ಹೊನ್ನಾವರ: ಹೊಸಪೇಟೆಯಲ್ಲಿ ನಟ ದರ್ಶನ್ ಮೇಲೆ ಚಪ್ಪಲಿ ಎಸೆದು ಅವಮಾನ ಮಾಡಿದ ಕಿಡಿಗೇಡಿಗಳನ್ನು ಕೂಡಲೇ ಬಂಧಿಸುವoತೆ ತಹಶೀಲ್ದಾರ್ ಮೂಲಕ ಅಖಿಲ ಕರ್ನಾಟಕ ದರ್ಶನ್ ತೂಗುದೀಪ್ ಅಭಿಮಾನಿ ಬಳಗ ಮತ್ತು ಕರ್ನಾಟಕ ರಕ್ಷಣಾ ವೇದಿಕೆ ವತಿಯಿಂದ ಸರ್ಕಾರಕ್ಕೆ ಮನವಿ ಸಲ್ಲಿಸಿದೆ.
ಈ ಸಂದರ್ಭದಲ್ಲಿ ಕರವೇ ತಾಲೂಕು ಅಧ್ಯಕ್ಷ ಮಂಜುನಾಥ್ ಗೌಡ, ದರ್ಶನ್ ಅಭಿಮಾನಿ ಸಂಘದ ಅಧ್ಯಕ್ಷ ವಿನು ನಾಯ್ಕ, ಗಣೇಶ್ ಮೇಸ್ತ, ಕರವೇ ವಿದ್ಯಾರ್ಥಿ ಘಟಕದ ಅಧ್ಯಕ್ಷ ನಿಖಿಲ್ ನಾಯ್ಕ, ತರುಣ್ ನಾಯ್ಕ, ಗಣೇಶ್ ಗೌಡ ಗುಣವಂತೆ, ಅಭಿಷೇಕ್ ನಾಯ್ಕ, ದರ್ಶನ್ ಅಭಿಮಾನಿಗಳು, ಕರವೇ ಸದಸ್ಯರು ಹಾಜರಿದ್ದರು.
ನಟ ದರ್ಶನ್‌ಗೆ ಅವಮಾನ ಮಾಡಿದವರ ಬಂಧನಕ್ಕೆ ಆಗ್ರಹಿಸಿ ಮನವಿ ಸಲ್ಲಿಕೆ
