• first
  Slide
  Slide
  previous arrow
  next arrow
 • ಹೊಸವರ್ಷದ ಮೊದಲ ದಿನವೇ ಯಮರಾಜನ ಅಟ್ಟಹಾಸ: ಅಪಘಾತದಲ್ಲಿ ನಾಲ್ವರ ದುರ್ಮರಣ

  300x250 AD

  ಅಂಕೋಲಾ:  ರಾ.ಹೆ 66 ರ ಬಾಳೆಗುಳಿ ವರದರಾಜ ಹೊಟೇಲ್ ಬಳಿ ಕಾರು ಮತ್ತು ಸಾರಿಗೆ ಸಂಸ್ಥೆ ಬಸ್ ನಡುವೆ ಸಂಭವಿಸಿದ ಭೀಕರ ರಸ್ತೆ ಅಪಘಾತದಲ್ಲಿ ಕಾರನಲ್ಲಿದ್ದ ನಾಲ್ವರು ದುರ್ಮರಣ ಹೊಂದಿದ ಘಟನೆ  ನಡೆದಿದೆ.
  ತಮಿಳುನಾಡು ಮೂಲದವರು ಎನ್ನಲಾದ  ಇವರು ಬಾಳೇಗುಳಿ ಕಡೆಯಿಂದ ಅಂಕೋಲಾ ಕಡೆಗೆ ಕಾರು ಚಲಾಯಿಸಿಕೊಂಡು ಬರುತ್ತಿದ್ದಾಗ, ಕಾರು ಚಾಲಕನ ನಿಯಂತ್ರಣ ತಪ್ಪಿ ರಸ್ತೆ ಡಿವೈಡರ್ ದಾಟಿ ಬಂದು , ಅಂಕೋಲಾ ಕಡೆಯಿಂದ ಯಲ್ಲಾಪುರ ಹುಬ್ಬಳ್ಳಿ ಮಾರ್ಗವಾಗಿ- ನವಲಗುಂದಕ್ಕೆ ಹೊರಟಿದ್ದ ಸಾರಿಗೆ ಸಂಸ್ಥೆ ಬಸ್ಸಿಗೆ ಗುದ್ದಿ 8-10 ಮೀಟರ್ ದೂರ ತಳ್ಳಲ್ಪಟ್ಟಿದ್ದು, ಕಾರು ಸಂಪೂರ್ಣ ನುಜ್ಜು ಗುಜ್ಜಾಗಿದೆ.

  ಅಪಘಾತದ‌‌ ರಭಸಕ್ಕೆ‌  ಜಖಂಗೊಂಡ ಕಾರಿನಲ್ಲಿದ್ದ ಒಬ್ಬನನ್ನು ಆಸ್ಪತ್ರೆಗೆ  ಸಾಗಿಸುವ ಸಮಯದಲ್ಲಿ ಕೊನೆಯುಸಿರೆಳೆದಿದ್ದು, ಘಟನಾ ಸ್ಥಳದಲ್ಲಿ ಇನ್ನೀರ್ವರು  ಸಿಡಿದು ಬಿದ್ದು ಮೃತಪಟ್ಟಿದ್ದಾರೆ. ಕಾರಿನಲ್ಲಿ ಡ್ರೈವಿಂಗ್ ಸೀಟ್ ಪಕ್ಕದಲ್ಲಿ ಕುಳಿತಿದ್ದ ಇನ್ನೋರ್ವ ನುಜ್ಜು ಗುಜ್ಜಾದ ಕಾರ್ ನಲ್ಲಿ ಸಿಲುಕಿ ಮೃತ ಪಟ್ಟಿದ್ದು ಪಿಎಸೈ ಪ್ರವೀಣ ಕುಮಾರ ಮತ್ತಿತರರು ಸ್ವತಃ ಕಬ್ಬಿಣದ ಸಲಾಕೆ ಬಳಸಿ ಡೋರ್ ಓಪನ್ ಮಾಡಿ  ಮೃತ‌ ದೇಹವನ್ನು ಹೊರತೆಗೆದಿದ್ದಾರೆ. ಈ ಮೂಲಕ ಹೊಸ ವರ್ಷದ ಮೊದಲ ದಿನ ಸಂಭವಿಸಿದ  ಭೀಕರ ರಸ್ತೆ ಅಪಘಾತದಲ್ಲಿ ನಾಲ್ವರು ದುರಂತ ಸಾವಿಗೀಡಾಗಿದ್ದು, ಮೃತರ ವಿಳಾಸ, ಎಲ್ಲಿಂದ ಎಲ್ಲಿಗೆ ಹೊರಟಿದ್ದರು., ಘಟನೆಗೆ ಕಾರಣಗಳೇನು ಎಂಬ ಕುರಿತು ಮಾಹಿತಿ ದೊರೆಯ ಬೇಕಿದೆ.

  300x250 AD

  ಘಟನಾ ಸ್ಥಳಕ್ಕೆ  ಪೋಲೀಸ್ ಇಲಾಖೆಯ ಹಿರಿ- ಕಿರಿಯ ಅಧಿಕಾರಿಗಳು , 112 ಸಿಬ್ಬಂದಿಗಳು, ಐ ಆರ್ ಬಿ ಸಿಬ್ಬಂದಿಗಳು ಹಾಜರಾಗಿ ಸ್ಥಳೀಯರ ಸಹಕಾರದಲ್ಲಿ ಮೃತ ದೇಹಗಳನ್ನು ಸಾಗಿಸಲು ಮತ್ತು ಹೆದ್ದಾರಿ ಸುಗಮ ಸಂಚಾರಕ್ಕೆ ಅನುವು ಮಾಡಿಕೊಟ್ಟರು. ಸಾರಿಗೆ ಸಂಸ್ಥೆ ಸ್ಥಳೀಯ ಘಟಕದ ಅಧಿಕಾರಿಗಳು ಸ್ಥಳಕ್ಕೆ ಬಂದು, ಅಪಘಾತಗೊಂಡ ಬಸ್ ನಲ್ಲಿದ್ದ ಪ್ರಯಾಣಿಕರಿಗೆ ಬದಲಿ ವ್ಯವಸ್ಥೆ ಮಾಡಿ ಮುಂದಿನ ಪಯಣಕ್ಕೆ ಅನುವು ಮಾಡಿಕೊಟ್ಟಿದ್ದು, ಕ್ರೇನ್ ಬಳಸಿ ನುಜ್ಜು ಗುಜ್ಜಾದ ಕಾರ್ ನ್ನು ಪಕ್ಕಕ್ಕೆ ಎಳೆದು ಹೆದ್ದಾರಿ ಸಂಚಾರಕ್ಕೆ ತೊಡಕಾಗದಂತೆ ಪೋಲಿಸರು ಕರ್ತವ್ಯ ನಿರ್ವಹಿಸಿದರು. ತಹಶೀಲ್ದಾರ ಉದಯ ಕುಂಬಾರ ಸ್ಥಳ ಪರಿಶೀಲಿಸಿದರು.

  Share This
  300x250 AD
  300x250 AD
  300x250 AD
  Back to top