• Slide
  Slide
  Slide
  Slide
  previous arrow
  next arrow
 • ಕೇರಳ: ಪಿಎಫ್‌ಐಗೆ ಸಂಬಂಧಿಸಿದ 50 ಸ್ಥಳಗಳ ಮೇಲೆ ಎನ್‌ಐಎ ದಾಳಿ

  300x250 AD

  ನವದೆಹಲಿ: ರಾಷ್ಟ್ರೀಯ ತನಿಖಾ ಸಂಸ್ಥೆ (ಎನ್‌ಐಎ)ಯು ಕೇರಳದಲ್ಲಿ ನಿಷೇಧಿತ ಸಂಘಟನೆ ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾ (ಪಿಎಫ್‌ಐ) ನಾಯಕರು ಮತ್ತು ಸಹಚರರನ್ನು ಗುರಿಯಾಗಿಸಿಕೊಂಡು ಬೃಹತ್ ಶೋಧ ಕಾರ್ಯಾಚರಣೆ ನಡೆಸುತ್ತಿದೆ.

  ರಾಜ್ಯದ 50ಕ್ಕೂ ಹೆಚ್ಚು ಸ್ಥಳಗಳಲ್ಲಿ ಶೋಧ ಕಾರ್ಯ ನಡೆಯುತ್ತಿದ್ದು, ಪಿಎಫ್‌ಐ ನಾಯಕರ  ಬೇರೆ ಯಾವುದಾದರೂ ಹೆಸರಿನಲ್ಲಿ ಮರುಸಂಘಟನಾ ಯೋಜನೆಯನ್ನು ಹಾಕಿರುವ ಹಿನ್ನೆಲೆಯಲ್ಲಿ ಈ ದಾಳಿ ನಡೆದಿದೆ ಎಂದು ವರದಿಯಾಗಿದೆ.

  ರಾಜ್ಯಾದ್ಯಂತ ಪ್ರಮುಖವಾಗಿ ಎರ್ನಾಕುಲಂ, ತಿರುವನಂತಪುರಂ, ಮಲಪ್ಪುರಂ, ಆಲಪ್ಪುಳ, ಕೋಝಿಕ್ಕೋಡ್ ಮತ್ತು ಪತ್ತನಂತಿಟ್ಟ ಜಿಲ್ಲೆಗಳಲ್ಲಿ ವಿವಿಧೆಡೆ ದಾಳಿ ನಡೆಯುತ್ತಿದೆ.

  300x250 AD

  ಪಿಎಫ್‌ಐ ಕೇರಳ ಮೂಲದ ಮೂಲಭೂತವಾದಿ ಸಂಘಟನೆಯಾಗಿದ್ದು, ಇದು ದೇಶದ ವಿವಿಧ ಭಾಗಗಳಲ್ಲಿ ಹರಡಿತು, ಈ ವರ್ಷದ ಸೆಪ್ಟೆಂಬರ್‌ನಲ್ಲಿ ಕೇಂದ್ರ ಸರ್ಕಾರ ಇದಕ್ಕೆ ನಿಷೇಧ ಹೇರಿದೆ.

  Share This
  300x250 AD
  300x250 AD
  300x250 AD
  Back to top