿಯ ಮಾಹಿತಿ ಕೈಪಿಡಿ ವಿತರಿಸಲಾಯಿತು. ತಾ.ಪಂನ ಸಹಾಯಕ ಅಧಿಕಾರಿ ಮಂಜುನಾಥ ಆಗೇರ, ಪಂಚಾಯತ ಅಭಿವೃದ್ದಿ ಅಧಿಕಾರಿ ರಾಜೇಶ, ಎನ್‌ಆರ್‌ಎಲ್‌ಎಮ್‌ನ ಸಂಚಾಲಕ ಮಂಜು ಕೆ. ಹಾಗೂ ತಾಲ್ಲೂಕು ಪಂಚಾಯತ ಸಿಬ್ಬಂದಿಗಳಾದ ಪರಶುರಾಮ ಹುಲುಗೂರು, ಮಮತಾ ಗೌಡ ಉಪಸ್ಥಿತರಿದ್ದರು. ತರಬೇತಿಯ ಸಂಪನ್ಮೂಲ ವ್ಯಕ್ತಿ ಕೆ.ಎಸ್.ಭಟ್ಟ ಆನಗೋಡ ಆರಂಭದಲ್ಲಿ ಮುಖಾಮುಖಿ ತರಬೇತಿಯ ಆಶಯಗಳನ್ನು ಹೇಳಿದರು. ಸುಗಮಗಾರ ದತ್ತಾತ್ರೇಯ ಭಟ್ಟ ವಂದಿಸಿದರು.

300x250 AD
Share This
300x250 AD
300x250 AD
300x250 AD
Back to top