Slide
Slide
Slide
previous arrow
next arrow

ಒಲಿದ ಕಲೆಯನ್ನು ಕಾಪಾಡಿ, ಬೆಳೆಸುವುದು ಮುಖ್ಯ: ಡಾ. ಗಣಪತಿ ಭಟ್

300x250 AD

ನ್ನಾವರ: ಪಟ್ಟಣದ ಲಯನ್ಸ್ ಸಭಾಭವನದಲ್ಲಿ ನಾಟ್ಯಾಂಜಲಿ ನೃತ್ಯ ಕಲಾ ಕೇಂದ್ರದಿoದ ಹೆಜ್ಜೆ ಗೆಜ್ಜೆ ನಾದ ಕಾರ್ಯಕ್ರಮ ನಡೆಯಿತು.
ಕಾರ್ಯಕ್ರಮ ಉದ್ಘಾಟಿಸಿದ ಸಂಸ್ಕೃತ ಸಂಗೀತ ವಿದ್ವಾಂಸ ಡಾ.ಕೆ.ಗಣಪತಿ ಭಟ್ ಮಾತನಾಡಿ, ಕಲೆ ಮನುಷ್ಯನಿಗೆ ಸುಲಭವಾಗಿ ಒಲಿಯುವಂಥದ್ದಲ್ಲ. ಅದಕ್ಕೆ ಪರಿಶ್ರಮ ಅಗತ್ಯ. ಒಲಿದು ಬಂದಿರುವ ಕಲೆಯನ್ನು ಮುಂದುವರಿಸಿಕೊoಡು ಹೋಗುವುದು ಕೂಡಾ ಅಷ್ಟೇ ಮುಖ್ಯ ಎಂಬುದನ್ನು ವಿದ್ಯಾರ್ಥಿಗಳು ಅರಿತು ಸತತವಾಗಿ ಅದನ್ನು ಬೆಳೆಸಿಕೊಂಡು ಹೋಗಬೇಕಿದೆ ಎಂದರು.
ಪತ್ರಕರ್ತ ಎಚ್.ಎಲ್.ನಗರೆ ಮಾತನಾಡಿ, ಇಂದಿನ ಆಧುನಿಕ ಯುಗದಲ್ಲಿ, ಪಾಶ್ಚಿಮಾತ್ಯದ ಆಡಂಬರದಲ್ಲಿ ಸಂಗೀತ, ಭರತ ನಾಟ್ಯ, ಯಕ್ಷಗಾನ ಭಾರತೀಯ ಸಂಸ್ಕೃತಿಯನ್ನು ಉಳಿಸಿಕೊಂಡು ಹೋಗುತ್ತಿದೆ ಎಂದು ಸಂಘಟನೆಯ ಕಾರ್ಯಕ್ಕೆ ಮೆಚ್ಚುಗೆ ವ್ಯಕ್ತಪಡಿಸಿದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಶಿರಸಿ ನಾಟ್ಯಾಂಜಲಿ ನೃತ್ಯ ಕಲಾ ಕೇಂದ್ರದ ಪ್ರದೀಪ ಭಟ್ಟ ವಹಿಸಿದ್ದರು. ವೇದಿಕೆಯಲ್ಲಿ ಲಯನ್ಸ್ ಸದಸ್ಯ ಜೀವೋತ್ತಮ ನಾಯಕ, ಸಂಘಟನೆಯ ಪದಾಧಿಕಾರಿಗಳು ಉಪಸ್ಥಿತರಿದ್ದರು. ಶಿಕ್ಷಕ ರಾಘವೇಂದ್ರ ಹೆಗಡೆ ಸ್ವಾಗತಿಸಿದರು. ರಾಧಾರಾಣಿ ಕಾರ್ಯಕ್ರಮ ನಿರ್ವಹಿಸಿದರು.
ಕಾರ್ಯಕ್ರಮದ ನಂತರ ನಾಟ್ಯಾಂಜಲಿ ನೃತ್ಯ ಕಲಾ ಕೇಂದ್ರದ ವಿದ್ಯಾರ್ಥಿಗಳು ಭರತನಾಟ್ಯ ಪ್ರದರ್ಶಿಸಿದರು. ನೃತ್ಯ ಗುರು ವಿದುಷಿ ವಿನುತಾ ಹೆಗಡೆಯವರು ಪ್ರದರ್ಶಿಸಿದ ಪೂತನಿ ಮೋಕ್ಷ ಎಲ್ಲರ ಮೆಚ್ಚುಗೆಗಳಿಸಿತು. ಅಂತಿಮವಾಗಿ ಶ್ರೀಕೃಷ್ಣ ಲೀಲಾಮೃತ ಭರತನಾಟ್ಯ ಪ್ರದರ್ಶನ ಕಲಾಭಿಮಾನಿಗಳ ಮೆಚ್ಚುಗೆಗೆ ಪಾತ್ರವಾಯಿತು

300x250 AD
Share This
300x250 AD
300x250 AD
300x250 AD
Back to top