• Slide
    Slide
    Slide
    previous arrow
    next arrow
  • ವಿಭೂತಿ ಫಾಲ್ಸ್’ನಲ್ಲಿ ಪ್ರವಾಸಕ್ಕೆಂದು ಬಂದಿದ್ದ ಯುವಕ ನೀರುಪಾಲು

    300x250 AD

    ಅಂಕೋಲಾ: ವಿಭೂತಿ ಫಾಲ್ಸ್ ಗೆಂದು ಬಂದಿದ್ದ ಪ್ರವಾಸಿಗನೋರ್ವ ನೀರು ಪಾಲಾದ ಘಟನೆ  ನಡೆದಿದೆ.  ಹೈದರಾಬಾದ್ ಮೂಲದ ಬೆಂಗಳೂರಿನ ಖಾಸಗಿ ಕಂಪನಿಯೊಂದರಲ್ಲಿ ಉದ್ಯೋಗದಲ್ಲಿದ್ದ ಸುಮಾರು 10 ಮಂದಿ ಜೊತೆಯಾಗಿ ಖಾಸಗಿ ಟೂರಿಸ್ಟ್ ಬಾಡಿಗೆ ವಾಹನದ ಮೂಲಕ ಗೋಕರ್ಣ, ಮುರುಡೇಶ್ವರ ಭಾಗಗಳಿಗೆ ಪ್ರವಾಸ ಕೈಗೊಂಡಿದ್ದು, ದಾರಿ ಮಧ್ಯೆ ಮೊದಲು ವಿಭೂತಿ ಪಾಲ್ಸ್ ಗೆ ತೆರಳಿದ್ದರು.

    ವಿಭೂತಿ ಫಾಲ್ಸ್ ಸೊಬಗು ಸವಿಯುತ್ತಿರುವ ನಡುವೆಯೇ ಆಕಸ್ಮಿಕವಾಗಿ ಶ್ಯಾಮ ಕನಕಲ್ (23) ಎಂಬಾತ ಆಯತಪ್ಪಿ ನೀರುಪಾಲಾಗಿದ್ದಾನೆ. ನೀರಿನಲ್ಲಿ ಕಣ್ಮರೆಯಾದಾತನನ್ನು ಆತಂಕದ ನಡುವೆಯೂ ಆತನ ಜೊತೆಗಿದ್ದವರು ಮತ್ತಿತರ ಪ್ರವಾಸಿಗರು ಹಾಗೂ ಸ್ಥಳೀಯರು ಶೋಧ ಕಾರ್ಯ ನಡೆಸಿ ಆತನನ್ನು ನೀರಿನಿಂದ ಮೇಲೆತ್ತಿದ್ದಾರೆ.
    ದುರದೃಷ್ಟವಶಾತ್ ಅಷ್ಟರಲ್ಲೇ ಶ್ಯಾಮನ ಪ್ರಾಣಪಕ್ಷಿ ಹಾರಿಹೋದ್ದು, ಮೃತ ದೇಹವನ್ನು ಮರಣೋತ್ತರ ಪರೀಕ್ಷೆಗಾಗಿ ತಾಲೂಕಾ ಸರಕಾರಿ ಆಸ್ಪತ್ರೆ ಶವಾಗಾರದಲ್ಲಿ ಇಡಲಾಗಿದ್ದು, ಪೋಲೀಸ್ ಪ್ರಕರಣ ದಾಖಲಾದ ಬಳಿಕ ಹೆಚ್ಚಿನ ಮಾಹಿತಿಗಳು ತಿಳಿದು ಬರಬೇಕಿದೆ.

    300x250 AD
    Share This
    300x250 AD
    300x250 AD
    300x250 AD
    Leaderboard Ad
    Back to top