Slide
Slide
Slide
previous arrow
next arrow

ಎರಡು ಲಾರಿಗಳ ಮುಖಾಮುಖಿ ಡಿಕ್ಕಿ: ಚಾಲಕನಿಗೆ ಗಾಯ

300x250 AD

ಯಲ್ಲಾಪುರ: ಎರಡು ಲಾರಿಗಳ ನಡುವೆ ಡಿಕ್ಕಿ ಸಂಭವಿಸಿ, ಲಾರಿ ಚಾಲಕನೋರ್ವ ಗಾಯಗೊಂಡ ಘಟನೆ ತಾಲೂಕಿನ ಇಡಗುಂದಿ ಸಮೀಪ ನಡೆದಿದೆ.

ಆರೋಪಿ ಲಾರಿ ಚಾಲಕ ಉತ್ತರಪ್ರದೇಶದ ಶಿವಶಂಕರ ಬಾಬು ಮಾನಸಿಂಗ್ ಎಂಬಾತ ತನ್ನ ಲಾರಿಯನ್ನು ರಾಷ್ಟ್ರೀಯ ಹೆದ್ದಾರಿ 63ರಲ್ಲಿ ಹುಬ್ಬಳ್ಳಿ ಕಡೆಯಿಂದ ಅಂಕೋಲಾ ಕಡೆಗೆ ಅತಿ ವೇಗ ಹಾಗೂ ನಿರ್ಲಕ್ಷ್ಯತನದಿಂದ ಚಲಾಯಿಸಿಕೊಂಡು ಹೋಗುತ್ತಿರುವಾಗ ಚಿನ್ನಾಪುರ ಕ್ರಾಸ್ ಸಮೀಪ ಎದುರಿನಿಂದ ಅಂಕೋಲಾ ಕಡೆಯಿಂದ ಹುಬ್ಬಳ್ಳಿ ಕಡೆಗೆ ಬರುತ್ತಿದ್ದ ಲಾರಿಗೆ ಢಿಕ್ಕಿಹೊಡೆದ ಪರಿಣಾಮ ಈ ಅಪಘಾತ ಸಂಭವಿಸಿದೆ.

300x250 AD

ಈ ಅಪಘಾತದಲ್ಲಿ  ಮತ್ತೊಂದು ಲಾರಿ ಚಾಲಕ ಬಾಗಲಕೋಟೆಯ ಯಲ್ಲಪ್ಪಾ ಶಿವರಾಯಪ್ಪಾ ಹಲಗಲಿ ಎಂಬಾತನ ಮೊಣಕಾಲಿಗೆ ಗಾಯವಾಗಿದೆ. ಎರಡೂ ಲಾರಿಗಳು ಜಕಂಗೊಂಡಿದ್ದು, ಈ ಕುರಿತು ಯಲ್ಲಾಪುರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Share This
300x250 AD
300x250 AD
300x250 AD
Back to top