ಅಂಕೋಲಾ: ಕಳೆದ 11 ವರ್ಷಗಳಿಂದ ಸಮಾಜಮುಖಿ ಕಾರ್ಯನಿರ್ವಹಿಸುತ್ತಿರುವ ಸಮಾಜಶಾಸ್ತ್ರ ಬೋಧಕರ ಸಂಘಕ್ಕೆ ಜಿಲ್ಲಾಧ್ಯಕ್ಷರಾಗಿ ಶಿರಸಿಯ ಎಂ.ಇ.ಎಸ್ ಕಾಲೇಜಿನ ಉಪನ್ಯಾಸಕ ವಿನಾಯಕ ಹೆಗಡೆ ಆಯ್ಕೆಯಾದರು.
ಉಪಧ್ಯಾಕ್ಷರಾಗಿ ನೆಲ್ಲಿಕೇರಿಯ ಸರ್ಕಾರಿ ಪದವಿಪೂರ್ವ ಕಾಲೇಜಿನ ಲತಾ ಹೆಬ್ಬಾರ್, ಕಾರ್ಯದರ್ಶಿಯಾಗಿ ಚಿತ್ತಾಕುಲ ಬಾಪೂಜಿ ವಿದ್ಯಾಲಯದ ಡಿ.ಯು.ನದಾಫ್, ಖಜಾಂಚಿಯಾಗಿ ಅಂಕೋಲಾ ಪಿಎಂ ಸಂಯುಕ್ತ ಪದವಿಪೂರ್ವ ಕಾಲೇಜಿನ ಶ್ರೀನಿವಾಸ ಯು.ಕೆ., ಪದಾಧಿಕಾರಿಗಳಾಗಿ ಹುಲೇಕಲ್ಲಿನ ಡಿ.ಆರ್.ಹೆಗಡೆ, ಯಲ್ಲಾಪುರದ ಮಂಚಿಕೇರಿಯ ಎಂ.ವಿ.ಹೆಗಡೆ. ಭಟ್ಕಳದ ಶಿರಾಲಿಯ ಟಿ.ಬಿ.ಮಡಿವಾಳ, ಹಳದಿಪುರದ ಸಂತೋಷ ಜಿ.ಲಮಾಣಿ, ಹೊನ್ನಾವರದ ಮಮತ ನಾಯ್ಕ, ಕಡವಾಡದ ವಿಜಯ ಗಾಂವಕರ್, ಜೊಯಿಡಾದ ಪ್ರಕಾಶ ತಗಡಿನಮನೆ, ಹಳಿಯಾಳದ ಜಿ.ಆರ್.ಹೆಗಡೆ, ಮುಂಡಗೋಡದ ವಿಜಯಾ ಜಿ., ಸಿದ್ದಾಪುರದ ಲಲಿತಾ ಎನ್.ಭಟ್ಟ ಹಾಗೂ ದಾಂಡೇಲಿಯ ಸುಮಂಗಲಾ ನಾಯ್ಕ ಆಯ್ಕೆಯಾಗಿದ್ದಾರೆ.
ಗೌರವಾಧ್ಯಕ್ಷರಾಗಿ ನಿವೃತ್ತ ಪ್ರಾಚಾರ್ಯರುಗಳಾದ ಡಿ.ಕೆ.ನಾಯ್ಕ, ವಿ.ಪಿ.ನಾಯ್ಕ ಹಾಗೂ ದಿಲೀಪಕುಮಾರ ನಾಯ್ಕ ಆಯ್ಕೆಯಾದರು. ಅಂಕೋಲಾದ ಪಿಎಂ ಸಂಯುಕ್ತ ಪದವಿಪೂರ್ವ ಕಾಲೇಜಿನಲ್ಲಿ ನಡೆದ 11ನೇ ವಾರ್ಷಿಕ ಮಹಾಸಭೆಯಲ್ಲಿ ಈ ನಿರ್ಣಯ ಕೈಗೊಳ್ಳಲಾಗಿದೆ.