Slide
Slide
Slide
previous arrow
next arrow

ಹೊಸ ವರ್ಷಾಚರಣೆಗೆಂದು ಬಂದವರಿಂದ ಸಾರ್ವಜನಿಕರ ಮೇಲೆ ಹಲ್ಲೆ: ನಾಲ್ವರು ವಶಕ್ಕೆ

300x250 AD

ಶಿರಸಿ: ಹೊಸ ವರ್ಷದ ಆಚರಣೆಗಾಗಿ ಶಿವಮೊಗ್ಗದಿಂದ ಶಿರಸಿಗೆ ಆಗಮಿಸಿದ್ದ 14 ಜನ ಯುವಕರ ತಂಡವೊಂದು ಸಾರ್ವಜನಿಕರು ಹಾಗೂ ಲಾರಿ ಚಾಲಕರ ಮೇಲೆ ಹಲ್ಲೆ ನಡೆಸಿ ಒಬ್ಬ ಲಾರಿ ಚಾಲಕನನ್ನು ತೀವ್ರವಾಗಿ ಗಾಯಗೊಳಿಸಿದ ಘಟನೆ ಶನಿವಾರ ಸಾಯಂಕಾಲ ವರದಿಯಾಗಿದೆ.
ಈ ಘಟನೆಯ ನಂತರ ಶಿರಸಿ ನಗರದಲ್ಲಿ ಬಿಗುವಿನ ವಾತಾವರಣ ಉಂಟಾಗಿದ್ದು, ನೂರಾರು ಜನ ಪೊಲೀಸ್ ಠಾಣೆ ಎದುರು ಪ್ರತಿಭಟನೆ ನಡೆಸಿದರು.

ಶಿವಮೊಗ್ಗದ ಯುವಕರು ಎಣ್ಣೆ ಮತ್ತಿನಲ್ಲಿ ಬಂದು ಕಂಡಕಂಡವರ ಜೊತೆ ಜಗಳಕ್ಕೆ ಇಳಿದಿದ್ದರು ಎಂದು ಪ್ರತ್ಯಕ್ಷದರ್ಶಿಗಳು ತಿಳಿಸಿದ್ದಾರೆ. ಟಿಟಿ ವಾಹನದಲ್ಲಿ ಆಗಮಿಸಿದ ಇವರು ಪ್ರತಿಭಟಿಸಿದ ಕಾರಣಕ್ಕಾಗಿ ಲಾರಿ ಚಾಲಕನ ಮೇಲೆ ಹಲ್ಲೆ ನಡೆಸಿದರು ಎನ್ನಲಾಗಿದ್ದು, ಈ ನಾಲ್ಕು ಜನರನ್ನು ಶಿರಸಿ ಪೊಲೀಸರು ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದ್ದಾರೆ.

300x250 AD
Share This
300x250 AD
300x250 AD
300x250 AD
Back to top