Slide
Slide
Slide
previous arrow
next arrow

ಕಬ್ಬಡ್ಡಿಯಿಂದ ದೈಹಿಕ, ಮಾನಸಿಕ ಕ್ಷಮತೆ ಹೆಚ್ಚಳ: ಉಪೇಂದ್ರ ಪೈ

300x250 AD

ಶಿರಸಿ : ಕಬಡ್ಡಿ ಆಟವು ಗಂಡುಗಲಿಗಳ ದೇಶಿ ಕ್ರೀಡೆಯಾಗಿದ್ದು, ಆರೋಗ್ಯ,ಮಾನಸಿಕ ಮತ್ತು ದೈಹಿಕ ಕ್ಷಮತೆಯನ್ನು ಹೆಚ್ಚಿಸುತ್ತದೆ ಎಂದು ಉಪೇಂದ್ರ ಪೈ ಸೇವಾ ಟ್ರಸ್ಟ್ ಅಧ್ಯಕ್ಷ ಉಪೇಂದ್ರ ಪೈ ಹೇಳಿದರು.

ಅವರು ತಾಲೂಕಿನ ಮಳಲಿ ಗೆಳೆಯರ ಬಳಗ ಹಾಗೂ ಊರ ನಾಗರಿಕರ ಸಹಕಾರದೊಂದಿಗೆ ಆಯೋಜಿಸಲಾದ 6 ನೇ ವರ್ಷದ ಮ್ಯಾಟ್ ಮಾದರಿಯ ಹೊನಲು ಬೆಳಕಿನ ಕಬಡ್ಡಿ ಪಂದ್ಯಾವಳಿಯ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ ಗ್ರಾಮೀಣ ಹಾಗೂ ನಗರ ಪ್ರದೇಶಗಳಲ್ಲಿ ಕಬಡ್ಡಿ ಆಟವು ಪ್ರಧಾನವಾಗಿತ್ತು. ಇತ್ತೀಚಿನ ದಿನಗಳಲ್ಲಿ ಕಬಡ್ಡಿಗೆ ಹೆಚ್ಚಿನ ಪೋತ್ಸಾಹ ಸಿಗುವ ಮೂಲಕ ಅಂತರಾಷ್ಟ್ರೀಯ ಮಟ್ಟದಲ್ಲಿ ಹೆಸರುವಾಸಿಯಾಗಿದೆ. ಇಂತಹ ದೇಶಿ ಕ್ರೀಡೆಗಳನ್ನು ಉಳಿಸಿ ಬೆಳೆಸುವ ಕೆಲಸವನ್ನು ಪ್ರತಿಯೊಬ್ಬರು ಮಾಡಬೇಕು. ಆಗ ಮಾತ್ರ ಗ್ರಾಮೀಣ ಕ್ರೀಡೆಗಳು ಉಳಿಯುತ್ತದೆ. ಕ್ರೀಡೆಯಲ್ಲಿ ಸೋಲು-ಗೆಲುವು ಲೆಕ್ಕಕ್ಕೆ ಇಟ್ಟುಕೊಳ್ಳದೇ ಕ್ರೀಡೆಯಲ್ಲಿ ಸಕ್ರಿಯರಾಗುವುದು ಮುಖ್ಯವಾಗಿದೆ ಎಂದರು.

ಕಾಂಗ್ರೆಸ್ ಜಿಲ್ಲಾ ಅಧ್ಯಕ್ಷ ಭೀಮಣ್ಣ ನಾಯ್ಕ ಮಾತನಾಡಿ, ಕ್ರಿಕೆಟ್‌ಗೆ ಸಮಾನವಾಗಿ ದೇಶಿ ಕ್ರೀಡೆ ಕಬಡ್ಡಿ ಬೆಳೆಯುತ್ತಿದೆ. ಮೊದಲು ಆಟ ಆಡುವವರಿಗೆ ಪಾಲಕರು ಬೈಯುತ್ತಿದ್ದರು. ಆದರೇ, ಇಂದು ಆಟದಲ್ಲಿ ಮುಂದೆ ಬರುವವರಿಗೆ ದೇಶದಲ್ಲಿ ಉತ್ತಮ ಗೌರವವಿದೆ. ರಾಷ್ಟ್ರೀಯ ಮಟ್ಟದಲ್ಲಿ ಪ್ರೋ. ಕಬಡ್ಡಿ ಆರಂಭವಾದಾಗಿನಿಂದ ದೇಶಿ ಕಬಡ್ಡಿ ಆಟಕ್ಕೆ ಹೆಚ್ಚು ಪ್ರಚಾರ ಸಿಕ್ಕಿದೆ. ಈಗ ನಡೆಯುತ್ತಿರುವ ಪ್ರೋ.ಕಬಡ್ಡಿಯಲ್ಲಿ ಅನೇಕ ಕ್ರೀಡಾಪಟುಗಳು ಮಿಂಚುತ್ತಿದ್ದಾರೆ. ಇದೇ ರೀತಿ ದೇಶಿ ಕ್ರೀಡೆಗಳಿಗೆ ಜನರು ಹೆಚ್ಚಿನ ಪೋತ್ಸಾಹ ನೀಡಬೇಕು ಎಂದರು ಹೇಳಿದರು.

300x250 AD

ಈ ಕಾರ್ಯಕ್ರಮದಲ್ಲಿ ಪೊಲೀಸ್ ಇಲಾಖೆಯ ಹೆಡ್ ಕಾನ್ಸ್ಟೇಬಲ್ ರಮೇಶ್ ಮುಚ್ಚಂಡಿ ಅವರಿಗೆ  ಸಮಸ್ತ ಊರಿನವರ ಹಾಗೂ ನಾಗರಿಕರ ಪರವಾಗಿ ಗಣ್ಯರೆಲ್ಲ ಸೇರಿ ಸನ್ಮಾನಿಸಿ ಗೌರವಿಸಿದರು. ಈ ಸಂದರ್ಭದಲ್ಲಿ ಕರ್ನಾಟಕ ರಕ್ಷಣಾ ವೇದಿಕೆ ಭಾಸ್ಕರ್ ಪಟಗಾರ, ಕಾಂಗ್ರೆಸ್ ಜಿಲ್ಲಾ ಅಧ್ಯಕ್ಷ ಭೀಮಣ್ಣ ನಾಯ್ಕ, ಸ್ಥಳಿಯ ಗ್ರಾಮ ಪಂಚಾಯತ್ ಅಧ್ಯಕ್ಷ ಪ್ರಶಾಂತ್ ಗೌಡ, ಪ್ರವೀಣ್ ಗೌಡ, ಶ್ರೀಪಾದ ಹೆಗಡೆ ಕಡವೆ, ಮಳಲಿ ದೇವಸ್ಥಾನದ ಅಧ್ಯಕ್ಷ ನಾರಾಯಣ್ ಗೌಡ, ಅಪಾರ ಸಂಖ್ಯೆಯಲ್ಲಿ ಪ್ರೇಕ್ಷಕರು, ಕ್ರೀಡಾ ಅಭಿಮಾನಿಗಳು ಹಾಗೂ ಊರಿನ ಪ್ರಮುಖರು ಉಪಸ್ಥಿತರಿದ್ದರು.

Share This
300x250 AD
300x250 AD
300x250 AD
Back to top