Slide
Slide
Slide
previous arrow
next arrow

ಸರ್ಕಾರಿ ಪರಿವೀಕ್ಷಣಾ ಮಂದಿರದಲ್ಲಿ‌ ರಾಜಕೀಯ ಸಭೆ: ಮೌನವಹಿಸಿದ ಅಧಿಕಾರಿಗಳು

300x250 AD

ಜೊಯಿಡಾ: ಸರ್ಕಾರಿ ಪರಿವೀಕ್ಷಣಾ ಮಂದಿರದಲ್ಲಿ ರಾಜಕೀಯ ಸಭೆ ಸಮಾರಂಭಗಳು ಮಾಡಬಾರದು ಎನ್ನುವ ಆದೇಶವೇ ಇದೆ. ಆದರೆ ಜಿಲ್ಲೆಯಲ್ಲಿ ಈ ಆದೇಶಕ್ಕೆ ಬೆಲೆ ಇಲ್ಲದಂತಾಗಿದೆ. ರಾಜಕೀಯ ಸಭೆಗಳನ್ನು ಸರ್ಕಾರಿ ಪರಿವೀಕ್ಷಣಾ ಮಂದಿರಗಳಲ್ಲಿಯೇ ಮಾಡುವ ಮೂಲಕ ಆದೇಶವನ್ನು ಗಾಳಿಗೆ ತೂರಿದ್ದರೆ, ಇನ್ನೊಂದೆಡೆ ಅಧಿಕಾರಿಗಳು ರಾಜಕೀಯ ನಾಯಕರ ಭೀತಿಯಿಂದ ಮೌನವಾಗಿರುವುದು ಹಲವರ ಕೆಂಗಣ್ಣಿಗೆ ಕಾರಣವಾಗಿದೆ.
ಜನಪ್ರತಿನಿಧಿಗಳು, ಗಣ್ಯರು, ಸರ್ಕಾರಿ ಅಧಿಕಾರಿಗಳು ಯಾವುದೇ ಪ್ರದೇಶಕ್ಕೆ ಹೋದರೆ ಅವರು ಉಳಿಯುವ ವ್ಯವಸ್ಥೆಗಾಗಿ ಲೋಕೋಪಯೋಗಿ ಇಲಾಖೆಯಿಂದ ಪರಿವೀಕ್ಷಣಾ ಮಂದಿರಗಳನ್ನ ಮಾಡಲಾಗಿರುತ್ತದೆ. ಪರಿವೀಕ್ಷಣಾ ಮಂದಿರಗಳು ಕೇವಲ ಉಳಿಯುವ ಉದ್ದೇಶ ಹಾಗೂ ಅಧಿಕಾರಿಗಳ ಜನ ಪ್ರತಿನಿಧಿಗಳ ಸಭೆ ಮಾಡಲು ಮಾತ್ರ ಅವಕಾಶ ನೀಡಲಾಗಿದೆ.
ಕೆಲ ವರ್ಷಗಳ ಹಿಂದೆ ಬೇಕಾಬಿಟ್ಟಿಯಾಗಿ ಪರಿವೀಕ್ಷಣಾ ಮಂದಿರಗಳನ್ನು ರಾಜಕೀಯ ನಾಯಕರುಗಳು, ಸಂಘ ಸಂಸ್ಥೆಯವರು ಬಳಸಿಕೊಳ್ಳುತ್ತಿದ್ದ ಬಗ್ಗೆ ದೂರುಗಳು ಕೇಳಿ ಬಂದಿದ್ದವು. ಅಲ್ಲದೇ ಪತ್ರಿಕಾಗೋಷ್ಠಿ, ಸಭೆಗಳನ್ನು ಮಾಡಿ ಸರ್ಕಾರದ ವಿರುದ್ಧವೇ ಟೀಕೆ ಮಾಡುವ ಘಟನೆ ಹಲವು ನಡೆದ ಹಿನ್ನಲೆಯಲ್ಲಿ ಪರಿವೀಕ್ಷಣಾ ಮಂದಿರಗಳಲ್ಲಿ ಯಾವುದೇ ರಾಜಕೀಯ ಸಭೆಗಳನ್ನು ಮಾಡುವುದಕ್ಕಾಗಲಿ, ಪತ್ರಿಕಾಗೋಷ್ಟಿ ನಡೆಸುವುದಕ್ಕಾಗಲಿ ಅವಕಾಶ ಇಲ್ಲ ಎನ್ನುವ ಆದೇಶವನ್ನು ಮಾಡಲಾಗಿತ್ತು.
ಇನ್ನು ಪರಿವೀಕ್ಷಣಾ ಮಂದಿರದ ಆವರಣದಲ್ಲಿ ಇಂದಿಗೂ ಸರ್ಕಾರದ ಆದೇಶವನ್ನು ಹಾಕಲಾಗಿದೆ. ಆದರೆ ಜೋಯಿಡಾದಲ್ಲಿ ಕಳೆದ ಮೂರ್ನಾಲ್ಕು ದಿನಗಳ ಹಿಂದೆ ಬಿಜೆಪಿಯ ಮುಖಂಡರುಗಳು ಪಕ್ಷ ಸಂಘಟನೆ ಕುರಿತು ಸಭೆಯನ್ನು ನಡೆಸಿದ್ದು, ಸ್ವತಹ ಆ ಪಕ್ಷದ ನಾಯಕರುಗಳೇ ತಮ್ಮ ಸಾಮಾಜಿಕ ಜಾಲತಾಣದ ಪೇಜ್ ಗಳಲ್ಲಿ ಪರಿವೀಕ್ಷಣಾ ಮಂದಿರದಲ್ಲಿ ನಡೆಸ ಸಭೆಯ ಕುರಿತು ಫೋಟೋಗಳನ್ನು ಹಾಕಿಕೊಂಡಿದ್ದಾರೆ. ಇದು ಕೇವಲ ಜೊಯಿಡಾ ಮಾತ್ರವಲ್ಲದೇ, ಮುಂಡಗೋಡ ಪರಿವೀಕ್ಷಣಾ ಮಂದಿರದಲ್ಲಿ ಪ್ರತಿದಿನ ರಾಜಕೀಯ ನಾಯಕರ, ಮುಖಂಡರುಗಳ ಅಡ್ಡಾ ಆದಂತಾಗಿದ್ದು, ಪತ್ರಿಕಾಗೋಷ್ಟಿ, ಸಭೆಗಳನ್ನು ಅಲ್ಲೇ ಮಾಡಲಾಗುತ್ತಿದೆ. ಸರ್ಕಾರಕ್ಕೆ ಯಾವುದೇ ಹಣವನ್ನು ಬರಣ ಮಾಡದೇ ಪುಕ್ಕಟ್ಟೆ ಸಭೆಗಳನ್ನು, ಪತ್ರಿಕಾಗೋಷ್ಟಿಗಳನ್ನು ಮಾಡುವ ಮೂಲಕ ಸರ್ಕಾರದ ಆದೇಶವನ್ನೇ ಉಲ್ಲಂಘನೆ ಮಾಡಲಾಗುತ್ತಿದೆ.
ಇದಲ್ಲದೇ ಜಿಲ್ಲೆಯ ಇನ್ನು ಹಲವು ಪ್ರವಾಸಿ ಮಂದಿರದಲ್ಲಿ ಇಂತಹದ್ದೇ ಘಟನೆಗಳು ನಡೆದರು ಅಧಿಕಾರಿಗಳು ಮಾತ್ರ ದಿವ್ಯ ಮೌನವಹಿಸಿದ್ದಾರೆ. ಇನ್ನು ಕೆಲವೆಡೆ ಅಧಿಕಾರಿಗಳಿಗೆ ಮಾಹಿತಿಯೇ ಇಲ್ಲದೇ ಬರುವ ರಾಜಕೀಯ ನಾಯಕರುಗಳು, ಸಂಘ ಸಂಸ್ಥೆ ಮುಖಂಡರುಗಳು ಸಭೆಗಳನ್ನ ಮಾಡುತ್ತಿದ್ದು, ಸರ್ಕಾರದ ಪರಿವೀಕ್ಷಣಾ ಮಂದಿರದ ಬೇಕಾಬಿಟ್ಟಿ ಬಳಕೆಗೆ ಕಡಿವಾಣ ಹಾಕಬೇಕು ಎನ್ನುವುದು ಸ್ಥಳೀಯರ ಆಗ್ರಹವಾಗಿದೆ.

