ಕಾರವಾರ: ಜಿಲ್ಲೆಯಲ್ಲಿ ಈ ಹಿಂದೆ 39 ಜಿಲ್ಲಾ ಪಂಚಾಯತಿ ಕ್ಷೇತ್ರಗಳಿದ್ದವನ್ನ ಸರ್ಕಾರ ಕ್ಷೇತ್ರ ವಿಂಗಡಣೆಯಲ್ಲಿ 54ಕ್ಕೆ ಏರಿಸಿ, 15 ಹೆಚ್ಚುವರಿ ಕ್ಷೇತ್ರಗಳನ್ನ ನೀಡಿ ರಾಜ್ಯಪತ್ರ ಹೊರಡಿಸಿದೆ.
ಜೊಯಿಡಾ ತಾಲೂಕಿನಲ್ಲಿ ರಾಮನಗರ, ಜಗಲಬೇಟ ಹಾಗೂ ಜೋಯಿಡಾ ಸೇರಿ ಮೂರು ಜಿಲ್ಲಾ ಪಂಚಾಯತ ಕ್ಷೇತ್ರವನ್ನಾಗಿ ಮಾಡಲಾಗಿದೆ. ದಾಂಡೇಲಿ ತಾಲೂಕಿನಲ್ಲಿ ಅಂಬಿಕಾನಗರ ಒಂದೇ ಜಿಲ್ಲಾ ಪಂಚಾಯತ ಕ್ಷೇತ್ರವಿದ್ದರೇ, ಹಳಿಯಾಳ ತಾಲೂಕಿನಲ್ಲಿ ಮಂಗಳವಾಡ, ತೇರಗಾಂವ, ಗುಂಡೋಳ್ಳಿ, ಮುರ್ಕವಾಡ, ಸೇರಿ ನಾಲ್ಕು ಜಿಲ್ಲಾ ಪಂಚಾಯತ ಕ್ಷೇತ್ರವನ್ನಾಗಿ ವಿಂಗಡಿಸಲಾಗಿದೆ. ಕಾರವಾರ ತಾಲೂಕಿನಲ್ಲಿ ಮಲ್ಲಾಪುರ, ಮುಡಗೇರಿ, ಚಿತ್ತಾಕುಲಾ, ಕಡವಾಡ, ಹಾಗೂ ಚೆಂಡಿಯಾ ಸೇರಿ 5 ಜಿಲ್ಲಾ ಪಂಚಾಯತ ಕ್ಷೇತ್ರವನ್ನಾಗಿ ಮಾಡಲಾಗಿದೆ. ಯಲ್ಲಾಪುರ ತಾಲೂಕಿನಲ್ಲಿ ಇಡಗುಂದಿ, ಕಿರವತ್ತಿ ಹಾಗೂ ಕಂಪ್ಲಿ ಜಿಲ್ಲಾ ಪಂಚಾಯತ ಕ್ಷೇತ್ರವನ್ನಾಗಿ ಮಾಡಲಾಗಿದೆ. ಮುಂಡಗೋಡ ತಾಲೂಕಿನಲ್ಲಿ ಮೈನಳ್ಳಿ, ಇಂದೂರ, ಪಾಳಾ, ಮಳಗಿ, ಸೇರಿ 4 ಜಿಲ್ಲಾಪಂಚಾಯತ ಕ್ಷೇತ್ರವನ್ನಾಗಿ ಮಾಡಲಾಗಿದೆ.
