Slide
Slide
Slide
previous arrow
next arrow

ವಿದ್ಯುತ್ ಗುತ್ತಿಗೆದಾರರ ಸಂಘದಿಂದ ನೂತನ ವರ್ಷದ ಕ್ಯಾಲೆಂಡರ್ ಬಿಡುಗಡೆ

300x250 AD

ಶಿರಸಿ: ಕರ್ನಾಟಕ ರಾಜ್ಯ ಅನುಮತಿ ಪಡೆದ ವಿದ್ಯುತ್ ಗುತ್ತಿಗೆದಾರರ ಸಂಘ (ರಿ) ಬೆಂಗಳೂರು ಇದರ 2023ರ ನೂತನ ವರ್ಷದ ಕ್ಯಾಲೆಂಡರನ್ನು ಬಿಡುಗಡೆಗೊಳಿಸಲಾಯಿತು.
ಈ ಸಂದರ್ಭದಲ್ಲಿ ಕನ್ನಡ ಕ್ರಿಯಾ ಸಮಿತಿಯ ಅಧ್ಯಕ್ಷರಾದ ವೇಣುಗೋಪಾಲ ಮದ್ಗುಣಿ ಮಾತನಾಡಿ, ಈ ವರ್ಷ ಸಂಘ ಶತಮಾನೋತ್ಸವ ಆಚರಿಸುತ್ತಿದ್ದು, ಈ ಕುರಿತು ಬೆಂಗಳೂರಿನ ಅರಮನೆ ಮೈದಾನದಲ್ಲಿ ಶತಮಾನೋತ್ಸವ ಕಾರ್ಯಕ್ರಮ ನಡೆಯಲಿದ್ದು, ಹಿರಿಯ ಗುತ್ತಿಗೆದಾರರಿಗೆ ಹಾಗೂ ಗುತ್ತಿಗೆದಾರರ ಮಕ್ಕಳಿಗೆ ಪ್ರತಿಭಾ ಪುರಸ್ಕಾರ ಹಮ್ಮಿಕೊಂಡಿದೆ.  ರಾಜ್ಯದ 30 ಜಿಲ್ಲೆ ಹಾಗೂ ಬೆಂಗಳೂರಿನ 35 ಉಪಸಮಿತಿಯಲ್ಲಿ  ಶುಕ್ರವಾರ ಬೆಂಗಳೂರಿನ ಕೇಂದ್ರ ಸಮಿತಿಯಲ್ಲಿ ಹಾಗೂ ಜಿಲ್ಲಾ ಕೇಂದ್ರದಲ್ಲಿ ಕ್ಯಾಲೆಂಡರ್ ಬಿಡುಗಡೆಗೊಳಿಸಲಾಯಿತೆಂದರು.

ಅದರಂತೆ ಕರ್ನಾಟಕ ರಾಜ್ಯ ಅನುಮತಿ ಪಡೆದ ವಿದ್ಯುತ್ ಗುತ್ತಿಗೆದಾರರರ ಸಂಘ ಉತ್ತರ ಕನ್ನಡ ಜಿಲ್ಲೆ ಸಮಿತಿಯವತಿಯಿಂದ ಶಿರಸಿಯಲ್ಲಿ ಬಿಡುಗಡೆಗೊಳಿಸಲಾಯಿತು. ಕೇಂದ್ರ ಸಮಿತಿಯ ಸದಸ್ಯರಾದ ಸಿದ್ದಾರ್ಥ ನಾಯ್ಕ, ಶತಮಾನೋತ್ಸವ ಸಮಿತಿಯ ವೈಸ್  ಚೆರಮೇನ್ ಪ್ರದೀಪ ನಾಯ್ಕ, ಡೈರಿ ಸಮಿತಿಯ ಜೇಮ್ಸ್ ರೋಡ್ರೀಗ್ರಸ್, ಉತ್ತರ ಕನ್ನಡ ಜಿಲ್ಲಾಧ್ಯಕ್ಷ ಮೋಹನ ಮಡಿವಾಳ, ಮಂಜುನಾಥ ಹರಿಜನ, ಅನೂಪ ನೇತ್ರೇಕರ, ಜಿ.ಎನ್. ಹೆಗಡೆ, ಮಹೇಶ ನಾಯ್ಕ, ಪ್ರಶಾಂತ ನಾಯ್ಕ, ಯೋಗೇಶ ಗೌಡ, ವಿವೇಕ ಭಟ್ ಮುಂತಾದವರಿದ್ದರು.

300x250 AD
Share This
300x250 AD
300x250 AD
300x250 AD
Back to top