• Slide
  Slide
  Slide
  Slide
  previous arrow
  next arrow
 • ದೇಶಪಾಂಡೆಗೆ ಅತ್ಯುತ್ತಮ ಶಾಸಕ ಪ್ರಶಸ್ತಿ: ಜನಶಕ್ತಿ ವೇದಿಕೆ ಅಭಿನಂದನೆ

  300x250 AD

  ಕಾರವಾರ: ರಾಜ್ಯ ವಿಧಾನಸಭೆಗೆ ಎಂಟು ಬಾರಿ ಆಯ್ಕೆಯಾಗಿ, 2022ನೇ ಸಾಲಿನ ಅತ್ಯುತ್ತಮ ಶಾಸಕ ಎಂಬ ಪ್ರಶಸ್ತಿಯ ಗೌರವಕ್ಕೆ ಪಾತ್ರರಾದ ಉತ್ತರ ಕನ್ನಡ ಜಿಲ್ಲೆಯ ಮಾಜಿ ಸಚಿವ ಹಾಗೂ ಹಾಲಿ ಹಳಿಯಾಳ- ದಾಂಡೇಲಿ- ಜೊಯಿಡಾ ಶಾಸಕ ಆರ್.ವಿ.ದೇಶಪಾಂಡೆ ಅವರಿಗೆ ಜಿಲ್ಲಾ ಜನಶಕ್ತಿ ವೇದಿಕೆ ಅಭಿನಂದಿಸಿದೆ.
  75ರ ಹರೆಯದ ದೇಶಪಾಂಡೆಯವರು ಎಂಟು ಬಾರಿ ಶಾಸಕರಾಗಿ, ಕೈಗಾರಿಕೆ, ಕಂದಾಯ, ಪ್ರವಾಸೋದ್ಯಮ, ಸಹಕಾರಿ, ನಗರಾಭಿವೃದ್ಧಿ ಮುಂತಾದ ಖಾತೆಗಳನ್ನ ಸಮರ್ಥವಾಗಿ ನಿರ್ವಹಿಸಿದವರು. ರಾಜ್ಯದ ಇತರ ಶಾಸಕರುಗಳಿಗೆ ಹೋಲಿಸಿದರೆ ಅತಿ ಹೆಚ್ಚು ರಾಜಕೀಯದ ಅನುಭವ ಹೊಂದಿರುವ ಹಾಗೂ ರಾಜಕಾರಣದ ಮೌಲ್ಯಗಳನ್ನ ಉಳಿಸಿಕೊಂಡವರಲ್ಲಿ ಓರ್ವರು. ಬಹುಪಾಲು ಅರಣ್ಯ ಪ್ರದೇಶ ಹೊಂದಿರುವ ಉತ್ತರ ಕನ್ನಡದಲ್ಲಿ ಯಾವುದೇ ಅಭಿವೃದ್ಧಿ ಚಟುವಟಿಕೆಗಳಿಗೂ ಪರಿಸರ ವಿಚಾರ ಅಡ್ಡಿ ಬರುತ್ತಿದ್ದ ವೇಳೆಯೂ ಅವುಗಳನ್ನ ನಿವಾರಿಸಿಕೊಂಡು ಹಲವಾರು ಯೋಜನೆಗಳನ್ನ ಜಿಲ್ಲೆಗೆ ತಂದ ಶ್ರೇಯಸ್ಸು ಅವರದ್ದು ಎಂದಿದ್ದಾರೆ.
  ಕೈಗಾರಿಕೆ ಮತ್ತು ಪ್ರವಾಸೋದ್ಯಮ ಸಚಿವರಾಗಿದ್ದ ಸಂದರ್ಭದಲ್ಲಿ ಸಾಕಷ್ಟು ಖಾಸಗಿ ಕಂಪನಿಗಳ ಸಿಎಸ್‌ಆರ್ ನಿಧಿಗಳನ್ನ ಸಮರ್ಪಕವಾಗಿ ಬಳಕೆ ಮಾಡಿ ರಾಜ್ಯದ ಅಭಿವೃದ್ಧಿಗೆ ಬಹುದೊಡ್ಡ ಕೊಡುಗೆ ನೀಡಿದವರು ದೇಶಪಾಂಡೆ. ಅದೆಷ್ಟೋ ಕೈಗಾರಿಕೆ, ಕಂಪನಿಗಳು ರಾಜ್ಯದಲ್ಲಿ ಹೂಡಿಕೆ ಮಾಡಿ, ಬೃಹತ್ ಉದ್ಯುಮಗಳಾಗಿ ಬೆಳೆಯಲು, ಆ ಮೂಲಕ ಉದ್ಯೋಗ ಸೃಷ್ಟಿಯಾಗಲು ಕಾರಣರಾದವರು ಆರ್‌ವಿಡಿ. ಐಟಿ- ಬಿಟಿ ಕ್ಷೇತ್ರದಲ್ಲಿ ಬೆಂಗಳೂರು ವಿಶ್ವಪ್ರಸಿದ್ಧಿ ಪಡೆಯುವಲ್ಲಿ ದೇಶಪಾಂಡೆಯವರ ಪಾತ್ರ ಮಹತ್ವದ್ದು. ಇಂಥ ಹಿರಿಯ ಮುತ್ಸದ್ಧಿ ನಾಯಕರನ್ನ ಅತ್ಯುತ್ತಮ ಶಾಸಕ ಪ್ರಶಸ್ತಿಗೆ ಆಯ್ಕೆ ಮಾಡುವ ಮೂಲಕ ಆಯ್ಕೆ ಸಮಿತಿ ಪ್ರಶಸ್ತಿಯ ಗೌರವವನ್ನೂ ಹೆಚ್ಚಿಸಿದೆ. ದೇಶಪಾಂಡೆಯವರ ರಾಜಕೀಯ ಜೀವನ ಇನ್ನಷ್ಟು ಬೆಳೆಯಲಿ, ಈ ರಾಜ್ಯಕ್ಕೆ ಇನ್ನಷ್ಟು ಕೊಡುಗೆ ಸಿಗುವಂತಾಗಲಿ ಎಂದು ಹಾರೈಸುವುದಾಗಿ ವೇದಿಕೆಯ ಅಧ್ಯಕ್ಷ ಮಾಧವ ನಾಯಕ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

  300x250 AD
  Share This
  300x250 AD
  300x250 AD
  300x250 AD
  Back to top