ಅಂಕೋಲಾ ತಾಲೂಕಿನಲ್ಲಿ ಅಗಸೂರು, ಅವರ್ಸಾ, ಭಾವಿಕೇರಿ, ಶೇಟಗೇರಿ, ಬೆಳಸೆ ಸೇರಿ 5 ಜಿಲ್ಲಾಪಂಚಾಯತ ಕ್ಷೇತ್ರವನ್ನಾಗಿ ಮಾಡಿದರೆ, ಶಿರಸಿ ತಾಲೂಕಿನಲ್ಲಿ ಹುಲೇಕಲ್, ದೊಡ್ನಳ್ಳಿ, ಬದನಗೋಡ, ಬನವಾಸಿ, ಜಾನ್ಮನೆ, ಹಾಗೂ ಶಿವಳ್ಳಿ, ಹೆಗಡೆಕಟ್ಟಾ ಸೇರಿ 6ಜಿಲ್ಲಾ ಪಂಚಾಯತ ಕ್ಷೇತ್ರವನ್ನಾಗಿ ವಿಂಗಡಿಸಲಾಗಿದೆ. ಕುಮಟಾ ತಾಲೂಕಿನಲ್ಲಿ ಮುರೂರು, ಮಿರ್ಜಾನ, ಹೆಗಡೆ, ಗೋಕರ್ಣ, ಹೊಲನಗದ್ದೆ ಹಾಗೂ ದೇವಗಿರಿ ಸೇರಿ 5 ಕ್ಷೇತ್ರವನ್ನಾಗಿ ವಿಂಗಡಿಸಲಾಗಿದೆ. ಸಿದ್ದಾಪುರ ತಾಲೂಕಿನಲ್ಲಿ ಅಣಲೇಬೈಲ್, ಕಾನಗೋಡ, ಹಲಗೇರಿ ಹಾಗೂ ದೊಡ್ಮಣೆ ಜಿಲ್ಲಾ ಪಂಚಾಯತ ಕ್ಷೇತ್ರವನ್ನಾಗಿ ಮಾಡಿದರೆ, ಹೊನ್ನಾವರ ತಾಲೂಕಿನಲ್ಲಿ ನಗರಬಸ್ತಿಕೇರಿ, ಚಂದಾವರ, ಹಳದೀಪುರ, ಮುಗ್ವಾ, ಮಾವಿನಕುರ್ವಾ, ಕಾಸರಕೋಡ, ಬಳಕೂರು ಕ್ಷೇತ್ರ ಸೇರಿ ಒಟ್ಟು 7 ಕ್ಷೇತ್ರವನ್ನಾಗಿ ವಿಂಗಡಿಸಿದರೆ, ಭಟ್ಕಳ ತಾಲೂಕಿನಲ್ಲಿ ಮಾವಳ್ಳಿ-1, ಕಾಯ್ಕಿಣಿ, ಶಿರಾಲಿ, ಹೆಬಳೆ, ಬಿಳಲಖಂಡ, ಹಾಗೂ ಬೆಳಕೆ ಸೇರಿ ಒಟ್ಟು 6 ಜಿಲ್ಲಾ ಪಂಚಾಯತ ಕ್ಷೇತ್ರವನ್ನಾಗಿ ವಿಂಗಡಿಸಲಾಗಿದೆ.
ತಾಲೂಕು ಪಂಚಾಯತಿ; 121 ಕ್ಷೇತ್ರಗಳಾಗಿ ವಿಂಗಡಣೆ
ಜಿಲ್ಲೆಯ ಹನ್ನೆರಡು ತಾಲೂಕುಗಳ ತಾಲೂಕು ಪಂಚಾಯತ ಕ್ಷೇತ್ರಗಳ ವಿಂಗಡೆಯನ್ನ ಸಹ ಮಾಡಲಾಗಿದೆ. ಒಟ್ಟು ಹನ್ನೆರಡು ತಾಲೂಕುಗಳಲ್ಲಿ 121 ಕ್ಷೇತ್ರಗಳನ್ನಾಗಿ ಮಾಡಲಾಗಿದೆ.