ಪಾರ್ಟಿಗಳಿಗೂ ದುರ್ಬಳಕೆ!!
ಇನ್ನು ಕೆಲ ಪ್ರವಾಸಿ ಮಂದಿರದಲ್ಲಿ ಪಾರ್ಟಿಗಳ ಅಡ್ಡೆಯಾಗಿದ್ದು ಸಂಜೆಯಾದರೆ ಸಾಕು ಪ್ರತಿದಿನ ಪ್ರವಾಸಿ ಮಂದಿರದಲ್ಲಿಯೇ ಪಾರ್ಟಿಗಳನ್ನು ಮಾಡುವ ಘಟನೆಗಳು ನಡೆದಿದೆ.
ಪ್ರವಾಸಿ ಮಂದಿರದಲ್ಲಿ ಬರುವ ಗಣ್ಯರಿಗೆ ಊಟ ಮಾಡುವ ವ್ಯವಸ್ಥೆ ಇದೆ. ಆದರೆ ಕೆಲ ರಾಜಕೀಯ ಮರಿ ಪುಡಾರಿಗಳು, ಸಂಘ ಸಂಸ್ಥೆ ಎಂದು ಹೇಳಿಕೊಳ್ಳುವ ಮುಖಂಡರುಗಳು ಪ್ರವಾಸಿ ಮಂದಿರಕ್ಕೆ ಬಂದು ಪಾರ್ಟಿಗಳನ್ನು ಮಾಡುತ್ತಿದ್ದು, ಇದಕ್ಕೆ ಅಧಿಕಾರಿಗಳು ಮಾತ್ರ ಯಾವುದೇ ಕ್ರಮ ಕೈಗೊಳ್ಳುತ್ತಿಲ್ಲ.
ಲೋಕೋಪಯೋಗಿ ಇಲಾಖೆ ಅಧಿಕಾರಿಗಳು ಇಂತಹ ಅನಧಿಕೃತ ಚಟುವಟಿಕೆಗಳಿಗೆ, ರಾಜಕೀಯ ಸಭೆ, ಸಂಘ ಸಂಸ್ಥೆ ಮುಖಂಡರುಗಳ ಸಭೆಗಳಿಗೆ ಅವಕಾಶ ಕೊಡದೇ ಸರ್ಕಾರದ ಪರಿವೀಕ್ಷಣಾ ಮಂದಿರ ಇರುವ ಉದ್ದೇಶಕ್ಕೆ ಸದುಪಯೋಗ ಆಗುವಂತೆ ಕ್ರಮ ಕೈಗೊಳ್ಳಬೇಕು ಎನ್ನುವುದು ಸಾರ್ವಜನಿಕರ ಆಗ್ರಹವಾಗಿದೆ.

300x250 AD
Share This
300x250 AD
300x250 AD
300x250 AD
Back to top