Slide
Slide
Slide
previous arrow
next arrow

ವಿದ್ಯಾರ್ಥಿಗಳಿಗೆ ಶಾಸನಗಳ ಮಹತ್ವದ ಅರಿವು ಕಾರ್ಯಕ್ರಮ

300x250 AD

ಯಲ್ಲಾಪುರ: ಪಟ್ಟಣದ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ವಿದ್ಯಾರ್ಥಿಗಳಿಗೆ ಶಾಸನಗಳ ಮಹತ್ವದ ಕುರಿತು ಅರಿವು ಮೂಡಿಸುವ ಕಾರ್ಯಕ್ರಮ ಹುಲ್ಲೋರಮನೆ ಸಮೀಪ ಇರುವ ವೀರಗಲ್ಲಿನ ಬಳಿ ನಡೆಯಿತು.
ಕಾಲೇಜಿನ ಕನ್ನಡ ಮತ್ತು ಇತಿಹಾಸ ವಿಭಾಗದಿಂದ ಆಯೋಜಿಸಲಾಗಿದ್ದ ಈ ಕಾರ್ಯಕ್ರಮದಲ್ಲಿ ಕನ್ನಡ ಉಪನ್ಯಾಸಕಿ ಸವಿತಾ ನಾಯ್ಕ, ಶಾಸನಗಳ ಚಾರಿತ್ರಿಕ ಮಹತ್ವ, ಸಂರಕ್ಷಣೆ ಮತ್ತು ಪ್ರಕಾರಗಳ ಕುರಿತು ವಿವರಿಸಿದರು. ಸಹಾಯಕ ಪ್ರಾಧ್ಯಾಪಕ ರಾಮಕೃಷ್ಣ ಗೌಡ, ಹಲ್ಮಿಡಿ ಶಾಸನದ ಕುರಿತು ತಿಳಿಸಿದರು.
ಪ್ರಾಂಶುಪಾಲ ಡಿ.ಎಸ್.ಭಟ್ಟ ಉಪಸ್ಥಿತರಿದ್ದರು. ಬಿ.ಎ ಪ್ರಥಮ ಹಾಗೂ ಅಂತಿಮ ವರ್ಷದ ವಿದ್ಯಾರ್ಥಿಗಳಿಗಾಗಿ ಈ ಕಾರ್ಯಕ್ರಮ ಆಯೋಜಿಸಲಾಗಿತ್ತು.

300x250 AD
Share This
300x250 AD
300x250 AD
300x250 AD
Back to top