ಜೊಯಿಡಾ ತಾಲೂಕಿನಲ್ಲಿ ಅಖೇತಿ, ಕಲಂಬುಲಿ, ರಾಮನಗರ, ಅಸು, ಜಗಲಬೇಟ, ಪ್ರಧಾನಿ, ಕಾತೇಲಿ, ಜೋಯಿಡಾ ಹಾಗೂ ನಂದಿಗದ್ದೆ ಸೇರಿ ಒಟ್ಟು 9 ಕ್ಷೇತ್ರಗಳನ್ನಾಗಿ ಮಾಡಲಾಗಿದೆ. ದಾಂಡೇಲಿ ತಾಲೂಕಿನಲ್ಲಿ ವಿಟ್ನಾಳ, ಕೇರವಾಡ, ಅಂಬೇವಾಡಿ, ಬಡಾಕಾನಶಿರಡಾ, ಬೊಮ್ಮನಳ್ಳಿ, ಜಮಗಾ ಹಾಗೂ ಅಮಗಾ ಸೇರಿ ಒಟ್ಟು 7 ಕ್ಷೇತ್ರಗಳನ್ನಾಗಿ ಮಾಡಲಾಗಿದೆ. ಹಳಿಯಾಳ ತಾಲೂಕಿನಲ್ಲಿ ಮಂಗಳವಾಡ, ಮದನಳ್ಳಿ, ತೇರಗಾಂವ, ಬುಜೂರಕಂಚನಳ್ಳಿ, ಗುಂಡೊಳ್ಳಿ, ತಟ್ಟಿಗೇರಿ, ನಾಗಶೆಟ್ಟಿಕೊಪ್ಪ, ಮುರ್ಕವಾಡ, ಹಾಗೂ ಕಾವಲವಾಡ ಸೇರಿ ಒಟ್ಟು 9 ಕ್ಷೇತ್ರಗಳನ್ನಾಗಿ ಮಾಡಲಾಗಿದೆ. ಕಾರವಾರ ತಾಲೂಕಿನಲ್ಲಿ ಮಾಜಾಳಿ, ಮುಡಗೇರಿ, ಘಾಡಸಾಯಿ, ಗೋಟೆಗಾಳಿ(ಬಾಳ್ನಿ), ಮಲ್ಲಾಪುರ, ದೇವಳಮಕ್ಕಿ, ಚಿತ್ತಾಕುಲಾ, ಕಡವಾಡ, ಹಾಗೂ ಚೆಂಡಿಯಾ ಸೇರಿ 9 ಕ್ಷೇತ್ರಗಳನ್ನಾಗಿ, ಯಲ್ಲಾಪುರ ತಾಲೂಕಿನಲ್ಲಿ ಕಣ್ಣಿಗೇರಿ, ಕಿರವತ್ತಿ, ಮದನೂರ, ನಂದೊಳ್ಳಿ, ಮಾವಿನಮನೆ, ಕಂಪ್ಲಿ, ಕುಂದರಗಿ, ಹಾಗೂ ಶಿಗೇಮನೆ ಸೇರಿ ಒಟ್ಟು 9 ಕ್ಷೇತ್ರಗಳನ್ನಾಗಿ ಮಾಡಲಾಗಿದೆ. ಮುಂಡಗೋಡ ತಾಲೂಕಿನಲ್ಲಿ ಹುನುಗುಂದ, ಬಾಚಣಕಿ, ಇಂದೂರ, ಗುಂಜಾವತಿ, ಚವಡಳ್ಳಿ, ಚಿಗಳ್ಳಿ, ಪಾಳಾ, ಕೋಡಂಬಿ ಹಾಗೂ ಮಳಗಿ ಸೇರಿ ಒಟ್ಟು ಕ್ಷೇತ್ರಗಳನ್ನಾಗಿ, ಅಂಕೋಲಾ ತಾಲೂಕಿನಲ್ಲಿ ಅಗಸೂರು, ಅವರ್ಸಾ, ಬೆಳಂಬಾರ, ಬೇಲೆಕೇರಿ, ಬೆಳಸೆ, ಭಾವಿಕೇರಿ, ಹಿಲ್ಲೂರು, ಸಗಡಗೇರಿ ಹಾಗೂ ಶೆಟಗೇರಿ ಸೇರಿ ಒಟ್ಟು 9 ಕ್ಷೇತ್ರವನ್ನಾಗಿ ಮಾಡಲಾಗಿದೆ. ಶಿರಸಿ ತಾಲೂಕಿನಲ್ಲಿ ಹುಲೆಕಲ್, ಭೈರುಂಬೆ, ಬಿಸಲಕೊಪ್ಪ, ಬದನಗೋಡ, ಇಸಳೂರು, ಇಟಗುಳಿ, ಶಿವಳ್ಳಿ, ದೇವನಳ್ಳಿ, ಜಾನ್ಮನೆ, ಯಡಳ್ಳಿ, ಅಂಡಗಿ, ಸುಗಾವಿ ಹಾಗೂ ಬನವಾಸಿ ಸೇರಿ 13 ಕ್ಷೇತ್ರವನ್ನಾಗಿ ಮಾಡಲಾಗಿದೆ.
