• first
    Slide
    Slide
    previous arrow
    next arrow
  • ಹಾವೇರಿಯ ಸಾಹಿತ್ಯ ಸಮ್ಮೇಳನದ ಕವಿಗೋಷ್ಟಿಗೆ ನರೇಶ ಆಯ್ಕೆ

    300x250 AD

    ದಾಂಡೇಲಿ: ಹಾವೇರಿಯಲ್ಲಿ ನಡೆಯಲಿರುವ ಅಖಿಲ ಭಾರತ 86ನೇ ಕನ್ನಡ ಸಾಹಿತ್ಯ ಸಮ್ಮೇಳನದ ಕವಿಗೋಷ್ಟಿಗೆ ನಗರದ ಕವಿ ಹಾಗೂ ವೆಸ್ಟ್ ಕೋಸ್ಟ್ ಕಾಗದ ಕಾರ್ಖಾನೆಯ ಉದ್ಯೋಗಿ ನರೇಶ ನಾಯ್ಕ ಅವರು ಆಯ್ಕೆಯಾಗಿದ್ದಾರೆ.
    ಈಗಾಗಲೆ ಒಂದು ಕವನ ಸಂಕಲನ ಮತ್ತು ಒಂದು ಕಥಾ ಸಂಕಲನವನ್ನು ರಚಿಸಿರುವ ನರೇಶ್ ನಾಯ್ಕ ಅವರ ಕವನ ಸಂಕಲನಕ್ಕೆ ಕಸಾಪ ದತ್ತಿ ನಿಧಿ ಪ್ರಶಸ್ತಿ ಹಾಗೂ ಕಥಾ ಸಂಕಲನಕ್ಕೆ ಕನ್ನಡ ಪುಸ್ತಕ ಪ್ರಾಧಿಕಾರದಿಂದ ಬಹುಮಾನ ದೊರೆತಿರುವುದನ್ನು ಇಲ್ಲಿ ಸ್ಮರಿಸಿಕೊಳ್ಳಬಹುದು.
    ನರೇಶ್ ನಾಯ್ಕ ಅವೆರು ಬರೆದ ಸಾಕಷ್ಟು ಕವಿತೆಗಳು, ಕಥೆಗಳು ರಾಜ್ಯದ ವಿವಿಧ ದಿನಪತ್ರಿಕೆಗಳಲ್ಲಿ ಪ್ರಕಟಗೊಂಡಿರುತ್ತದೆ. ಇದೇ ಬರುವ ಜನವರಿ 6, 7, 8ರಂದು ಹಾವೇರಿಯಲ್ಲಿ ನಡೆಯಲಿರುವ ಅಖಿಲ ಭಾರತ 86ನೇ ಕನ್ನಡ ಸಾಹಿತ್ಯ ಸಮ್ಮೇಳನದ ಕವಿಗೋಷ್ಟಿಗೆ ಆಯ್ಕೆಯಾದ ನರೇಶ್ ನಾಯ್ಕ ಅವರನ್ನು ನಗರದ ಗಣ್ಯರನೇಕರು ಅಭಿನಂದಿಸಿದ್ದಾರೆ.

    300x250 AD
    Share This
    300x250 AD
    300x250 AD
    300x250 AD
    Back to top