• first
  Slide
  Slide
  previous arrow
  next arrow
 • ಕ್ರೀಡೆಯಲ್ಲಿ ತೊಡಗಿಕೊಂಡರೆ ಆರೋಗ್ಯದ ಸ್ಥಿರತೆ ತಿಳಿಯುತ್ತದೆ: ನ್ಯಾ.ತಿಮ್ಮಯ್ಯ

  300x250 AD

  ಸಿದ್ದಾಪುರ: ದಿನನಿತ್ಯ ಕಚೇರಿಯಲ್ಲಿ ಕುಳಿತು ಕರ್ತವ್ಯ ನಿರ್ವಹಿಸುವವರು ಕ್ರೀಡೆಯಲ್ಲಿ ತೊಡಗಿಕೊಂಡಾಗ ನಮ್ಮ ದೈಹಿಕ ಸಾಮರ್ಥ್ಯ ಹಾಗೂ ಅರೋಗ್ಯದ ಸ್ಥಿರತೆ ಬಗ್ಗೆ ತಿಳಿಯುತ್ತದೆ ಎಂದು ಜೆ.ಎಂ.ಎಫ್.ಸಿ ನ್ಯಾಯಾಲಯದ ನ್ಯಾಯಾಧೀಶ ತಿಮ್ಮಯ್ಯ ಜಿ. ಹೇಳಿದರು.
  ಅವರು ತಾಲೂಕಿನ ಕಡಕೇರಿ ಕಾನಳ್ಳಿಯ ಸುಭಾಷಚಂದ್ರ ಬೋಸ್ ಕ್ರೀಡಾಂಗಣದಲ್ಲಿ ತಾಲೂಕಾ ಕಾರ್ಯನಿರತ ಪತ್ರಕರ್ತರ ಸಂಘದ ಆಯೋಜನೆಯಲ್ಲಿ ನಡೆದ ತೃತೀಯ ವರ್ಷದ ವಿವಿಧ ಇಲಾಖೆಗಳ ನಡುವಿನ ಸೌಹಾರ್ದ ಕ್ರಿಕೆಟ್ ಪಂದ್ಯಾವಳಿಯ ಸಮಾರೋಪ ಸಮಾರಂಭದಲ್ಲಿ ಬಹುಮಾನ ವಿತರಿಸಿ ಮಾತನಾಡಿದರು.
  ತಾಲೂಕ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಅಧ್ಯಕ್ಷ ಸತೀಶ್ ಹೆಗಡೆ ಮಾತನಾಡಿ, ಪತ್ರಕರ್ತ ಸಂಘದವರು ಆಯೋಜಿಸಿದ ಕ್ರಿಕೆಟ್ ಪಂದ್ಯಾವಳಿ ಯಶಸ್ವಿ ಮುನ್ನಡೆಯುತ್ತಿದ್ದು, ಮುಂದಿನ ದಿನದಲ್ಲಿ ಇನ್ನು ಹೆಚ್ಚು ಇಲಾಖೆಗಳಿಗೆ ಅವಕಾಶ ಕಲ್ಪಿಸಿ, ಎಲ್ಲರು ಸೇರುವಂತಾಗಲಿ ಎಂದರು.
  ಬೇಡ್ಕಣಿ ಗ್ರಾಮ ಪಂಚಾಯತಿ ಸದಸ್ಯ ಕೃಷ್ಣಮೂರ್ತಿ ಮಡಿವಾಳ ಕಡಕೇರಿ ಮಾತನಾಡಿದರು. ಹೆಸ್ಕಾಂನ ದಿಲೀಪ್, ಇನ್ಸ್ಪೆಕ್ಟರ್ ಕುಮಾರ್, ಪಿಎಸ್‌ಐ ಮಲ್ಲಿಕಾರ್ಜುನ ಕೊರಣಿ ಉಪಸ್ಥಿತರಿದ್ದರು. ಪತ್ರಕರ್ತರ ಸಂಘದ ಅಧ್ಯಕ್ಷ ಗಂಗಾಧರ್ ಕೊಳಗಿ ಅಧ್ಯಕ್ಷತೆ ವಹಿಸಿದ್ದರು. ಎರಡು ದಿನಗಳು ನಡೆದ ಪಂದ್ಯಾವಳಿಯಲ್ಲಿ ಹೆಸ್ಕಾಂ ಪ್ರಥಮ, ಪೊಲೀಸ್ ದ್ವಿತೀಯ ಸ್ಥಾನ ಪಡೆದವು. ತಾಲೂಕ ಪತ್ರಕರ್ತರ ಸಂಗದ ಕಾರ್ಯದರ್ಶಿ ರಮೇಶ ಹಾರ್ಸಿಮನೆ ಸ್ವಾಗತಿಸಿದರು, ಪತ್ರಕರ್ತರಾದ ನಾಗರಾಜ ನಾಯ್ಕ ಮಾಳ್ಕೋಡ ವಂದಿಸಿದರು, ಸುರೇಶ ಮಡಿವಾಳ ಕಡಕೇರಿ ನಿರೂಪಿಸಿದರು.

  300x250 AD
  Share This
  300x250 AD
  300x250 AD
  300x250 AD
  Back to top