ಕುಮಟಾ ತಾಲೂಕಿನಲ್ಲಿ ಹನೇಹಳ್ಳಿ, ಗೋಕರ್ಣ, ಹಿರೇಗುತ್ತಿ, ಮಿರ್ಜಾನ, ಕೋಡ್ಕಣಿ, ಅಳಕೋಡ, ಹೆಗಡೆ, ಕಾಗಾಲ, ಬಾಡ, ದೇವಗಿರಿ, ವಾಲಗಳ್ಳಿ, ಮುರೂರು, ಸಂತೆಗುಳಿ ಸೇರಿ ಒಟ್ಟು 13 ಕ್ಷೇತ್ರವನ್ನಾಗಿ ಮಾಡಲಾಗಿದೆ. ಸಿದ್ದಾಪುರ ತಾಲೂಕಿನಲ್ಲಿ ಹೆಗ್ಗರಣಿ, ಹಸರಗೋಡ, ಹಾರ್ಸಿಕಟ್ಟಾ, ಕಾನಗೋಡ, ಕೋಲಸಿರ್ಸಿ, ಇಟಗಿ, ಕ್ಯಾದಗಿ, ಹಲಗೇರಿ ಹಾಗೂ ಮನಮನೆ ಸೇರಿ ಒಟ್ಟು ಕ್ಷೇತ್ರವನ್ನಾಗಿ ಮಾಡಲಾಗಿದೆ. ಹೊನ್ನಾವರ ತಾಲೂಕಿನಲ್ಲಿ ಕಡಲತೋಕ, ಕಡ್ಲೆ, ಮುಗ್ವಾ, ಹಡಿನಬಾಳ, ಹಳದೀಪುರ, ಕರ್ಕಿ, ಮಾವಿನಕುರ್ವಾ, ಹರಂಗಡಿ, ಕಾಸರಕೋಡ, ಬಳಕೂರ, ನಗರಬಸ್ತಿಕೇರಿ, ಕೆಳಗಿನೂರು ಹಾಗೂ ಕೊಡಾಣಿ ಸೇರಿ 13 ಕ್ಷೇತ್ರವನ್ನಾಗಿ ಮಾಡಿದರೆ, ಭಟ್ಕಳ ತಾಲೂಕಿನಲ್ಲಿ ಬೈಲೂರು, ಮಾವಳ್ಳಿ-1, ಮಾವಳ್ಳಿ-2, ಕಾಯ್ಕಿಣಿ, ಬೇಂಗ್ರೆ, ಶಿರಾಲಿ, ಹೆಬಳೆ, ಬಿಳಲಖಂಡ, ಮಾರುಕೇರಿ, ಮುಂಡಳ್ಳಿ, ಪುರವರ್ಗ ಹಾಗೂ ಬೆಳಕೆ ಸೇರಿ 12 ಕ್ಷೇತ್ರವನ್ನಾಗಿ ವಿಂಗಡಿಸಲಾಗಿದೆ.